logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಭಿನಾಳ
ಹೊಕ್ಕುಳ ಬಳ್ಳಿ (ನಾಭಿನಾಮಮುಮಾಯ್ತು ಅರ್ಭಕನಿಕರ ನಾಭಿನಾಳಪ್ರಕರನಿಕರ್ತನಮಱಯೆ ಪೇೞ್ದುದಱಂದಂ: ಆದಿಪು, ೬. ೬೭)

ಭಂಗ
ಮುರಿಯುವುದು (ತುಂಗವನ್ಯಮತಂಗಜದಂತಾಘಾತ ನಿಪಾತಿತಸಲ್ಲಕೀಭಂಗಮಂ .. .. ನೃಪನೆಯ್ದಿದಂ ಉದ್ಯತ್ಛೃಂಗಮನಾ ಶತಶೃಮಗಮಂ: ಪಂಪಭಾ, ೧. ೧೧೫); ಸೋಲು (ಭಂಗಮಾಗಿಯುಂ ಪರಾಜಿತಸಂಯುಗಮಲ್ತು: ತ್ರಿಷಷ್ಟಿಪು, ೨. ೨೫ ವ); ಅವಮಾನ (ಈ ದೊರೆಯಮುಂ ಅಳವೞಯೆ ವಸುಂಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ: ಆದಿಪು, ೧೪. ೧೧೨); ಅಲೆ (ಭಂಗಕ್ಕೆ ಪಕ್ಕಾದೆನೆಂದು ಆತ್ಮಗತೌರ್ವಾಗ್ನಿಚ್ಛಲಂಬೆತ್ತ ಅೞಲುರಿಯೊಳಕೊಂಡಂತೆ ತೋರ್ಕುಂ ಸಮುದ್ರಂ: ಶಬರಶಂ, ೧. ೩೨); ದೋಷ (ಕಾವ್ಯಮೆನಿಸಿರ್ದು ವಿಬುಧಸೇವ್ಯಂ .. .. ಭಂಗವಿರಹಿತಂ .. .. ಎನಿಸಿ ಕುಜನಾಭವ್ಯಂ ಮತ್ಕೃತಿ ಚಮತ್ಕೃತಿಪ್ರದಮಲ್ತೇ: ರಾಜಶೇವಿ, ೧. ೮೧); ಚಲನೆ (ಭಂಗಮನಂತುಂ ತಳೆದ ಲತಾಮಗಮನಿಂ ನಿನ್ನ ಕೋಮಳಾಂಗದ ಚೆಲ್ವಿಂ ಗೆಲ್ದು: ಚಂದ್ರಪ್ರಪು, ೭. ೭೫)

ಭಂಗಂಬಡು
ಅವಮಾನಕ್ಕೊಳಗಾಗು ವನತರು ವಿಹಾರಜಜರೀಕೃತತನುಗಳ್ ಭಂಗಂಬಟ್ಟು ಪೊೞಲಂ ಪುಗೆ : ಚಾವುಂಡಪುಚಂದ್ರ, ಪು. ೨೬೮ ಸಾ. ೫)

ಭಂಗಂಬೆಱು
ಅಲುಗಾಡು, ಅಸ್ಥಿರಗೊಳ್ಳು (ಪಿರಿದುಮೆರ್ದೆ ಡವಕೆ ವಾಜಿಸುತಿರೆ ಭಂಗಂಬೆತ್ತು ಹಾರಲತೆ ಘನಕುಚದೊಳ್ ಕರವಿಕ್ಷೇಪದೆ ನರ್ತಿಸೆ ನರೇಂದ್ರನಂದನನನೊಲ್ದು ನೋಡಿದಳೊರ್ವಳ್: ಕಾದಂಬ, ೩. ೨೮)

