logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಉಂಕೆ
ಒಂದು ಜಾತಿಯ ಹಕ್ಕಿ (ನಿನ್ನ ಭರ್ತಾರಂ ಬೇಂಟೆಯಾಡಿ ಪಲವುಂ ಲಾವುಗೆಯುಂ ಉಂಕೆಯುಂ ಕೊರಸುಂ ಮೊದಲಾಗೊಡೆಯ ಪಕ್ಷಿಜಾತಿಗಳಂ ಬಲೆಯನೊಡ್ಡಿ ಪಿಡಿದು: ವಡ್ಡಾರಾ, ಪು. ೧೫೧, ಸಾ. ೩)

ಉಂಗುಟ
ಕಾಲಿನ ಹೆಬ್ಬೆರಳು (ಜಳರಾಶಿಯಂ ಉಂಗುಟದನಿತೊಳನೊರ್ವಂ ಅಗಸ್ತ್ಯನೆಯ್ದೆ ಕುಡಿದನೆನುತ್ತುಂ ಗೞಪುತಿರ್ಪರ ನುಡಿಯೊಳ್ ಫಳಮಿಲ್ಲ: ಸಮಯಪ, ೧೦. ೧೦೯)

ಉಂಗುರವಿಡು
ಮದುವೆ ನಿಶ್ಚಿತಾರ್ಥದಲ್ಲಿ ಉಂಗುರ ತೊಡಿಸು (ತನಗೆ ಕಿಱಯಂದು ಉಂಗುರವಿಟ್ಟ ಸಾಲ್ವಲನೆಂಬಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇೞ್ಕುಂ ಎಂದೊಡೆ: ಪಂಪಭಾ, ೧. ೭೫ ವ)

ಉಂಟು
ನಿಜ, ಇದೆ (ನಣ್ಪಿಂ ನಿಮಗಂ ಎಮಗಂ ಆಮ್ನಾಯದಿಂ ಬಂದುದು ಇಂತೀ ಜಿನಧರ್ಮಂ ಪ್ರಾಣಿಗಾರ್ಮಂ ಮಱೆಯದಿರಿದು ನಿನ್ನೆಂದುದು ಉಂಟು ಇಲ್ಲ ಪೇೞಂ: ಆದಿಪು, ೨. ೨೦)

ಉಂಟೊಡೆತಾಗಿ ಮಾಡು
ಹೌದು, ಇದೆ ಎಂಬುದನ್ನಾಗಿ ಮಾಡಿ (ಆತ್ಮವಿಟತ್ತ್ವಮಂ ಉಂಟೊಡೆತಾಗಿ ಮಾಡಿ ಬಾಂದೊಱೆಯನೆ ಪೊತ್ತು ಗೌರಿಗೆ ಕವಲ್ದೊಱೆಗೆಯ್ಸಿದಂ ಈ ಪ್ರದೇಶದೊಳ್: ಪಂಪಭಾ, ೭. ೭೫)

ಉಂಡಲಿಗೆ
ಕಡುಬು (ಮಂಡಗೆ ಮೇಣ್ ಹೂರಿಗೆ ಮೇಣ್ ಉಂಡಲಿಗೆಗಳಿಕ್ಕಿ .. .. ಕೊಡುವುದು ದೃಢವ್ರತಂಗಱೊಳ್: ಅನಂತಪು, ೧೦. ೭೬)

ಉಂಡಿಗೆ
ಮುದ್ರೆ (ಎಲ್ಲಡೆಗಳುಮಂ ತನ್ನಟ್ಟಿದೋಲೆಗಂ ಇಟ್ಟ ಉಂಡಿಗೆಗಂ ಬಸಂ ಮಾಡಿದ ನನೆವಿಲ್ಲ ಬಲ್ಲಹಂ ನಿಮ್ಮಡಿಗಳ ಪೆಸರಂ ಕೇಳ್ದು: ಕಬ್ಬಿಗಕಾ, ೧೩೧ ವ); ಅಪ್ಪಣೆ ಚೀಟಿ, ಅಧಿಕಾರ ಮುದ್ರೆ (ಮಾಮರಂಗಳೊಳ್ ಕನರ್ಗೊನೆ ಮೂಱು ನಾಲ್ಕು ತಲೆದೋಱದುವು ಉಂಡಿಗೆ ಸಾಧ್ಯಮಾದುದು ಇನ್ನೆನಗೆ: ಮಲ್ಲಿನಾಪು, ೫. ೨೩); ಗಂಟಲು (ಪೊಸಮುತ್ತಂ ನುಂಗಿದ ಸೋಗೆವಿಂಗಡಣಂ ಮಱುಗಿದವು ಉಂಡಿಗೆ ಬೇಯೆಕೆಂಡಮಂ ನುಂಗಿದವೋಲ್: ಪಂಪರಾ, ೭. ೯೬)

ಉಂಡಿಗೆ ಸಾಧ್ಯಂ ಮಾಡು
ತನ್ನ ಹೆಸರಿನ ಮುದ್ರೆ ಬೇರೆಡೆ ಚಲಾವಣೆಯಾಗುವಂತೆ ಮಾಡು, ಆ ಪ್ರದೇಶವನ್ನು ಗೆಲ್ಲು (ಅಂತು ಷಟ್ಖಂಡಭರತಮಂಡಳಮಂ ಉಂಡಿಗೆ ಸಾಧ್ಯಂ ಮಾಡಿ: ಆದಿಪು, ೧೫. ೩ ವ)

ಉಂಡಿಗೆಯೊತ್ತು
ಮುದ್ರೆ ಒತ್ತು, ಸ್ವಾಧೀನಪಡಿಸಿಕೊ (ಅರಸರ ಕಾಪಿನ ಪೊಲನಂ ಪೊಕ್ಕುವೆಂದು ಉಂಡಿಗೆಯೊತ್ತಿಕೊಳುತ್ತುಂ ಊೞಗವಾದೆಡೆಗಳೊಳ್ ಝಾಳೆಯಂಗೊಳುತ್ತುಂ: ಸುಕುಮಾಚ, ೭. ೩೫ ವ)

ಉಂತಪ್ಪ
ಹೇಗೆ ಹೇಗೆಯೋ (ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದ ಅಗುಂತಿಗಳಂ ಉಂತುಂ ಅಳವಲ್ಲದೆ ಪೊಗೞೆ: ಪಂಪಭಾ, ೪. ೪೦ ವ)


logo