logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಗಂಗಾಂಗನೆ
ಗಂಗಾದೇವಿ (ಅಂದು ಭೋಂಕನೆ ಕಂಡಂ ಗಂಗಾಂಗನೆಯಂ ಕಾಣ್ಬವೊಲ್ ಅಂಗನೃಪಂ ಮುಂದೆ ನಿಂದ ಕೊಂತಿಯನಾಗಳ್: ಪಂಪಭಾ, ೯. ೭೩)

ಗಂಗಾಜಾತ
ಭೀಷ್ಮ (ಶ್ವೇತನ ಗಂಗಾಜಾತನ ಮಾತನೆ ಪಾರ್ದು ಎರಡು ಒಡ್ಡಣಂ ಕಾದಲ್ಕೆಂದೀ ತೆಱದಿನೊಡ್ಡಿ ನಿಂದುವು ಭೂತಳಮಳ್ಳಾಡೆ ಕೆಸಱ ಕಡಿತದ ತೆಱದಿಂ: ಪಂಪಭಾ, ೧೦. ೫೩)

ಗಂಗಾತ್ಮಜನ್ಮ
ಗಂಗೆಯ ಮಗ, ಭೀಷ್ಮ (ಭುಜ ವೀರ್ಯ ವಿಕ್ರಮಯುತಂ ಗಂಗಾತ್ಮಜನ್ಮಂ ಜಯಶ್ರೀಲೋಲಂ ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ: ಪಂಪಭಾ, ೧. ೬೮)

ಗಂಗಾಧರ
ಈಶ್ವರ (ಗಾಂಡಿವಧರಂ ಗಂಗಾಧರಂ ತುಂಗಶಕ್ತಿಧರಂ ವಜ್ರಧರಂ ಧರಾಧರಧರಂ ಶ್ರೀಕೀರ್ತಿವಿದ್ಯಾಧರಂ: ಪಂಚತಂತ್ರ, ೩೭)

ಗಂಗಾವಾರಿ
ಗಂಗೆಯ ನೀರು (ಅಂತು ಚಾಗಂಗೆಯ್ದು ಜಗನ್ಮಂಗಳಗಂಗಾವಾರಿಯೊಳ್ ಅನಿವಾರಿತಪರಾಕ್ರಮಂ ಅಘಮರ್ಷಣಪೂರ್ವಕಂ ಮಿಂದು: ಪಂಪಭಾ, ೯. ೭೨ ವ)

ಗಂಗಾಸುತ
ಗಂಗೆಯ ಮಗ, ಭೀಷ್ಮ (ಆರೂಢ ಸಮರರಸನುಂ ಉಪಾರೂಢಕನಕರಥನುಂ ಆಗಿ ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗೆ ಅದಿರದೆ ಇದಿರ್ಚಿ ನಿಂದಾಗಳ್: ಪಂಪಭಾ, ೧೦. ೫೨ ವ)

ಗಂಗೆಗಟ್ಟು
[ಗಂಗೆಗೆ+ಅಟ್ಟು] ವಿಸರ್ಜನೆಮಾಡಲು ಗಂಗಾನದಿಗೆ ಕಳಿಸು (ನಟ್ಟುಡಿದ ಬಾಳ ಕಕ್ಕಕಡೆಯುಡಿಗಳುಮಂ ಅಯಸ್ಕಾಂತಮಂ ತೋಱ ತೆಗೆಯಿಸುತ್ತುಂ ವಜ್ರಮುಷ್ಟಿಯ ಪೊಯ್ಲೊಳಂ ಬಾಳ ಕೋಳೊಳಮುಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ: ಪಂಪಭಾ, ೧೧. ೨ ವ)

ಗಂಗೆಯ ಪೆರ್ಮಗ
ಭೀಷ್ಮ (ಗಂಗೆಯ ಪೆರ್ಮಗಂಗೆ ಘಟಸಂಭೂತಂಗೆ ಕರ್ಣಂಗೆ ಅಸಾಧ್ಯನೊಳ್ ಆ ಗಾಂಡಿವಿಯೊಳ್ ಕಱುತ್ತಿಱವರಾರ್: ಪಂಪಭಾ, ೧೩. ೯)

ಗಂಟಲ್
ಕಂಠ, ಕೊರಳು (ಮೃಗಕುಲಂ ಆಸೆಗೆಯ್ವ ಮೃಗತೃಷ್ಣಿಕೆಯಂ ಜಲಮೆಂದು ತೃಷ್ಣೆಯಿಂ ಪಗಲಿೞವನ್ನೆಗಂ ಪರಿದು ಗಂಟಲ್ ಉರಂಬರಂ ಆಱೆ: ಪಂಪರಾ, ೭. ೯೩)

ಗಂಟಿ
ತೊಂಡುದನ (ಗಂಟಿಯಂ ಪುಗಲೀಯದಿಕ್ಕಿದ ಬೇಲಿ ಕಿಚ್ಚುಕೊಳೆ ಕಾಗುಮೆ: ಜೀವಸಂ, ೨. ೫ ವ)


logo