logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಕಕ್ಕಸಂ: ಅರ್ಧಂ
ಅದ್ದಂ, ಶಬ್ದಮದ, ೨೭೫ ವೃ)

ಕೞವೆ ಅರ್ಗ್ಗಳಂ
ಅಗ್ಗೞೆ ಅಳಿಕಾಬಂಧಂ

ನಾನಾರ್ಥಗಳು (ಅವಸರ ಶರ ಕುತ್ಸಾ ವಾರ ವಾರ್ವಾಚಿ ಕಾಂಡಂ ಪವನಜಲಜಜಾತಾಂಭಃ ಶಿರೋಕ್ತಂ ಕಶಬ್ದಂ: ಅಭಿಧಾವ, ೩. ೧. ೧೦೫

ಕಂ
ನೀರು (ಅಂಸಂ ಕಂ ಅಮೃತಂ ಪಾನೀಯಂ ಎಂದಿಂತು .. .. ನೀರ್ಗೆ ಪೆಸರಂ ಪರ್ಯಾಯದಿಂ ವಾಗ್ವಿದರ್: ಅಭಿಧಾವ, ೧. ೪. ೧)

ಕಂಕ
ಚಿಮಟ, ಇಕ್ಕುಳ (ಮದಂಘ್ರಿಸಂಸ್ಪರ್ಶನಮುಂ ಸಂಗತಮಲ್ತು ಎನಲಿದೆ ಕಂಕಂಗೆ ಅರುವನೆ ಎನಲ್: ಉದ್ಭಟಕಾ, ೧೧. ೧೦೯); ಕರೀ ಹದ್ದು (ಚರಣಾಯುಧಂ ಶಕುನಿ ಕಂಕಂ ತೊಂಡಿಗಂ ಸೋರೆ ತಿತ್ತಿರೆ ಕೋಕಂ .. .. ರತ್ನಖಗಮಿರ್ಕುಂ ತದ್ವನಾಗೌಘದೊಳ್: ರಾಜಶೇವಿ, ೫. ೫೯)

ಕಂಕಟ
ಕವಚ (ಆಗಳ್ ಅತಿ ಮನೋಜವ ತುರಂಗಮಾರೂಢಂ ಉದ್ಗಾಢ ಕಂಕಟನುಂ ಉತ್ಥಿತ ನಿಶಾಹತಿಯುಂ ಉದೀಣ್ ಕ್ರೋಧಾನಳನುಂ ಆಗಿ: ವರ್ಧಮಾಪು, ೪. ೬೪ ವ)

ಕಂಕಣ
ಬಳೆ (ರತ್ನದ ಕಂಕಣಮೆಂಬಂತೆ ಕೈಗೆ ವಂದುದು ಚಕ್ರಂ: ಪಂಪರಾ, ೧೪. ೧೦೫)

ಕಂಕಣವಾರ
ಬಳೆಗಳ ಸಾಲು [ಕಂಕಣ+ಆರ=ಕಂಕಣ ಮತ್ತು ಹಾರ] (ಮೆಲ್ಲನೆ ವಕುಲ ಆಳವಾಳತಳದೊಳ್ ಸುರಿದ ಅಂಬುಜಸೂತ್ರದಿಂದೆ ಮತ್ತನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇೞ್ಪನಿತನೆ ಮಾಡಿ: ಪಂಪಭಾ, ೨. ೧೬)

ಕಂಕಪತ್ರ
ಹದ್ದಿನ ಗರಿ[ಗಳುಳ್ಳ ಬಾಣ] (ಚಪಳ ಚಾಪನುಂ ಕರತಳಕಲಿತ ಕಂಕತ್ರನುಂ ಆಗಿ ಮೃಗಯಾವಿನೋದದಿಂ ತೊೞಲುತಿರ್ಪಾಗಳ್: ನೇಮಿನಾಪು, ೩. ೬೦ ವ)

ಕಂಕರಿ
ಒಂದು ವಾದ್ಯ (ಕಂಕರಿಯ ಸಿವಿಱ ಪೆಂಪಿನ ಝೆಂಕಟ ಬೊಂಬುೞಯ .. .. ಉಲಿ ನೆಗೞ್ದು ಕರ್ಣಾಮೃತಸಮುದ್ರಘೂರ್ಣನಮಾಯ್ತೋ: ಪುಷ್ಪದಂಪು, ೧೨. ೨೭)


logo