logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಫಣ
ಹಾವಿನ ಹೆಡೆ (ಶೇಷಂ ಫಣಂ ಬಳ್ಕಿಸುರ್ಕಿದಪಂ ಸೀರೆಯ ಸಿಂಬಿವೊಲ್ ಖಳನೃಪಾಲಾಕ್ಷೌಹಿಣೀ ಭರದಿಂ: ಜಗನ್ನಾವಿ, ೧. ೩೦)

ಫಣಭೃತ್
(ಉರಗಂ ಭೋಗಿ ಸರಿಸರಪಂ ಫಣಿ .. . ಫಣಭೃತ್ .. .. ಸರ್ಪಂ: ಅಭಿಧಾವ, ೧. ೩. ೭)

ಫಣಮಣಿ
ಹಾವಿನ ಹೆಡೆಯ ಮಣಿ (ಚೂಡಾಮಣಿಗೆಱಗೆ ಚಕ್ರಿಪದದೊಳ್ ಫಣಮಣಿ ಪುನರುಕ್ತಿ ಪಾಂಡ್ಯಪತಿಗಾಯ್ತಾಗಳ್: ಶಾಂತಿಪು, ೧೧. ೪)

ಫಣಾಗಣಮಣಿಕಿರಣ
ಹೆಡೆಗಳ ಸಮೂಹದ ರತ್ನದ ಕಾಂತಿ (ಆಗಳ್ ಅನಂತಂ ಅನಂತ ಫಣಾಗಣಮಣಿಕಿರಣಮೆಸೆಯೆ ದುಗ್ಧಾರ್ಣವದೊಳ್ ರಾಗದಿನಿರ್ಪಂತಿರ್ದಂ ಭೋಗಿ ತೞತ್ತೞಸಿ ಬೆಳಗೆ ಕೆಯ್ದೀವಿಗೆಗಳ್: ಪಂಪಭಾ, ೪. ೫೩)

ಫಣಾಪತಿ
ಆದಿಶೇಷ (ಅದು .. .. ಮಹತ್ವದಿಂದ ಇೞವುದು ಧನಪತಿ ದಿವಿಜಪತಿ ಫಣಾಪತಿಇಉರಮಂ: ಪುಷ್ಪದಂಪು, ೨. ೩೩)

ಫಣಾಮಣಿ
ಫಣಮಣಿ (ಸಮಸ್ತ ಉರ್ವೀಧರ ಅಶೇಷ ಶೇಷ ಮಹಾನಾಗ ಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ: ಪಂಪಭಾ, ೫. ೭೬)

ಫಣಾರತ್ನ
ಫಣಾಮಣಿ (ದೀಪದೊಳ್ ಪನ್ನಗಪತಿಯ ಫಣಾರತ್ನದೀಪಂ ವಿತಾನಾವಳಿಯೊಳ್ ದಿವ್ಯಂ ವಿತಾನಂ ತುಱುಗಿದುವು: ಆದಿಪು, ೧೬. ೨)

ಫಣಿ
ಹೆಡಯುಳ್ಳುದು, ಹಾವು (ಉರಗಂ ಭೋಗಿ ಸರಿಸರಪಂ ಫಣಿ .. . ಫಣಭೃತ್ .. .. ಸರ್ಪಂ: ಅಭಿಧಾವ, ೧. ೩. ೭)

ಫಣಿಕಟಕ
ಶಿವ (ಫಣಿಕಟಕನ ಕೆೞಗೆ ಬಯ್ಕೆಯಿರ್ದಪುವೆಂಬರ್: ಸಮಯಪ, ೨. ೬೫)

ಫಣಿಕೇತನ
ರ್ಪಧ್ವಜ, ದುರ್ಯೋಧನ (ಎಂಬುದುಂ ಬೞಕ್ಕಿನ ನುಡಿಗೆ ಸೈರಿಸಲಾಱದೆ ಫಣಿಕೇತನಂ ಇಂತೆಂದಂ: ಪಂಪಭಾ, ೧೩. ೨೩ ವ)


logo