logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಂತಿ
ಓತಿಕೇತ (ಈಗಳ್ ಕಪ್ಪೆಗಳುಂ ಎಸಡುಗಳುಂ ಇಲಿಗಳುಂ ಒಂತಿಗಳುಂ ಮೊದಲಾಗೊಡೆಯ ಜೀವರಾಶಿಗಳಂ ಕೊಂದು .. .. ನರಕಂಬುಗಲಾಟಿಸಿದಪ್ಪಯ್: ವಡ್ಡಾರಾ, ಪು ೧೪೦, ಸಾ ೪)

ಒಂದಲ್ಲದುದು
ಒಂದನ್ನು ಬಿಟ್ಟು (ಕೌರವನಾಯಕನ ಊರುಭಂಗಮೊಂದಲ್ಲದುದೆಲ್ಲಮಂ ನೆಱಪಿದೆಂ ಗಡಂ ಓಳಿಯೆ ಕೇಳಿಮೆಲ್ಲರುಂ: ಪಂಪಭಾ, ೧೨. ೧೬೧)

ಒಂದವಿಂದ
[ಒಂದು] ಅಸ್ತವ್ಯಸ್ತತೆ (ತೆಱನಱಯದೆ ಒಂದವಿಂದಂ ಜಱಚುವುದುಂ .. .. ಅಱಗುಲಿಯಪ್ಪವಂಗೆ ಸಹಜಮಿವಿನಿತುಂ: ಸಮಯಪ, ೧೩. ೫೮)

ಒಂದವಿಂದಿ
ಒಂದು ಗುಂಪಿಗೆ ಸೇರಿದ (ಪೊಂದಳಿರೊಳ್ ಒಂದವಿಂದಿಯಲ್ಲದದೊಂದು ನಾಡೆಯುಂ ಅಂದಂಬಡೆದು ಪೊಳೆವ ಪೊಂದಳಿರುಂ: ಆದಿಪು ನರಸಿಂ, ೪. ೪೧ ವ); ಹೊಂದಿಕೆ, ಸರಿದೊರೆಯಾಗು (ಮಹಾತ್ಮರಪ್ಪ ಪುರುಷರ್ಕಳ ವೃತ್ತಿಯಂ ಒಂದವಿಂದಿಯಪ್ಪಂತು ತಗುಳ್ಚಿ ಪೇೞ್ವ ಕಥೆಯಂತಿರೆ: ಹರಿವಂಶ, ೧. ೩೦)

ಒಂದಿಗ
ಜೊತೆಯವನು (ಕಿಱುಕುಳನಪ್ಪ ಎನ್ನೊಂದಿಗನಳ್ ಅನುಚಿತಮಿದಂ ನಿಮ್ಮಡಿ ಬೆಸಸಿ ಕಳೆಯಮತ್ಸಂಶಯಮಂ: ಶಾಂತಿಪು, ೫. ೯)

ಒಂದಲ್ಲದುದು
ಒಂದನ್ನು ಬಿಟ್ಟು (ಕೌರವನಾಯಕನ ಊರುಭಂಗಮೊಂದಲ್ಲದುದೆಲ್ಲಮಂ ನೆಱಪಿದೆಂ ಗಡಂ ಓಳಿಯೆ ಕೇಳಿಮೆಲ್ಲರುಂ: ಪಂಪಭಾ, ೧೨. ೧೬೧)

ಒಂದಿ ನಿಲ್
ಸೇರಿ ನಿಲ್ಲು, ಸಜ್ಜಾಗಿ ನಿಲ್ಲು (ಇತ್ತ ತಪದೊಳ್ ನರಂ ಇಂತು ಒಂದಿ ನಿಲೆ ತಪದ ಬಿಸುಪಿಂ ಬೆಂದೞದುದು ವನದೊಳುಳ್ಳ ತಪಸಿಯರ ತಪಂ: ಪಂಪಭಾ, ೮. ೧೦)

ಒಂದಿ ಬಾರದಂ
ಕೂಡಿ ಬರದವನು (ಅಖಿಳಶಾಸ್ತ್ರವಿಶಾರದನಪ್ಪನುಂ ಗೆಲಲ್ಕರಿಯನುಂ ಒಂದಿ ಬಾರದನುಂ ಅಂಕದ ಕರ್ಣನೆ: ಪಂಪಭಾ, ೯. ೬೧)

ಒಂದಿನಿಸು
ಒಂದಿಷ್ಟು, ಕೊಂಚ (ಪವನಸುತಂಗೆ ಪಾಸಟಿಗಳೊರ್ವರುಂ ಇಲ್ಲದಱಂದಂ ಆಂತ ಕೌರವಬಲದ ಉರ್ಕನೊಂದಿನಿಸು ಮಾಣಿಸಿ ಪೋಪಂ: ಪಂಪಭಾ, ೧೨. ೧೨೧)

ಒಂದಿಸು
ಕೂಡಿಸು, ಜೋಡಿಸು ಕೆಂದಾವರೆಯ ಸಲರ್ದ ಅಲರೊಳ್ ಒಂದಿಸುವಂತೆ ಅಳಿಕುಳಂಗಳಂ: ಕರ್ಣನೇಮಿ, ೧೩. ೭೭)


logo