logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಏ ಮತ್ತು ಆಕಾರಗಳು ಖಡಿ ಆದ ಒಂದು ಸಂಧ್ಯಕ್ಷರ (ಅಕಾರಮುಂ ಏಕಾರಮುಂ ಕೂಡಿ ಸಂಧಿಯಾಗೆ ಐಕಾರಂ ಪುಟ್ಟುಗುಂ: ಶಬ್ದಮದ, ೨೦, ವಿಚಾರಂ)

ಐಂದವ
ಇಂದು ಅಥವಾ ಚಂದ್ರನಿಗೆ ಸಂಬಂಧಿಸಿದ; ಬೆಳುದಿಂಗಳು (ಅಂಚೆ ಸಂಚಳಿಪನಂಗನ ಜಂಗಮಕಲ್ಪವಲ್ಲಿ ಮಂಜುಳಕರಪುಂಜವಂ ಕೆದಱುವೈಂದವ ಕೋರಕಜಾಲಮೆಂಬಿನಂ: ಅನಂತಪು, ೨. ೨೦)

ಐಂದವಬಿಂಬ
ಚಂದ್ರಬಿಂಬ (ಐಂದವಬಿಂಬ ರೌಪ್ಯಕುಂಭಗತಸುಧಾಮರೀಚಿಜಳಮಂ ಸುರಿದಂ ಸಲೆ ಕಾಲಪಾಮರಂ: ರಾಜಶೇವಿ, ೧೧. ೬೮)

ಐಂದ್ರ
ಇಂದ್ರಾಸ್ತ್ರ (ಕೆಳರ್ದು ಅಂದುಗ್ರರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ ಕಳವೇೞ್ದು ಇರ್ವರುಂ ಐಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರಸಂಕುಳದಿಂದ ಒರ್ವರಂ ಒರ್ವರ್ ಎಚ್ಚು: ಪಂಪಭಾ, ೧. ೭೯)

ಐಂದ್ರದಿಶೆ
ಇಂದ್ರದಿಕ್ಕು, ಪೂರ್ವ (ಆ ನಗೇಂದ್ರದ ಐಂದ್ರದಿಶಾಭಾಗದೊಳ್: ಚಂದ್ರಪ್ರಪು, ೧. ೭೫)

ಐಂದ್ರಬಾಣ
ಇಂದ್ರಾಸ್ತ್ರ (ಜ್ವಳನಪತತ್ರಿಯಂ ಕಡಿದು ವಾರುಣಪತ್ರಿಯಿಂ ಐಂದ್ರಬಾಣಮಂ ಕಳೆದು ಸಮೀರಣಾಸ್ತ್ರದಿಂ ಭೂಭುಜರೆಲ್ಲರಂ ಭಯಂಗೊಳಿಸಿ: ಪಂಪಭಾ, ೧೧. ೪೩)

ಐಂದ್ರಿ
ಇಂದ್ರನ ಮಡದಿ, ಶಚೀದೇವಿ (ಚಂದ್ರಲೇಖೆ ಚಂದ್ರ ಆದಿತ್ಯಪ್ರತಿಮರ್ ಐಂದ್ರಿಯವೋಲ್ ಅಪ್ರತಿಮಪ್ರಭರಂ ಪ್ರಸಿದ್ಧರಂ ಬಧು ಪಡೆದಳ್: ಪಂಪರಾ, ೧೦. ೭೦)

ಐಂದ್ರಿಯ
ಇಂದ್ರಿಯಗಳನ್ನು ಹೊಂದಿದಂತಹ (ಬಂದುದು ಉನ್ಮದೇಭದ ತೆಱದಿಂ ಹಿಮೋದಿತ ಮಹಾರುತಂ ಐಂದ್ರಿಯದೊಂದು ಮಾರುತಂ: ಕುಸುಮಾಕಾ, ೭. ೨)

ಐಂದ್ರಿಯಕ
ಇಂದ್ರಿಯಗೋಚರವಾದ, ಪ್ರತ್ಯಕ್ಷವಾದ (ಐಂದ್ರಿಯಕಂ ಪ್ರತ್ಯಕ್ಷಂ ಅತೀಂದ್ರಿಯಮಪ್ಪುದು ಪರೋಕ್ಷಂ: ಅಭಿಧಾವ, ೧. ೧೨. ೨೪)

ಐಂದ್ರೀತನೂದರಿ
ಪೂರ್ವದಿಕ್ಕು (ದಿವಸಶ್ರೀದೇವಿಗೆ ಐಂದ್ರೀತನೂದರಿ ತಂದುತ್ಸವದಿಂದೆ ತೋರ್ಪ ಅರುಣರತ್ನ ಆದರ್ಶಮೆಂಬಂತೆ .. .. ಭನುಬಿಂಬಂ: ಕುಸುಮಾಕಾ, ೪. ೭೯)


logo