logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಇಂ
ಇನ್ನು, ಉನ್ನು ಮುಂದೆ (ಪಂಚಧನುಶ್ಶತಂ ಪವಣ್ಣೆಲೆ ನರರ್ಗೆ ಎಂದೊಡೆ ಇಂ ನಿಮಿರೆ ಬಣ್ಣಿಸಲ್ಕಾನಱಯೆಂ ವಿದೇಹಮಂ: ಆದಿಪು, ೧. ೫೧)

ಇಂಕೆವರ್
ಬತ್ತು, ಇಂಗಿಹೋಗು (ಇಂಕೆವಂದು ಎಯ್ದೆ ಕಂಪಲ್ ಮಸಗುತ್ತುಂ ಬತ್ತೆ ತೆರ್ಪಂಬಡೆದ ಅಋಷುಗೆಱೆಗಳ್: ಜಗನ್ನಾವಿ, ೧೭. ೬೨)

ಇಂಗಡಲ್
ಹಾಲ್ಗಡಲು (ಬಡಬಾನಲಂಗೆ ಸೆಡೆದಿಂಗಡಲೆ ಸರಣ್ಬೊಕ್ಕುದಮರಶೈಲಮನೆಂಬೀ ಪಡೆಮಾತಂ ನೀರ್ಘಾದಿಗೆ ಪಡೆಯುತ್ತುಂ ಪೊನ್ನ ಕೋಂಟೆಯಂ ಬಳಸಿರ್ಕುಂ: ಪಂಪರಾ, ೧. ೧೧೩)

ಇಂಗದಿರ್
ಬೆಳುದಿಂಗಳು (ನನೆವಿಲ್ಲ ಬಲ್ಲಹನ ಸೊಂಒಇಂಗೆ ಬೆಕ್ಕಸಂಬಡುತ್ತುಂ ಬದ ಇಂಗದಿರ್ಗಳಂ ಕಾಣ್ಕೆಗೊಟ್ಟು ಜೊನ್ನವಕ್ಕಿ ಬಿನ್ನವಿಸಿತ್ತು: ಕಬ್ಬಿಗಕಾ, ೧೧೩ ವ)

ಇಂಗದಿರ್ವಕ್ಕಿ
ಬೆಳದಿಂಗಳು ಕುಡಿಯುವ ಹಕ್ಕಿ, ಚಕೋರ (ಮಹಾದೇವನ ಮೂರ್ತಿಯಂ ಕಂಡು ಇಂಗದಿರ್ವಟ್ಟಂ ಕಂಡ ಇಂಗದಿರ್ವಕ್ಕಿಯಂತೆ ಪೊಂಗಿ ಪೊಱೆಯೇಱ: ಉದ್ಭಟಕಾ, ೧೨. ೧೩೮ ವ)

ಇಂಗದಿರ್ವಟ್ಟು
ಶೀತಲ ಕಿರಣಗಳನ್ನು ಹೊಂದಿದ, ಚಂದ್ರ ಮಂಡಲ (ಮಹಾದೇವನ ಮೂರ್ತಿಯಂ ಕಂಡು ಇಂಗದಿರ್ವಟ್ಟಂ ಕಂಡ ಇಂಗದಿರ್ವಕ್ಕಿಯಂತೆ ಪೊಂಗಿ ಪೊಱೆಯೇಱ: ಉದ್ಭಟಕಾ, ೧೨. ೧೩೮ ವ)

ಇಂಗಳ
ಕೆಂಡ (ಊದುವ ತಣ್ಣೇಳಲ್ ಇಂಗಳಮಾದುದು ಕುಸುಮಾಳಿ ಶಸ್ತ್ರಮಾದುದು ಬಿಸಿಲ್: ಉದ್ಭಟಕಾ, ೧೦. ೫೭)

ಇಂಗಳಗಣ್
ಬೆಂಕಿಯ ಕಣ್ಣು, ಉರಿಯುವ ಕಣ್ಣು (ದ್ರುಪದಾತ್ಮಜಾತಂ ಓವದೆ ಪುಡಿಯೊಳ್ ಪೊರಳ್ಚಿ ತಲೆಯಂ ತೆಗೆವಲ್ಲಿ ಪಿನಾಕವೆತ್ತವೋದುದೊ ಶರವೆತ್ತವೋದುದೊ ಲಲಾಟದಿಂ ಇಂಗಳಗಣ್ಣು ಅದೆತ್ತವೋದುದೊ: ಗದಾಯು, ೪. ೫೧)

ಇಂಗಿಣೀಮರಣ
[ಜೈನ] ಹತ್ತೊಂಬತ್ತು ಬಗೆಯ ಮರಣಗಳಲ್ಲಿ ಒಂದು; ಯತಿಯು ಸಂಗವನ್ನು ತೊರೆದು ಒಂಟಿಯಾಗಿದ್ದು, ಆಹಾರವನ್ನು ಬಿಟ್ಟು, ಉಪಸರ್ಗದಲ್ಲಿ ಉಪಚಾರ ಬಿಟ್ಟು ಸಮತೆಯಿಂದ ಹೊಂದುವ ಮರಣ (ಕ್ಷಮೆಯಂ ಭಾವಿಸಿ ಚತುರ್ವಿಧಮಪ್ಪ ಆಹಾರ ಶರೀರಮುಮಂ ತೊಱೆದು ಇಂಗಿಣೀಮರಣದಿಂ ಶುಭಪರಿಣಾಮದೊಳ್ ಕೂಡಿ: ವಡ್ಡಾರಾ, ಪು ೧೯೨, ಸಾ ೧೦)

ಇಂಗು
ಬತ್ತು (ಮೈಮೆ ಮಢಿಯಿತ್ತು ಉತ್ಸಾಹಂ ಇಂಗಿತ್ತು: ಗಿರಿಜಾಕ, ೮. ೧೬೨); ಹಿಂಗು (ಉಪ್ಪಿಲ್ಲಣಿಂಗು ಸಾಸವೆ ತಪ್ಪಿಲ್ಲದ ಮೆಣಸು ಸುಂಟಿ ಪೊಸಸುಣ್ಣಮಿವಂ ಚಪ್ಪರಿಸಿ ಬಡಿದು ಮೆಯ್ಯಂ ಸೊಪ್ಪಾಗಿರೆ ಮೋದಿ ಪೂಸುವರ್ ನಿರ್ದಯೆಯಿಂ: ಧರ್ಮಾಮೃ, ೩. ೪೨)


logo