logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಝಂಕರಣ
ಝೇಂಕಾರ (ಸರಸಿಜವನಂಗಳಲರ್ವಿನಂ ಇರಲಾಱದೆ ಬೇಗಮೆಱಗುವಳಿನೀನಿವಹದ ಝಂಕರಣಕ್ಕೆ ಕಾಯ್ಪುಗೊಂಡು: ಆದಿಪು, ೧೨. ೫೧)

ಝಂಕಾರ
ದುಂಬಿಗಳ ಮೊರೆತ (ದರದಳಿತಾಂಭೋರುಹದಳಪರೀತ ಪಟ್ಟದ ನಿಬದ್ಧ ಝಂಕಾರೈಕಾಕ್ಷರ ದಿವ್ಯಮಂತ್ರದಿಂದಂ: ಮಲ್ಲಿನಾಪು, ೫. ೪)

ಝಂಪಾಣ
ಮುಸುಕು (ಬಾಸಣಿಸಿದ ಮದನನ ಬಾಣಾಸನದವೊಲೆಸೆವ ಚಾರುಝಂಪಾಣದೊಳು: ಪುಷ್ಪದಂಪು, ೫. ೨೦)

ಝಂಪಾಳ
ಮೇಲ್ಮುಸುಕು (ದಾಡಿಮೀಫಲಂಗಳ ಮೇಲೆ ಮುತ್ತಿ ಝಂಪಾಳಂಗಳಂ ಕವಿಯಲುಂ .. .. ಪೋಗೆವೋಗೆ: ಕಾದಂಬ, ೬. ೨೫ ವ)

ಝಣಂಬ
ಮೇಲುಹೊದಿಕೆ (ಇಂದ್ರಜಾಲಿಗರ ಪಾಪೆಗಳುಂ ಸೀರೆಗಳುಂ ಝಣಂಬಮುಮಂ ತೊಟ್ಟು ಶ್ಮಶಾನದೊಳುರಿವ ಕಿಚ್ಚಿನ ಪಕ್ಕದೆ ನಿಂದಿರ್ದಳ್: ವಡ್ಡಾರಾ, ಪು ೧೯, ಸಾ ೧೨)

ಝಣಝಣಾಯಮಾನ
ಝಣಝಣ ಎನ್ನುವ (ಆತ್ಮೀಯ ಘನಜಘನದ ನುಣ್ಪಿನೊಳ್ ನುಣ್ಪುಮೆಗೆತ್ತು ಝಣಝಣಾಯಮಾನ ಮಣಿಕಿಂಕಿಣೀವಿರಾಜಿತ: ಆದಿಪು, ೪. ೪೧ ವ)

ಝಲ್ಲರಿ
ಒಂದು ಚರ್ಮವಾದ್ಯ (ಆಗಳ್ ಕುರುಧ್ವಜಿನಿಯುಂ ಅನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳ್ ಅಂತ ಕಾಲಾಂತಕ ವಿಕಟಾಟ್ಟಹಾಸಂಗಳ್ ಎಂಬಂತೆ ಮೊೞಗೆ: ಪಂಪಭಾ, ೧೧. ೩೩ ವ); ಕಂಚಿನ ತಾಳ (ಪಟುಪಟಹ ತುಣವ ಭಂಭಾ ಮರ್ದಳೆ ಝಲ್ಲರಿ ಮುಕುಂದ ತಾಳ ಕಾಹಳ ಶಂಖ ವಂಶ ವೀಣಾಸ್ವರಂಗಳೆಸೆಯೆ: ವಡ್ಡಾರಾ, ಪು ೮೪, ಸಾ ೨೮); ಜರಡಿ (ಝಲ್ಲರಿವೋಲ್ ಝಲ್ಲೆನೆ ಸೂಸಿ ನಿರ್ಝರಂ ಬೀೞ್ತರ್ಪಿನಂ: ನೇಮಿನಾಪು, ೮. ೧೧)

ಝಲ್ಲಿಸು
ದ್ರವಿಸು (ಕಲ್ಲಲ್ತೇ ಶಶಿಕಾಂತಂ ಝಲ್ಲಿಸುವುದು ಚಂದ್ರಕಿರಣಮಂ ತಗಲೊಡಂ: ಅನುಭವ, ೯೦)

ಝಷ
ಮೀನು (ಚಳತ್ಕದಳಿಕಾಮಾಳಂ ಝಷಾನೀಕಂ ಅಚ್ಚರಿಯಂ ಬಾಹುಬಲೀಶ್ವರಂಗೆ ಪಡೆದತ್ತು ಆತ್ಮೀಯಸೈನ್ಯಾರ್ಣವಂ: ಆದಿಪು, ೧೪. ೯೧ ವ)

ಝಷಕೇತನ
ಮೀನಿನ ಗುರುತುಳ್ಳ ಧ್ವಜವುಳ್ಳವನು, ಮನ್ಮಥ (ಪಾರ್ವತಿಯ ನವಯೌವನಂ .. .. ಝಷಕೇತನ ನಿಕೇತನ ತೋರಣ ರತ್ನಸ್ತಂಭಗಳಂತೆ: ಗಿರಿಜಾಕ, ೪. ೧೨ ವ)


logo