logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಊಟ
ಆಹಾರ ತಿನ್ನುವುದು (ಘೃತಮಿಲ್ಲದ ಊಟಮೇನೊಪ್ಪುಗುಮೇ: ಅಜಿತಪು, ೬. ೯೩)

ಊಡು
ಫಲ ನೀಡು (ಮುನ್ನೆರಪಿದುಭಯಕರ್ಮಂ ತನ್ನಂ ಪಿಡಿದೂಡುತಿರ್ಕುಂ ಇಂ ಜೋಯಿಸವೇಕೆ: ಸಮಯಪ, ೪. ೮); ತಿನ್ನಿಸು (ಮುನ್ನಿನ ದಿವಸದೊಳಗಣ ಪರಿಜನಮೆಲ್ಲಮಂ ಪಾರ್ವರಂ ಊಡುವ ನೆವದೊಳೆ ಪೊಱಮಡಿಸಿ: ಪಂಪಭಾ, ೩. ೪ ವ); ಲೇಪಿಸು (ಆ ನೃಪರೂಪಚಂದ್ರನಂತರದೊಳೆ ಮಾಡಿ ಕೇಸಡಿಗಳಂ ಹರಿಚಂದನದಿಂದಂ ಊಡಿ ಕೇಸರದ ತುಱುಂಬನಿಕ್ಕಿ: ಕಾದಂಸಂ, ೮. ೫೨); ಆಧಾರ (ಭೋಜನಕ್ರಿಯಾಯಾಂ ಆಧಾರೇಚ (ಶಬ್ದಮದ, ಧಾ, ೨೭೮)

ಊಡುಗೊಳ್
ಮರೆಮಾಚು (ನೀಡುಂ ಊಡುಗೊಂಡೋಡಿ ತತ್ ಪಿತೃವನಾಭ್ಯಂತರದೊಳಿರ್ದ ಭೂರುಹಮನೇಱ: ಕರ್ಣನೇಮಿ, ೩. ೧೬೧ ವ)

ಊಣ
ಊನ, ಕೊರತೆ (ಜಡಮತಿಯೊಳೆನ್ನೊಳ್ ಆವುದಮೂಣಂ ನೋಡದೆ: ಪುಷ್ಪದಂಪು, ೫. ೧೦೩)

ಊದು
ಬಾಯಿಂದ ಗಾಳಿ ಹೊರಬೀಳಿಸು, ಗಾಳಿ ಬೀಸು (ಸೊಡರ್ಗುಡಿ ಒಯ್ಯನಾಗೆ ಪೊಸಮಲ್ಲಿಗೆ ಕಂಪುನಾಱೆ ತಣ್ಪಿಡಿದ ಎಲರ್ ಊದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಂಗಳ ಗೆಡೆಗೊಳೆ: ಪಂಪಭಾ, ೪. ೧೧೦)

ಊನ
ಕೊರತೆ (ತನಗಿನಿತು ಊನಮಾಗೆ ಮೆಱೆದಾ ಭುಜವೀರ್ಯಮನಾಂತು ಮಾಣ್ದುದೇಂ: ಪಂಪಭಾ, ೧೨. ೧೯೭)

ಊನತ್ವ
ನ್ಯೂನತೆ, ಕೊರತೆ (ಸಾಹಸದ ನಿಮ್ಮಯ್ವರುಂ ಮಕ್ಕಳಾಗಿರೆಯುಂ ನಿಚ್ಚಲುಂ ಇಂದ್ರನೋಲಗದೊಳ್ ಅಂತಾ ಪಾಂಡುರಾಜಂಗೆ ನಿರ್ನೆರಮಪ್ಪ ಒಂದಪಮಾನದಿಂದಂ ಇನಿತೊಂದು ಊನತ್ವಮಪ್ಪಂತುಟೇ: ಪಂಪಭಾ, ೬. ೧೭)

ಊರ್
ವಾಸಿಸುವ ಸ್ಥಳ (ತನಗದಂದೊಂದು ಊರ್ ನಾಮದೊಳಂ ವೆಂಗಿಪೞು: ಪಂಪಭಾ, ೧೪. ೪೦)

ಊರೞುವು
ಊರಿನ ನಾಶ, ಊರಿಗೆ ಊರೇ ಸೂರೆಗೊಳ್ಳುವುದು (ತುಱುಗೋಳೊಳ್ ಪೆಣ್ಬುಯ್ಯಲೊಳ್ ಎಱೆವೆಸದೊಳ್ ನಂಟನ ಎಡಱೊಳ್ ಊರೞುವಿನೊಳಂ ತಱಸಂದು ಗಂಡುತನಮನೆ ನೆಱುಪದವಂ ಗಂಡನಲ್ಲಂ ಎಂತುಂ ಷಂಡಂ: ಗದಾಯು, ೨. ೨೪)

ಊರಾವು
ಊರಿನ ಹಸು (ಕಾೞ್ವಲಸುಂ ಊರ ಪಲಸುಂ ಕಡಾವುಂ ಊರಾವುಂ: ಧರ್ಮಾಮೃ, ೯. ೪೧ ವ)


logo