logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಕೊಡು (ಈ ಪ್ರದಾನೇ: ಶಬ್ದಮದ, ಧಾ ೧); ದಾನಮಾಡು (ಪೆಣನಂ ಎತ್ತಲ್ ಸಲ್ಲೆಂದು ಆಪತ್ತುವಡಿಸಿ ಪುತ್ರನಂ ಈ ಪೊನ್ನಂ ಸಂಗತಿಗುಡುವೆವೆಂಬರ್ ತಕ್ಕರ್: ಸಮಯಪ, ೧೪. ೧೫೫); ಎಡೆಗೊಡು (ಮಣಿಮಾಲಿಯಲ್ಲದೆ ಉೞದಾರುಮಂ ಸಾರಲ್ ಈಯದೆ ಭಂಡಾರಮಂ ಕಾದುಕೊಂಡಿರ್ಪುದುಂ: ಆದಿಪು, ೨. ೧೫ ವ); ದಾನಮಾಡು (ಜೀವಮುಳ್ಳಿನಂ ಇಱದು ಅರ್ಥಮುಳ್ಳಿನೆಗಂ ಇತ್ತು ನೆಗೞ್ತೆಯನಾಂಪುದೆಂಬ ಪೆಂಪಿನ ಸಮಕಟ್ಟು: ಪಂಪಭಾ, ೫. ೭೭)

ಈಂಟಿಸು
ಕುಡಿಸು (ಕಿವಿಯಿಂದೀಂಟಿಸುವರ್ ಸಮಸ್ತರಸಮಂ: ಲೀಲಾವತಿ, ೧. ೧೨)

ಈಂಟು
ಕುಡಿ, ಪಾನಗೈ (ನೀಳಪಾಟಳ ಜಂಬೂಫಳ ಮಧುರರಸಮಂ ಈಂಟಿದೆಂ ಇಳೇಶ ಪಿರಿದೞಯಿಂ ಮನಂ ತಣಿವಿನೆಗಂ: ಕಾದಂಸಂ, ೧. ೩೧)

ಈಂಟುಜಳಧಿ
ಕುಡಿನೀರಿನ ಸಾಗರ (ಈಂಟುಜಳಧಿಯೆನಿಪ ಅಗೞ ನೀಳ್ಪಿನಿಂ ನೆಗದು ಸೊಗಯಿಸುವ ಕೋಂಟೆಯೊಳ್ಪಿನಿಂ: ಪಂಪಭಾ, ೩. ೨೨)

ಈಂದನಿ
ಇನಿದನಿ (ಈಂದನಿಯಿಂದೆ ದೇವಗಣಿಕಾತತಿಯಾತನ ಗೀತಮಂ ನಿಜಾನಂದದೆ ಪಾಡೆ: ಚಂದ್ರಪ್ರಪು, ೧೧. ೮೭)

ಈಂದೋಳ್
ಸುಂದರವಾದ ತೋಳು (ಬಹುಳದಿಂ ವ್ಯಂಜನಪರಮಾದಲ್ಲಿಯುಂ ಆದಿ ದೀರ್ಘಮಾಯ್ತು: ಈಂಚರಂ, ಈಂಬುಳಿ, ಈಂಗಡಲ್, ಈಂದುಟಿ, ಈಂದೋಳ್: ಶಬ್ದಮದ, ೧೯೧, ಪ್ರ)

ಈಕ್ಷಂಗಳ್
ನೋಟಗಳು (ಆಕೆಯ ಹಾವಭಾವವಿಳಾಸ ವಿಭ್ರಮಕಟಾಕ್ಷ ಈಕ್ಷಂಗಳ್ ಮನಮಂ ಒನಲಿಸೆಯುಂ ಕನಲಿಸೆಯುಂ: ಪಂಪಭಾ, ೪. ೭೪ ವ)

ಈಕ್ಷಣ
ಕಣ್ಣು (ಅಲಂಪುಗಳ್ ಕನಸಿನೊಳಂ ಪಳಂಚಲೆವುದೆನ್ನೆರ್ದೆಯೊಳ್ ತರಳಾಯತೇಕ್ಷಣೇ: ಪಂಪಭಾ, ೪. ೧೦೬); ನೋಟ (ಆ ಪೀನಕುಚಂಗಳ್ ಆಕ್ಷಣದೊಳ್ ಈಕ್ಷಣಮಂ ಸೆಱೆಗೆಯ್ಯೆ: ಪಂಪರಾ, ೭. ೧೦೯)

ಈಕ್ಷಣಭದ್ರ
ನೋಡಲು ಶುಭಪ್ರದವಾದ ಧಾತಕೀಷಂಡಂ ಈಕ್ಷಣಭದ್ರಂ: ಚಂದ್ರಪ್ರಪು, ೧. ೭೨)

ಈಕ್ಷಣಹರ
ಕಣ್ಸೆಳೆಯುವ (ದಕ್ಷಿಣಕಟಮೆನೆ ಸಿವುಱುವ ದಕ್ಷಿಣರದನದೊಳೆ ಹಸ್ತಮಂ ಪೇಱುವ ಚೆಲ್ವು ಈಕ್ಷಣಹರಮೆನೆ: ಆದಿಪು, ೧೨. ೫೯)


logo