logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಚಂಕನತ್
ಹೊಳೆಯುವ (ಅಲ್ಲಿಗೆ ದಳನ್ನೀಲಾತಸೀ ಚಂಕನತ್ ತನು ತೋಯಾಹರಣಾರ್ಥಿ ಬಂದಂ ಅಭಯಂ ಸೌಮಿತ್ರಿ ಶತ್ರುಂಜಯಂ: ಪಂಪರಾ, ೭. ೧೦೪)

ಚಂಕ್ರಮಣ
ತಿರುಗಾಟ (ಚಕಿತ ಚಂಕ್ರಮಣಸ್ಖಲಿತ ಪದಪಲ್ಲವ ಲಾವಣ್ಯರಾಗಾರ್ಚಿತ ಪದಪಥದತ್ತ ದೃಷ್ಟಿಯುಂ: ಲೀಲಾವತಿ, ೧೪. ೪೯ ವ)

ಚಂಚತ್
ಚಲಿಸುವ (ನಡೆಯೆ ತುರಗಂ ಪೊನ್ನ ಆಯೋಗಂಗಳಿಂ ಅಮರ್ದು ಅೞಯಿಂ ಪಡೆಯೆ ನೆಳೞಂ ಚಂಚತ್ ಪಿಂಛಾತಪತ್ರಮೆ ಕೂಡೆ ತಮ್ಮೊಡನೆ ಬರೆ: ಪಂಪಭಾ, ೯. ೧೦೨)

ಚಂಚರೀಕ
ದುಂಬಿ (ಸಂಚರತ್ ಚಂಚರೀಕ ಕ್ವಣನ ಜ್ಯಾಸಂಗಚಿತ್ತೋದ್ಭವಭುವನಜಯೋತ್ಪಾದನ ಪ್ರೌಢ ಸೇನಾಗ್ರಣಿ ಚೇತನಾಪ್ರೀತಿಯಂ ಪೆರ್ಚಿಸುವುದು .. .. ಸಮೀರಂ: ಮಲ್ಲಿನಾಪು, ೨. ೩೧)

ಚಂಚಲ
ಅಲುಗುವ (ಪೋಗಿನ್ನೆಲೆ ಪೋಗಲಾರ್ಪೊಡೆ ಚಂಚಲಚೇಷ್ಟಿತ ನೋೞ್ಪೆನೆಂಬುದುಂ : ಜಗನ್ನಾವಿ, ೩. ೩೭)

ಚಂಚಿತಿ
ಬೇಡಿತಿ (ಮಱವುಲ್ಲೆಯ ಕಣ್ಮಿಂಚು ಕೆದಱುವ ನೋಟದ ಚಂಚಿತಿಯಂ ವಿಪ್ರರಾಜವಧು ಕಂಡು: ಪುಣ್ಯಾಸ್ರ, ೧೨. ೩೨)

ಚಂಚು
ಹಕ್ಕಿಯ ಕೊಕ್ಕು (ಎೞಲ್ವ ಪತತ್ರಂ ಎತ್ತಿ ನಸು ನೀಡಿದ ಗೋಣ್ ತೆಱೆದ ಉದ್ಘ ಚಂಚುಮಂಡಳಂ ಅರೆಮುಚ್ಚಿದ ಅಚ್ಚಿ ಮಿಡುಕಾಡುವ ತಾಳುಗೆ: ಶಾಂತೀಶ್ವಪು, ೧೨. ೪೬)

ಚಂಚುಪುಟ
ಮುಚ್ಚಿದ ಕೊಕ್ಕು (ಪಿರಿದಪ್ಪುದೊಂದು ಶಿಲಾತಳದ ಮೇಲಿಕ್ಕಿ ನಿಜ ಚಂಚುಪುಟದಿಂ ಶತಖಂಡಂ ಮಾಡಿ ಬೆಣ್ಣೆಯಂ ತಿಂದ ಬೆಕ್ಕಿನಂತೆ ಅಱಲೀಯದೆ: ಪಂಚತಂತ್ರ, ೧೩೮ ವ)

ಚಂಚುರ
ಸುಂದರವಾದ (ಸಲೆ ನಾವ್ಯಮಾಯ್ತು ಚಂಚುರ ಮುಚುಕುಂದ ಸಂಚಯದೊಳಂ: ಚಂದ್ರಪ್ರಪು, ೭. ೬೪); ಸೊಬಗು (ಸಾರವಿಚಾರ ಚಂಚುರಂ ಅತಿಪ್ರಸರಂ ಪರಿಪಕ್ವಶಾಸ್ತ್ರಸಂಸ್ಕಾರಂ .. .. ಕವಿ ಕರ್ಣಪೂರಂ: ವರ್ಧಮಾಪು, ೧. ೨೫)

ಚಂಚುರತೆ
ಜಾಣತನ (ವಚನ ಚಮತ್ಕಾರಮಂ ಬಳಬಳಿಕೆಯ ಚಂಚುರತೆಯಂ ಹಸ್ತಚಾರಣದ ವಿಸ್ತಾರಮಂ .. .. ತೋಱುತ್ತುಮಿರೆ: ಕುಸುಮಾಕಾ, ೭. ೬೩ ವ)


logo