ಭಂಗವ್ಯಾಕುಳಿತ
ಅಲೆಗಳಿಂದ ಅಸ್ತವ್ಯಸ್ತಗೊಂಡ (ಆ ಮಹಾರ್ಣವಂ ಸಮುದ್ರಮಾಗಿಯುಂ ಅಪಾರವಿಸ್ತಾರಿಯುಂ ಭಂಗವ್ಯಾಕುಳಿತಮಾಗಿಯುಂ ಅಚ್ಯುತಪ್ರಭಾವಬಾಸುರಮುಂ .. .. ಎನಿಸಿರ್ದುದು: ಜಗನ್ನಾವಿ, ೧. ೪೪ ವ)

ಭಂಗಿ
ರೀತಿ (ಆವ ಭಂಗಿಯಿಂ ನೋಡುವೊಡೆ ಎನ್ನೊಳಿಲ್ಲ ಗುಣಲೇಶಂ: ಕಾದಂಸಂ, ೫. ೫೯); ಬಾಗು, ತಿರುವು (ನೆಲೆನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪೆಱತಲ್ಲಿದೆಂತೊ ಕೋಮಲತೆ ಪೇೞಮೆನ್ನಿನಿಯಳಂ ಮಱೆಗೊಂಡುದೊ ಸೂಱೆಗೊಂಡುದೋ: ಪಂಪಭಾ, ೫. ೧೨) ಒನಪು (ಅಂಗುಲಿಯಂ ಓಪಂ ಒಲವಿಂ ಪಿಡಿದಾ ಭಂಗಿಗೆ ಮೆಲ್ಲನೆ ಸಖಿಯರ್ ಪಿಂಗಲ್ಕೆ: ತ್ರಿಷಷ್ಟಿಪು, ೧೯. ೧೦)

ಭಂಗಿಭಾಷಿತ
ವಿಶಿಷ್ಟ ರೀತಿಯ ಮಾತು (ಭಂಗಿಭಾಷಿತದಿಂ ಆತನಂ ಪ್ರೀತನಂ ಮಾಡಿ: ಪುಷ್ಪದಂಪು, ೭. ೪೯ ವ)

ಭಂಗಿವಡೆ
ವಿಲಾಸವನ್ನು ಪಡೆ (ಭಂಗಿವಡೆವಿನೆಗಂ ಓದಿನ ಪಾಂಗೆಸೆವ ಆರಭಟಿಯಲ್ಲಿ .. .. ಮಂಗಳಪಾಠಕತೆವೆತ್ತರ್ ಅರೆಬರ್ ಅಮರ್ತ್ಯರ್; ಆಚವರ್ಧ, ೧೪. ೯)

ಭಂಗಿವೆಱು
ಭಂಗಿವಡೆ (ದೇವಗಜದಂಗಮರೀಚಿಯ ಭಂಗಿವೆತ್ತಿರಲ್ ಬಗೆಗೊಳಿಸಿತ್ತು ಚಂದನರಸಂದೊಡೆದಂದದೆ ಪೂರ್ವದಿಙ್ಮುಖಂ: ಜಗನ್ನಾವಿ, ೧೬. ೧೦೩)

ಭಂಗಿಸು
ಸೋಲಿಸು (ಸಂದ ಕಾಮದೇವನುಮಂ ರೂಪಿನೊಳಾದಂ ಭಂಗಿಸಿ: ಧರ್ಮಾಮೃ, ೪. ೧೨೮); ತಡೆಗಟ್ಟು (ಭಂಗಿಪೊಡೆ ಒಗೆದು ಸೂಸುವ ಶೃಂಗಾರರಸಕ್ಕೆ ಸೇತುಗಟ್ಟುವವೋಲ್ ಚಿತ್ತಂಗೊಳಿಪ ರತ್ನಕಾಂಚಿನಂಗನೆಯ ನಿತಂಬದೊಳ್ ತೊಡರ್ಚಿದಳೊರ್ವಳ್: ಶಾಂತೀಶ್ವಪು, ೪. ೨೩೨)


logo