logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲಂಕಾಧಿಪತಿ
ಲಂಕೆಯ ಒಡೆಯ, ರಾವಣ (ತನ್ನ ದೋರ್ಗರ್ವದ ಅಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತು ಎತ್ತಿದೊಡೆ ಇತ್ತಂ ಮೆಚ್ಚಿ ಲಂಕಾಧಿಪತಿಗೆ ಬರವಂ ರಾಗದಿಂ ನೀಳಕಂಠಂ: ಪಂಪಭಾ, ೭. ೭೪)

ಲಂಗಿಗ
[ಲಂಖಿಕ] ದೊಂಬರವನು (ಲಂಗಿಗರ ಮನೆಯೊಳ್ ಪೆಣ್ಗತ್ತೆಯಾಗಿ ಪಿರಿಯ ಪೊಱೆಗಳಂ ಪೊತ್ತು ಪೋಗಿ ಬೆನ್ನೊಳ್ ಕಱುಮೆಯಾಗಿ ನಾಳಿ ಬಿರ್ದು: ವಡ್ಡಾರಾ, ಪು ೧೩, ಸಾ ೪)

ಲಂಗಿಸು
[ಲಂಘಿಸು] ಹಾರು, ನೆಗೆ (ಪೊಗೆ ಪುಗೆ ಕಣ್ಣಂ ಸಿಂಗಂಗಳ್ ಅಳುರೆ ಗರ್ಜಿಸಿ ಲಂಗಿಸಿ ಪುಡಪುಡನೆ ಪುೞ ಸತ್ತುವು ಪಲವುಂ: ಪಂಪಭಾ, ೫. ೯೨)

ಲಂಘನ
ಉಪವಾಸ ಹಾಗೂ ನೆಗೆಯುವಿಕೆ (ಗಜಮಸ್ತಕ ಮಸ್ತಿಷ್ಕದಿಂ ಅಜೀರ್ಣಮಾಯ್ತೆಂದು ಲಂಘನಂಗೆಯ್ವವೊಲೇಂ ಗಜರಿಪು ಲಂಘಿಸಿದುದೊ ಪವನಜವದೆ ಶಿಖರಕ್ಕೆ ಶಿಖರದಿಂ ಖಗನಗದಾ: ಅಜಿತಪು, ೯. ೨೭)

ಲಂಘನೀಯ
ತಿರಸ್ಕಾರಾರ್ಹ (ಉಚಿತಮಂ ಬಗೆಯದೆ ನುಡಿದೊಡಮೆಮಗೆ ಲಂಘನೀಯಮುಪೇಯಂ: ಶಾಂತಿಪು, ೧೦. ೧೨೦)

ಲಂಘಿಸು
ಹಾರು (ಗಜಮಸ್ತಕಮಸ್ತಿಷ್ಕದಿಂ ಅಜೀರ್ಣಮಾಯ್ತೆಂದು ಲಂಘನಂಗೆಯ್ವವೊಲೇಂ ಗಜರಿಪು ಲಂಘಿಸಿದುದೊ ಪವನಜವದೆ ಶಿಖರಕ್ಕೆ ಶಿಖರದಿಂ ಖಗನಗದಾ: ಅಜಿತಪು, ೯. ೨೭)

ಲಂಚಂಗುಳಿ
ಲಂಚಕ್ಕೆ ಆಸೆಪಡುವವನು (ಗುಳಿ ಪ್ರತ್ಯಯಕ್ಕೆ: ಆಡುಂಗುಳಿ ಸಾಲಂಗುಳಿ ಲಂಚಂಗುಳಿ ಕತ್ತಂಗುಳಿ: ಶಬ್ದಮದ, ೩೧೩, ಪ್ರ)

ಲಂಚಗಾಱ
ಲಂಚಗುಳಿ (ಲಂಚಗಾಱನಂತೆ ನುಡಿಗೆಡಿಸದೆ ಏಕಚಿತ್ತದಿಂದ ಕೇಳ್ವಿರಪ್ಪೊಡೆ ಪೇೞ್ದಪೆಂ: ಧರ್ಮಾಮೃ, ೧. ೧೩೮ ವ)

ಲಂಚವಣಿಗ
ಲಂಚಗುಳಿ (ಮತ್ತೆ ಕೆಲವಱೊಳುಂಟು: ಲಂಚವಣಿಗಂ ಸಾಲವಣಿಗಂ ಗಂಧವಣಿಗಂ: ಶಬ್ದಮದ, ೨೧೭, ಪ್ರ)

ಲಂಚವೊಗು
ಲಂಚಕ್ಕೊಳಗಾಗು (ಲಂಚವೊಕ್ಕಿರ್ದ ಪ್ರಧಾನನಂತೆ ಪಗೆ ನಿರ್ಮೂಲಮಾದ ಪಂದೆಯಂತೆ: ಧರ್ಮಾಮೃ, ೯. ೨ ವ)


logo