logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ನಿಗಂಟು, ಘಟಕಂ
ಗಡಗೆ: ಶಬ್ದಮದ, ೨೬೯, ಪ್ರ)

ನಂಜಿನುರುಳಿ
ವಿಷದ ಉಂಡೆ (ಕಾಮತೆಯರ ಮೆಲ್ನುಡಿಯಂ ನಂಜಿನುರುಳಿಯೆನ್ನದೆ ಮುದ್ದುನುಡಿಯೆಂದೊಡಂ ತರುಣಿಯರ ಕುಚಯುಗಳಂ ಮೋಹರಾಜನ ಚಕ್ರಮೆನ್ನದೆ ಚಕ್ರವಾಕಮೆಂದೊಡಂ: ಧರ್ಮಾಮೃ, ೭. ೯೪ ವ)

ನಂಜು
ನಂಚಿಕೊ ಹಾಗೂ ವಿಷ (ನಂಜು ಈಷಲ್ಲೇಹನೇ ವಿಷೇ ಚ: ಶಬ್ದಮದ, ಧಾ ೨೨೬)

ನಂಜುಗುಡಿ
[ನಂಜು+ಕುಡಿ] ವಿಷ ಕುಡಿ (ದಿವ್ಯವಚನಮಂ ಅದಂ ಅಂತೇನುಂ ಬಗೆಯದೆ ಕುಡಿದು ಅಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ: ಪಂಪಭಾ, ೮. ೪೦)

ನಂಜುಗೊರಲ
ಕೊರಳಲ್ಲಿ ನಂಜುಳ್ಳವನು, ಶಿವ (ಆ ನಂಜುಗೊರಲನ ಗಾಡಿಯಂ ನೋಡಿ ಬಗೆಯೊಳ್ ಅಚ್ಚರಿವಡುತುಂ ಬಂದು ತುೞಲ್ಗೆಯ್ದು ಕೈಗಳಂ ಮುಗಿದು: ಕಬ್ಬಿಗಕಾ, ೧೩೧ ವ)

ನಂಜುನೀರ್
ವಿಷಯುಕ್ತ ನೀರು (ನಂಜುನೀರ್ ಪಿಡಿದು ನುಂಗುವುದಲ್ಲಿಯ ಮೀಂಗಳ್: ಆದಿಪು, ೫. ೮೮)

ನಂಜುರುಳಿ
ನಂಜಿನ ಉಂಡೆ, ವಿಷದ ಗುಳಿಗೆ (ಜೀವನಮೆಂಬುಬ್ಬೆಗದಿಂದೆ ನಂಗುರುಳಿಯಂ ಪೋ ನುಂಗಿದಳ್ ಪೇೞದಬ್ಜಿನಿಯೆಂಬಂತೆವೊಲಾಯ್ತು ಕುಟ್ಮಳಿತ ಕಂಜಾತೋದರೇಂದಿಂದಿರಂ: ಚಂದ್ರಪ್ರಪು, ೮. ೧೫)

ನಂಜೂಡು
ವಿಷ ಲೇಪಿಸು (ನಂಜೂಡಿದ ಸೂಜಿಗಳನುಳಿಪಿ ತುಂಬಿಯೊಲವನೇನಾಡಿದಳೊ ಸೂಜಿಗಳ ಕೂರ್ಪೊಡೆದ ಮೊನೆಯಲರ ಮೇಲೆ ನಾನಾವಿಧದಿಂ: ನೇಮಿನಾಪು ೩. ೧೦೦)

ನಂಜೂಱು
ವಿಷ ಸೇರಿಕೊ (ಒಂಭತ್ತು ಭೇದದ ನಂಜೂಱದ ಮುಪ್ಪು ಬಾರದ ಯುವತ್ವಂ ತೀರದುತ್ಕರ್ಷಣಂ: ಅನಂತಪು, ೬. ೧೭)

ನಂಟ
ಬಂಧು (ತಾಯ್ ಕೞ್ದೊಡೆ ಬಂದ ನಂಟರ ನಡುವೆ ಬಳೆದೊಡೆ ಆ ನಂಟರುಂ ಕೞದು ಉಳ್ಳರೆಲ್ಲಂ ಸತ್ತು: ವಡ್ಡಾರಾ, ಪು. ೭೭, ಸಾ. ೧೭)


logo