logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಘಂಟಾಜಾಲ
ಗಂಟಗಳ ಸಮೂಹ (ಕನಕರಜತಮಣಿಮಯ ಘಂಟಾಜಾಲಪ್ರದೀಪಮಾಲೆಗಳಂ ನಿರ್ವರ್ತಿಸಿಯುಂ: ಅಜಿತಪು, ೧೨. ೪ ವ)

ಘಂಟಾಪಥ
(ಗಂಟೆ ಕಟ್ಟಿದ ಆನೆ ಮುಂತಾದವು ಸಾಗುವ) ಹೆದ್ದಾರಿ (ನೀಳ್ದು ಪರ್ಬಿದ ಘಂಟಾಪಥಂಗಳೊಳ್ ಅಲ್ಲಿಗಲ್ಲಿಗೆ ಪಾಂಥಜನದ ಜೀವನಕ್ಕೆ ಜೀವನವೆನಿಪ್ಪ ಪಾನೀಯಮಂಡಪದೊಳ್: ತ್ರಿಷಷ್ಟಿಪು, ೨. ೪೧ ವ)

ಘಂಟಾರವ
ಗಂಟೆಯ ಸದ್ದು (ದೇವಲೋಕದೊಳ್ ಶಂಖಪಟಹಕಂಠೀರವ ಘಂಟಾರವಂಗಳ್ ಒರ್ಮೊದಲೆಸೆವುದುಂ: ಶಾಂತಿಪು, ೧೦. ೧ ವ)

ಘಂಟಾರುತಿ
ಘಂಟಾರವ (ಕಂಠೀರವಸ್ವರ ಘಂಟಾರುತಿಗಳ್ ಯಥಾಕ್ರಮದಿನತ್ಯಾಶ್ಚರ್ಯಮೆಂಬನ್ನೆಗಂ: ಪುಷ್ಪದಂಪು, ೧೦. ೧೩)

ಘಂಟಿಕಾಜಾಲ
ಕಿರುಗಂಟೆಗಳ ಸಮೂಹ (ಆಲಂಬಿತ ಘಂಟಿಕಾಜಾಲ ಕುಸುಮದಾಮ ಚಾಮರೋದ್ದಾಮ ಚೀನಾಂಬರಾಚ್ಛಾದಿತಂಗಳ್: ಚಂದ್ರಪ್ರಪು, ೮. ೪೫ ವ)

ಘಂಟೆಯಲುಗು
[ಸೂಳೆಯ] ಮನೆಯ ಮುಂದಿನ ಗಂಟೆಯನ್ನು ಶಬ್ದಮಾಡು (ಮತ್ತಮಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿಱುಕುಳಬೊಜಂಗರುಮಂ ಸುಣ್ಣದೆಲೆಯಂ ಒತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮಂ ಒತ್ತೆಯಿಡಿಸಲಟ್ಟುವ ಚಿಕ್ಕ ಪೋರ್ಕುಳಿಬೊಜಂಗರುಂ: ಪಂಪಭಾ, ೪. ೮೭ ವ)

ಘಟ
ಗಡಿಗೆ (ಆ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದು ಅೞಯಿಂ ಪುಷ್ಪವಾಸನೆಗೆಂದಿಕ್ಕಿದ ನೀಳನೀರರುಹಮಂ ಪೋಲ್ದತ್ತು ಕೞಂದುವಾ: ಪಂಪಭಾ ಪರಿಷತ್ತು, ೪. ೫೧)

ಘಟಚೇಟಿಕೆ
ನೀರು ತರುವ ದಾಸಿ (ಕಮಳೆಯಂ ಅಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬ ಘಟಚೇಟಿಕೆಯಂ ತರ್ಪಂತೆ ತಂದು.. ..ಕೌರವೇಶ್ವರನಂ ಎಯ್ದೆ ಪೋಗಿ: ಪಂಪಭಾ, ೧೩. ೧೦೨ ವ)

ಘಟಜಾತ
ಗಡಿಗೆಯಲ್ಲಿ ಹುಟ್ಟಿದ ಅಗಸ್ತ್ಯ (ದಿಟದಿಂ ಪಯೋಧಿಯಂ ತಳತಟಮಂ ಸಾರ್ವಿನಂ ಅಮರಕುಳ ಕರಕಳಿತಂ ಘಟಜಾತಂ ಪೀರ್ದೊಡದು ಘಟಜಾತಂ ಪೀರ್ದನೆಂದು ನುಡಿವರ್: ಚಂದ್ರಪ್ರಪು, ೧೨. ೧೨೨)

ಘಟಪ್ರೋದ್ಭೂತ
ದ್ರೋಣ (ಶರಶಯ್ಯಾಗ್ರದೊಳ್ ಇಂತು ನೀಮಿರೆ ಘಟಪ್ರೋದ್ಭೂತಂ ಅಂತಾಗೆ ವಾಸರನಾಥಾತ್ಮಜಂ ಅಂತು ಸಾಯೆ: ಪಂಪಭಾ, ೧೩. ೬೯)


logo