logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಠಕ್ಕವಿದ್ಯೆ
ಮೋಸದ ಸ್ವಭಾವ (ಠಕ್ಕವಿದ್ಯೆಯೊಳ್ತೊಡರದು ಕೂಡೆ ಪುಂಜಿಸಿದ ವಾಙ್ಮಯರತ್ನಚಯಂ ಜಿನೇಶನಾ: ಸಮಯಪ, ೨. ೨೧)

ಠಕ್ಕಸಮಯ
ಮಿಥ್ಯಾಧರ್ಮ (ಪಸರಿಸುವ ಠಕ್ಕಸಮಯದ ದೆಸೆವೋಗರ್ ಅದೆಂತುಂ ಆವ ತೆಱದಿಂ ಜೈನರ್: ಸಮಯಪ, ೬. ೭೫)

ಠಕ್ಕಿಕ್ಕು
ಮೋಸಗೊಳಿಸು (ಮಾಯಮನೆ ಬೀಸಿ ಪೆಱರನುಪಾಯದೆ ಠಕ್ಕಿಕ್ಕಿದೇವವಕಾರ್‍ಯದೊಳಿನಿಸುಂ ನೋಯದೆ: ಧರ್ಮಾಮೃ, ೧. ೯೫)

ಠಕ್ಕುಗಾರ್ತಿ
ಮೋಸಗಾತಿ (ಮತ್ತಮೊರ್ವಂ ಇದಿರೊಳೈತರ್ಪ ಠಕ್ಕುಗಾರ್ತಿಯಂ ಕರಸಂಜ್ಞೆಯಿಂ ಕೆಳೆಯಂಗೆ ತೋಱ: ರಾಜಶೇವಿ, ೧೧. ೧೫೪ ವ)

ಠಕ್ಕುಗೊಳ್
ಮೋಸಕ್ಕೊಳಗಾಗು, ಮರುಳಾಗು (ಮಾರಿದತ್ತಂ ಲಲಿತಾಕಾರರ ಧೀರರ ಬಂದ ಕುಮಾರರ ರೂಪಿಂಗೆ ಠಕ್ಕುಗೊಂಡಂತಿರ್ದಂ: ಯಶೋಧಚ, ೧. ೫೮)

ಠಕ್ಕುಮತ
ಮೋಸದ ಮತ (ಕುಲಹೀನಂಗೊಂದು ತೆಱಂ ಕುಲಜಂಗೊಂದು ತೆಱಂ .. .. ಪೇೞ್ವುದು ನಿರ್ಮಲಧರ್ಮಮದಲ್ತು ಠಕ್ಕುಮತಂ: ಸಮಯಪ, ೩. ೮)

ಠಕ್ಕುವೀೞ್
ಮಂಕುಬಡಿ, ಮೋಸಕ್ಕೊಳಗಾಗು (ಒಡನಾಡಿಗಳೊಳ್ ನುಡಿಯಲ್ಕುಂ ಒಲ್ಲಳ್ ಆ ಸೌಂದರಿ ಠಕ್ಕುವಿೞ್ದ ತೆಱದಿನಿರ್ದಳ್: ಚಂದ್ರಪ್ರಪು, ೫. ೧೨೩)

ಠಣತ್ಕಾರ
ಠಣ್ ಎಂಬ ಗಂಟೆಯ ಶಬ್ದ (ಕಿವಿ ಶಬ್ದಂಗಿಡೆ ಘಂಟಿಕಾ ಘನಠಣತ್ಕಾರಂಗಳಿಂದೆ: ಚಂದ್ರಪ್ರಪು, ೬. ೧೪)

ಠವಣಿಸು
ಸೇರಿಸು (ಕವಿಮಾರ್ಗದೊಳ್ ಒಖ್ಖಾಣಿಪ ಠವಣಿಪ ಕಮ್ಮೈಸುವ ಎಡೆಯೊಳ್ ವಖ್ಖಾಣಿಸಲುಂ ಠವಣಿಸಲುಂ ಕಮ್ಮೈಸಲುಂ ಇವನಂತಾರ್ ಬಲ್ಲರ್ ಎನಿಸಿದಂ ಕವಿರತ್ನಂ: ಅಜಿತಪು, ೧. ೮೨)

ಠವಣೆ
ವೀಣಾವಾದನದ ಒಂದು ಕ್ರಮ (ನುಡಿಸಿದ ಆಕಾರಮಂ ಪೊಯ್ದು ಠವಣೆಯೊಳ್ ಪವಣಱದು .. .. ನಾನಾ ಶಬ್ದಂಗಳಂ ಬಾರಿಸಿ: ಧರ್ಮಪ, ೨. ೨೩ ವ)


logo