logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಔಂಕು
ಅಮುಕು (ಚಕ್ರರತ್ನಮಂ ಮುಂದಿಟ್ಟು ಮಧ್ಯಮಖಂಡಮುಮಂ ಔಂಕಿ ಪೂೞೆ ಪೊಕ್ಕವಷ್ಟಂಭಿಸಿ ನಿಂದಾಗಳ್: ಆದಿಪು, ೧೩. ೫೬ ವ)

ಔಂಡುಗರ್ಚು
ಔಡು ಕಚ್ಚು, ತುಟಿ ಕಚ್ಚು (ಹುಂಕೃತಿಯಂ ಮಾಡುತುಂ ಔಂಡುಗರ್ಚಿ ಕಿಸುಗಣ್ಬಿಟ್ಟಚ್ಯುತಂ ರಂಜಿಕುಂ: ಜಗನ್ನಾವಿ, ೩. ೬೧)

ಔಘ
ಗುಂಪು (ನೀರಂ ಕುಡಿದು ಪದ್ಮಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂದ ಪೊಱಮಟ್ಟು: ಪಂಪಭಾ, ೮. ೩೯ ವ)

ಔಡು
ತುಟಿ (ಕರ್ಚಿದ ಓಡು ಉರ್ಚಿದ ಬಾಳ್ ಇಱಯಲನುಗೆಯ್ದ ಕೈ: ಗದಾಯು, ೪. ೨೭)

ಔಡೊತ್ತು
ತುಟಿ ಕಚ್ಚು, ಹಲ್ಲುಮಡಿ ಕಚ್ಚು (ಸಂಗರಸಮುತ್ಸಾಹ ಫಲಮಂ ಆಸ್ವಾದಿಪಂತಿರೆ ಓಡೊತ್ತುವ ನಾಳೆ ಕಾಳೆಗದೊಳ್ ಎಮ್ಮ ಕಲಿತನಕ್ಕೆ ನೀನೆ ಸಕ್ಕಿ: ಆಚವರ್ಧ, ೭. ೪೧ ವ)

ಔದಲೆಗಾಣ್
ಅಡಗು, ಗುಪ್ತವಾಗು (ಕೂರಿಸಿ ಕೂರ್ತ ನಿನ್ನ ಮೆಯ್ ಕಸವರಂ ಎನ್ನಂ ಇನ್ನುಸಿರದೆ ಓದಲೆಗಾಣ್ಬಿನಂ: ಕಾವ್ಯಾವಲೋ, ೩೦೪)

ಔದಾರಿಕತನು
ಮನುಷ್ಯ ಮತ್ತು ತಿರ್ಯಕ್ ಶರೀರವೇ ತನು (ಔದಾರಿಕತನು ನೆೞಲಂತಿರೆ ನೆಲಕೆ ವಂದುದು ಅಘಟನವಿಘಟನದಿಂ: ಶಾಂತಿಪು, ೧೨. ೩೩)

ಔದಾರಿಕವಪು
ಸ್ಥೂಲದೇಹ (ಸಹಜಸುರಭಿಗಂಧಬಂಧುರ ಔದಾರಿಕವಪುವಂ: ಆದಿಪು, ೭. ೧೦೬ ವ)

ಔದಾರಿಕಶರೀರ
ಔದಾರಿಕವಪು (ಪಂಚಾಷ್ಟಧನುಃಪರಿಮಿತ ಉತ್ಸೇಧಮುಂ ದಶಶಾಳಲಕ್ಷಣೋಪಜೀವಿತಮುಂ.. ..ಔದಾರಿಕ ಶರೀರಮಂ ತಳೆದು ಶಾಂತಿಕುಮಾರಂ: ಶಾಂತೀಶ್ವಪು, ೧೫. ೧೭ ವ)

ಔದುಂಬರ
ಉದುಂಬರ ಮರದಿಂದ ಹುಟ್ಟಿದ್ದು; ಅತ್ತಿಯ ಮರ (ಪಾಲಾಶ ಅಶ್ವತ್ಥ ಅರ್ಕ ಔದುಂಬರ ನ್ಯಗ್ರೋಧ ಶಮಿ ಅಪಾಮಾರ್ಗ ಖದಿರ ಆದಿ ಶುಷ್ಕಸಮಿತ್ತುಗಳುಮಂ ಕುಶ ಅಶ್ವಲಾಯನ ವಿಶ್ವಾಮಿತ್ರಾದಿ ದೂರ್ವಾಂಕುರ ಪವಿತ್ರವಸ್ತುಗಳುಮಂ ಕೊಂಡು: ಪಂಚತಂತ್ರ, ೧೯೦ ವ)


logo