logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಕುರಿತ
ಮೊಳಕೆವೊಡೆದು ಚಿಗುರು ಬಿಟ್ಟ (ಕೋರಕಿತ ಅಂಕುರಿತ ಪಲ್ಲವಿತ ಮುಕುಳಿತ ವಿಸ್ತಾರಿತ ರಮ್ಯಾಶೋಕ ಮಹೀರುಹಮುಮಂ ಅಭವನ ಅಂಗರುಚಿ ಪುದಿದಿರ್ಕುಂ : ಆದಿಪು, ೯. ೧೧೧)

ಅಂಕುರಿಸು
ಮೊಳಕೆಯೊಡೆ (ಇಳೆಯೊಳಂದಂಕುರಿಸಿ ಹರಿತ್ಕುಳದೊಳ್ ವರ್ಧಿಸಿಯೆ ನೀಳ್ದು: ಗದಾಯು, ೧೦. ೭); ಉಂಟಾಗು (ತೆಂಬೆಲರಲೆಪದ ಪೂಲತೆಯೆಂಬಿನಮಂಕುರಿಸೆ ಪುಳಕಂ: ಶಾಂತಿಪು, ೧೦. ೩); ನವಿರೇಳು (ಬೇಟದೊಳ್ ಬಿರಿವೊಡಲೊಯ್ಯನಂಕುರಿಸೆ: ಪಂಪಭಾ, ೫. ೧೪)

ಅಂಕುಶ
ಆನೆಯನ್ನು ನಿಯಂತ್ರಿಸುವ ಆಯುಧ, ಸೃಣಿ (ಅಂಕುಶಮಕ್ಕುಂ ಸೃಣಿ: ಅಭಿಧಾವ, ೧. ೧೪. ೩೬)

ಅಂಕುಸ
ಅಂಕುಶ (ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ: ಪಂಪಭಾ, ೪. ೩೦); ನಿಯಾಮಕ (ಪಾಣ್ಬರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚೆಗಂಡಂ: ಪಂಪಭಾ, ೧. ೧೪೮ ವ)

ಅಂಕೂರ
ಅಂಕುರ (ಅಂಕುರಂ ಅಂಕೂರಂ: ಅಭಿಧಾವ, ೧. ೭. ೪)

ಅಂಕುಶಗತಚಾರಣ
ಅಂಕುಶದಿಂದ ಆನೆಯನ್ನು ನಡೆಸು (ಅಂಕುಶಗತ ವಾರಣಯಾತಮೆಂಬುದದು; ಅಭಿಧಾನ, ೧. ೩. ೩೭)

ಅಂಕುಸಮಿಡು
ಅಡ್ಡಿಮಾಡು (ಆರಂಕುಸಮಿಟ್ಟೊಡಂ ನೆನವುದೆನ್ನ ಮನಂ ವನವಾಸಿ ದೇಶಮಂ: ಪಂಪಭಾ, ೪. ೩೦)

ಅಂಕೆ
ಅಭಿಪ್ರಾಯ (ಮಡಸೋಂಕಿಂ ಮನದಂಕೆಯಂ ತಿಳಿದು: ಕುಸುಮಾಕಾ, ೮. ೭೬)

ಅಂಕೆಗೆಯ್
ಗುರುತುಮಾಡು (ಸರಳತಳಾಂಗುಳಿತ್ರಿತಯದಿಂ ಫಳವಕ್ತ್ರದೊಳಂಕೆಗೆಯ್ದು: ಕುಸುಮಾಕಾ, ೯. ೨೬)

ಅಂಗ
ದೇಹ (ದೇವ ಮತ್ ನಯನದೊಳ್ ನಯನಂ ಕರದೊಳ್ ಕರಾಬ್ಜಂ ಅಂಗದೊಳ್ ಎಸೆವ ಅಂಗಯಷ್ಟಿ: ಕಾದಂಸಂ, ೬. ೪); ಪ್ರಕಾರ (ಆ ವಜ್ರಪಾತದಿಂ ಮೇಲೇವೇೞ್ದಪೆಂ ಅರಿದು ಪೇೞಲುಂ ಕೇಳಲುಂ ಇನ್ನುಂ ಆವ ಅಂಗಂ ಎನಲ್ಕೆ ಆಶ್ಚರ್ಯಮಾವಹಂ ಒಂದಾದುದು ಆಗಳ್ ಅದನುಸಿರ್ದಪ್ಪೆಂ: ಕಾದಂಸಂ, ೪. ೧೦೨); ಒಂದು ದೇಶದ ಹೆಸರು (ನೀನಿಲ್ಲದೆ ಇವೆಲ್ಲಂ ಒಳವೆ ಅಂಗ ಅಧಿಪತೀ: ಗದಾಯು, ೫. ೨೦); [ಜೈನ] ಜೈನಾಗಮದ ಒಂದು ವಿಭಾಗ (ಅಂತು ಜೈನದೀಕ್ಷೆಯಂ ಕೈಕೊಂಡು ಗುರುವಿನನುಮತದಿಂ ದ್ವಾದಶಾಂಗ ಚತುರ್ದಶಪೂರ್ವಂಗಳಂ ಕಲ್ತು: ಆದಿಪು, ೧೪. ೧೩೯ ವ); ದೇಹದ ಭಾಗ (ಅಂಗಿಯ ಅಂಗದೊಳೆಲ್ಲಂ ತೀವಿರ್ಪಂ ಭೂತಚತುಷ್ಟಾವಯವದಿಂ ಅನ್ಯಂ ಆತ್ಮನಂ ಕಂಡಱಯೆಂ: ಯಶೋಧಚ, ೪. ೧೭)


logo