logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಗ್ನಿಶರೀರೆ
ಅಗ್ನಿಪ್ರವೇಶ ಮಾಡಿ ಕಿಚ್ಚಿಗರ್ಪಿಸಿದ ದೇಹವುಳ್ಳವಳು (ಅಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಂ ಅಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ: ಪಂಪಭಾ, ೧. ೮೦ ವ)

ಆಧ್ಯಯನ
ಬ್ರಾಹ್ಮಣನ ಷಟ್ಕರ್ಮಗಳಲ್ಲಿ ಒಂದಾದ ವೇದಾಧ್ಯಯನ (ಭವಿಷ್ಯದ್ವಿಜನ್ಮವರ್ಣಕ್ಕೆ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹ ಯಜನ ಯಾಜನ ವಿಶಿಷ್ಟವೃತ್ತಿಯುಮಂ: ಆದಿಪು, ೪. ೭೬ ವ)

ಆಶ್ರಮ
ಆಯಾಸವಿಲ್ಲದ, ನಿರಾಯಾಸ (ನಿರಾಳೋಚನೆಯಿಂದ ಅಶ್ರಮದೆ ಗೆಲ್ವ ಅತಿವೀರ್ಯನೆ ನೀನಿರಲ್ಕೆ: ಕರ್ಣನೇಮಿ, ೧. ೧೨೦)

ನಿರ್ದೇಶಕ ಅವ್ಯಯ (ಕಾವೇರಿಯಿಂದಂ ಆ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್: ಕವಿರಾಮಾ, ೧. ೩೬)

ಆಂಕೆ
ಹಿಡಿತ (ಖರಕರನ ಸಹಸ್ರ ಕರೋತ್ಕರದ ಆಂಕೆ ಕೞಲ್ದು ಕಿಡೆ: ಲೀಲಾವತಿ, ೬. ೮೭); ಪ್ರತಿಭಟನೆ

ಆಂಕೆಗೊಡು
ಆಸರೆ ನೀಡು (ಮಹೀಪತಿಸುತನ ಮನಮನಾಱಸಿ ಪರಕಾಯಪ್ರವೇಶಂಗೆಯ್ವಂತೆ ಮನಕ್ಕೆ ಮನಮಂ ಆಂಕೆಗೊಟ್ಟು: ಲೀಲಾವತಿ, ೪. ೬೬ ವ)

ಆಂಕೆಗೊಳ್
ಪ್ರತಿಭಟಿಸು, ಎದುರಿಸು (ಮೊನೆಯಂಬುಗಳ್ ಅಳ್ಗಿಡಿವೋಗೆಯುಂ ಮನಂಗಿಡಂ ಆಂಕೆಗೊಳ್ಳಂ ಅಗಿಯಂ ಸುಗಿಯಂ ಸುರಸಿಂಧುನಂದನಂ; ಪಂಪಭಾ, ೧೧. ೪೪)

ಆಂಕೆಯಾಳ್
ಪ್ರತಿಭಟಿಸುವ ಭಟ (ಪೊಱಮಟ್ಟಿಱವ ಆಳ್ಗಂ ಆಂಕೆಯಾಳ್: ಚಂದ್ರಪ್ರಪು, ೫. ೧೦೩)

ಆಂಗಿಕ
ದೇಹಕ್ಕೆ ಸಂಬಂಧಿಸಿದ (ಅಂಗೋಪಾಂಗಂಗಳೊಳೆಸೆವ ಆಂಗಿಕಮುಂ: ಆದಿಪು, ೯. ೨೮); ಒಂದು ಅಭಿನಯ ಪ್ರಭೇದ (ಅಂಗೋಪಾಂಗಂಗಳೊಲೆಸೆವ ಆಂಗಿಕಮಂ ಗಾನಪಾಠ್ಯದೊಳ್ ವಾಚಿಕಮಂ; ಆದಿಪು, ೯. ೨೮)

ಆಂಗೊಳಗು
ಹಸುವಿನ ಗೊರಸು (ಜಳಧಿಯ ನೀರನದೊಂದು ಆಂಗೊಳಗಿನ ನೀರೆಂದು ಬಗೆದು: ಆದಿಪು, ೧೩. ೪)


logo