logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಎಂಜಲ್
ತಿಂದ ಮೇಲು ಉಳಿಯುವುದು (ನೀನೆ ಜಾತಿದೇವತೆಯಪ್ಪೊಡೆ ಎನ್ನೆಂಜಲನೆಂತು ತಿಂಬೆ: ಪಂಪಭಾ, ೮. ೪೩ ವ)

ಎಂಜಲಗುೞ್
ತಿಂದು ಉಳಿದ ಅಗುಳು (ಕೂೞ್ಪಡೆಯದೆ ಪೊೞಲೊಳಗೆ ಎಂಜಲಗುೞಂ ಆಯ್ದು ಅಲಸಿ ಕುಱುಕುತ್ತುಂ: ಧರ್ಮಾಮೃ: ೮. ೯೬ ವ)

ಎಂಜಲಿಸು
ಎಂಜಲುಮಾಡು. ಸವಿನೋಡು (ಅಮೃತಮಿರೆ ನಂಜನೆಂಜಲಿಸುವುದೇ: ಸಮಯಪ, ೧೧. ೧೫೩)

ಎಂಜಲೆವುೞು
ಎಂಜಲ ಅಗುಳು (ತಾವಿರ್ಬರುಂ ತಿರಿದು ತಂದಿಕ್ಕಿದೆಂಜಲೆವುೞುಮಂ ತಿಂದು ಪೆಸರುಮಿಲ್ಲದೆ ನಿರ್ನಾಮಿಕೆಯೆಂದು ಪೆಸರಾಗಿ ಬಳೆಯೆ: ಆದಿಪು, ೩. ೩೪ ವ)

ಎಂಟಡಿ
ಶರಭ (ದ್ವಿಶರಂ ತಾಯ್ದಪ್ಪಿ ಪಾಯ್ದ ಎಂಟಡಿಗೆ ಕುಟುಕಂ ಒಲ್ದು ಊಡುಗುಂ: ಶಬರಶಂ, ೨. ೬೫)

ಎಂಟುಂ ಕಿಲ್ಬಿಷಂಗಳ್
ಜ್ಞಾನಾವರಣೀಯ, ದರ್ಶನಾವರಣೀಯ, ಅಂತರಾಯ, ಮೋಹನೀಯ ಎಂಬ ನಾಲ್ಕು ಘಾತಿ ಕರ್ಮಗಳು ಹಾಗೂ ವೇದನೀಯ, ಆಯು, ನಾಮ, ಗೋತ್ರ ಎಂಬ ನಾಲ್ಕು ಅಘಾತಿ ಕರ್ಮಗಳು (ಪೆಣೆದೆಂಟುಂ ಕಿಲ್ಬಿಷಂಗಳ್ ಕಿಡೆ ಕಿಡದ ಗುಣಂ ಪೊರ್ದೆ ಬಂದು ಎಂಟುಂ: ಆದಿಪು, ೧. ೨)

ಎಂಟುಂ ಕೂಟಂಗಳ್
[ಜೈನ] ರುಚಕಾಚಳದ ಉತ್ತರ ದಿಕ್ಕಿನ ಎಂಟು ಶಿಖರಗಳು (ತದ್ಗಿರೀಂದ್ರೋತ್ತರ ಕಕುದ್ದೇಶದ ಸ್ಫಟಿಕ ಅಂಜನ ಕಾಂಚನ ರಜತ ರುಚಕ ಕುಂಡಳ ರುಚಿರ ಸುದರ್ಶನಂಗಳೆಂಬ ಎಂಟು ಕೂಟಂಗಳೊಳ್: ಆದಿಪು, ೭. ೩ ವ)

ಎಂಟುಂ ತೆಱದ ಪೂಜೆ
[ಜೈನ] ಇಜ್ಯೆಗಳು, ಕಲ್ಪದ್ರುಮ, ಚತುರ್ಮುಖ, ಸರ್ವತೋಭದ್ರ, ಐಂಧ್ರಧ್ವಜ, ಅಷ್ಟಾಹ್ನಿಕ, ಬಲಿ, ಸವನ, ತ್ರಿಸಂಧ್ಯಾಸೇವೆ ಎಂಬ ಎಂಟು ಬಗೆಯ ಪೂಜೆಗಳು (ಎಂಟುಂ ತೆಱದ ಪೂಜೆಯುಮಂ ಅರ್ಕಪೂಜೆಯುಮಂ ಮನ್ನಿಸಿ: ಆದಿಪು, ೧೫. ೧೩ ವ)

ಎಂಟುಗೆಯ್
ಎಂಟು ಭಾಗ ಮಾಡು (ದಕ್ಷಿಣೋತ್ತರ ತಟಂಗಳೊಳ್ ಒಂದೊಂದಱೊಳ್ ಎಂಟುಗೆಯ್ದು: ಮಲ್ಲಿನಾಪು, ೨. ೮)

ಎಂಟೆರ್ದೆ
ತುಂಬ ಧೈರ್ಯ (ಉರ್ಬಿನೊಳಾಂತು ಸೆಣಸಿ ಕಾದುವ ಜನಪಂಗೆ ಎಂಟೆರ್ದೆಯೆ: ಧರ್ಮಾಮೃ, ೪. ೧೪೭)


logo