logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಬಂಕ
ಮೂಲೆ (ಅದರ ಬಂಕದೊಳ್ ಒಪ್ಪುಗುಂ ಉಜ್ವಳಾಂಗನನ್ವಿತ ಬಹುಸಂಖ್ಯರುದ್ರಗಣ ಸೇವಿತಂ ಅಗ್ಗದ ನೀಲರೋಹಿತಂ: ಶಬರಶಂ, ೧. ೬೭)

ಬಂಕು
ಬಾಗು, ವಕ್ರವಾಗು (ಬಂಕು ಕೌಟಿಲ್ಯೇ: ಶಬ್ದಮದ, ಧಾ ೬೦)

ಬಂಗು
ಬೂಜು (ಅವನುಪಕಾರಮಂ ಫೇೞವೇೞ್ವುದೆ ನಮ್ಮ ತಿರಿದು ತಂದುಣ್ಬಶನಕ್ಕೆ ಅವರಣ್ಣೆ ಸೂಜಿಮೊನೆಯೆನಿಸುವ ಎಣ್ಣೆಯುಂ ಬಂಗುಮಾದ ಕೞಯುಂ ಪೇೞ್ಗುಂ; ಸುಕುಮಾಚ, ೨. ೬೮)

ಬಂಚ
[ವಂಶ] ಕೊಳಲು (ಮದನಾನುರಾಗಮಂ ಸಿಂಪಿಸುವಂತೆ ಬಾಜಿಸುವ ಬಂಚದ ನುಣ್ಚರದೊಳ್: ಮಲ್ಲಿನಾಪು, ೧೧. ೭೬); ಪೀಳಿಗೆ (ಶಕಾರಕ್ಕೆ ಚಕಾರಂ: ಶಷ್ಕುಲಿ

ಬಂಚರ
ವೀಣೆ, ತಂಬೂರಿ (ಕಳಕಂಠಕಳರವಂ ಪಂಚಮದ ಬಂಚದಿಂಚರಮೆನಿಸೆ: ಶಬರಶಂ, ೨. ೪೨ ವ)

ಬಂಚಿಸು
ವಂಚಿಸು (ಲಸನ್ನೇತ್ರಂಗಳಂ ಕೂಡೆ ಬಂಚಿಸುತುಂ ಮೆಟ್ಟುವ ಮೆಟ್ಟಿನೊಳ್ಪು: ಆದಿಪು, ೭. ೧೨೩); ತಪ್ಪಿಸು (ಕೆಲಕೆಲವು ಅವಿನಾಣಂಗಳಂ ನಾಣ್ಚಿ ಬಂಚಿಸಿ ಪಿರಿದುಮನುರಾಗದಿಂಮೆನ್ನ ಬರೆದ ಪಟಮನಿದನರ್ಚಿಸಿ: ಆದಿಪು, ೩. ೪೩ ವ); ಮರೆಮಾಚು (ಕನ್ಯಕಾರೂಪ ದರ್ಶನದಿಂ ತತ್ಪುಲಕಂಗಳಂ .. .. ಬಂಚಿಸಿಯುಂ ಏಂ ಮೇಲ್ವಾಯ್ವುದಂ .. .. ತಾಂಗಿದನಿಲ್ಲ: ಪಂಪರಾ, ೫. ೬೩)

ಬಂಜ
[ವಂಧ್ಯ] ನಿರ್ವೀರ್ಯ (ನಿನ್ನೊಡನಿರ್ದ ಬೊಜಂಗರ್ ನಿನ್ನಂತಿರೆ ಬಂಜರಲ್ಲರ್ ಅದಟರ್ಕಳ್ ಅವರ್: ಧರ್ಮಾಮೃ, ೨.೭೯)

ಬಂಜೆ
[ವಂಧ್ಯಾ] ಗೊಡ್ಡು (ಮಗನಂ ಪಡೆವಂತಿರೆ ಬಂಜೆಗೆ ಮರ್ದಂ ಮಾೞ್ಪೆಂ: ಸಮಯಪ, ೧೨. ೩೫)

ಬಂಜೆತನ
ಗೊಡ್ಡುತನ (ಎನಗೀ ಜನ್ಮವಿಂದಿಂತೆ ಬಂಜೆತನದಿಂದಂ ಪೋಕುಮೋ: ಸುಕುಮಾಚ, ೯. ೧೦೯)

ಬಂಜೆ ಮಾಡು
ಹಾಳುಮಾಡು (ವಿಜಯಲಕ್ಷ್ಮಿವೊಲೀತನ ತೋಳ ತೞನೊಳ್ ಪೊಸಯಿಸು ನಲ್ಮೆಯಂ ದಿವಸಲಕ್ಷ್ಮಿಯನೇಕೆಯೋ ಬಂಜೆಮಾಡುವೈ: ಪಂಪರಾ, ೯. ೧೬೭)


logo