logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ರಂಕು
ಮಚ್ಚೆಗಳಿರುವ ಜಿಂಕೆ (ಪರಿಣತ ರಂಕು ರೋಮತತಿ ಪಾಂಡುರಂ ಅಂದು ಶಶಾಂಕಮಂಡಲಂ: ಕಾದಂಬ, ೧. ೧೧೪)

ರಂಗ
ಬಣ್ಣದ ಹಸೆ, ರಂಗವಲ್ಲಿ (ನಡುಬೀದಿಯೊಳ್ ಪಶುಗಳ್ಪಡುವೆಡೆಯೊಳಂ ಊರ ಪಿರಿಯ ಚೌವಟ್ಟದೊಳಂ ತೊಡೆದು ಬರೆದಲ್ಲಿ ರಂಗಮನುಡಿಗೆಗಳಂ ಸುರಿದು ಸೂಸಿ ಕೆಡುವರ್ಮೂಢರ್: ಸಮಯಪ, ೯. ೧೨೯); ನರ್ತನರಂಗ (ಧರೆ ರಂಗಂ ಗಗನಂ ಮನೋಹರತರಂ ನಾಟ್ಯಾಲಯಂ ನರ್ತಕಂ ಸುರರಾಜಂ: ಆದಿಪು, ೭. ೧೨೭); ವೇದಿಕೆ (ಸಂಗತದಿಂ ಈಗಳ್ ಇಂತೀ ರಂಗಮೆ ರಣರಂಗಮಾಗೆ ಕಾದುವಂ ಅಳವಂ ಪೊಂಗದಿರ್ ಇದಿರ್ಚು ಅದೇಂ ಗಳ ರಂಗಂಬೊಕ್ಕಾಡುವಂತೆ ಪೆಂಡಿರ್ ಗಂಡರ್: ಪಂಪಭಾ, ೨. ೮೦)

ರಂಗಂಬೊಗು
ಪ್ರದರ್ಶನ ನೀಡಲು ವೇದಿಕೆಯನ್ನು ಪ್ರವೇಶಿಸು (ನಾಟ್ಯವಿದಯಾಚಾರ್ಯನಂ ಪೋಲ್ತು ರಂಗಂಬೊಕ್ಕು ಲೋಕಾಕಾರಮಂ ಅಭಿನಯಿಪಾಕಾರಂ ನೆಗೞೆ: ಆದಿಪು, ೭. ೧೧೫ ವ)

ರಂಗಕಾಱ
ಅಗಸ (ಬಿಡು ಬಿಡೆಂದು ರಣ ರಂಗಾರ್ಥಿಯಾಗಿ ರಂಗಕಾಱನ ಕೆಯ್ಯ ಸೀರೆಯಂ ಸೆಳೆಯಲನುಗೆಯ್ಯಲೊಡನೆ: ನೇಮಿನಾಪು, ೮. ೭೭ ವ)

ರಂಗತ್
ನರ್ತಿಸುವ, ಕುಣಿಯುವ (ರಂಗತ್ತರಂಗ ವಾರ್ಧಿಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ ಗಾಂಗೇಯನುಂ ಪ್ರತಿಜ್ಞಾಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ: ಪಂಪಭಾ, ೧. ೮೪)

ರಂಗಬಲಿ
ರಂಗೋಲಿ (ಅಂಗಣರಚಿತಮೌಕ್ತಿಕ ರಂಗಬಲಿಯುಂ ಬಲಿಕುಸುಮ ನಿಪತದಳಿಕುಳಾಬ್ಜ ಗೀತಮುಂ: ಆದಿಪು, ೪. ೫೮ ವ)

ರಂಗಭೂಮಿ
ರಂಗಸ್ಥಳ (ಪಾಂಡುಕಶಿಳಾತಳಮೆ ರಂಗಭೂಮಿಯಾಗೆ .. .. ನಿಳಿಂಪಭಾರತಿಕರೆ ನಟ್ಟುವರಾಗೆ: ಶಾಂತಿಪು, ೧೦. ೬೦ ವ); ವೇದಿಕೆ (ರತನದಿಂ ಬೆರಸಿದ ಬಣ್ಣದೊಳ್ ಮೆಱೆಯೆ ಕಟ್ಟಿಸಿ ಘಟ್ಟಿಸಿ ರಂಗಭೂಮಿಯಂ: ಪಂಪಭಾ, ೩. ೪೦)

ರಂಗವಲಿ
ರಂಗೋಲಿ (ಕತ್ತುರಿಯ ಸಗಣನೀರ್ ಬಿಡುಮುತ್ತಿನ ರಂಗವಲಿಮಿಳಿರ್ವ ದೇಗುಲದ ಗುಡಿ .. .. ಮನೆಗಳೊಳೆಲ್ಲಂ: ಪಂಪಭಾ, ೩. ೨)

ರಂಗವಲ್ಲಿ
ರಂಗೋಲಿ (ಅರಸರಾ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಿಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ: ವಡ್ಡಾರಾ, ಪು. ೨೬. ಸಾ. ೨)

ರಂಗಿತ
[ಮಗುವಿನ] ಹರಿದಾಟ, ಚಲನೆ (ದರಹಸಿತಂ ಹಸಿತಂ ಸುಂದರಮನ್ಮನಲಪಿತರುಚಿತರಂಗಿತಮೆಂಬೀ ಪರಿವಿಡಿಯ ಬಾಲಕೇಳಿಯೆ ಕರಮೆ ಮರುಳ್ಚಿದುದು ತಾಯುಮಂ ತಂದೆಯುಮಂ: ಆದಿಪು, ೮. ೩೮)


logo