logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಮನಸ್ಸಿನಿಂದ ಮೈಥುನಸುಖ
ಅನುಭವಿಸುವರು (ಅರ್ಧಮಾಸನಿರ್ಯತ್ ಸುರಭಿನಿಶ್ವಾಸನುಂ ಕಾಯಪ್ರವೀಚಾರನುಂ .. .. ಆಗಿ: ಆದಿಪು, ೨. ೬೯ ವ)

ಮಂಗಳವಸದನಂ .. .. ಪಂಚಶರಂ
ಪಂಚಸರಂ: ಶಬ್ದಮದ, ೩೦೪ ಪ್ರ)

ಮೊಮ್ಮೇತಿ
[ಬ್ರಹ್ಮಹತ್ಯಾ] ಪಂಚ ಮಹಾಪಾತಕಗಳಲ್ಲಿ ಒಂದಾದ ಬ್ರಾಹ್ಮಣನ ಕೊಲೆ (ನಿನಗೆ ಬೊಮ್ಮೇತಿಯಾಗೆ ಸಾವೆನೆಂದವರ ಕಾಣ್ಬಲ್ಲಿ ಒಂದು ಮರದೊಳ್ ಬಳ್ಳಿಯಂ ಕಟ್ಟಿ ಕೊರಲೊಳ್ ಸುತ್ತಿ ನೇಲ್ದು ಸತ್ತಳ್: ಜೀವಸಂ, ೧೦. ೩೭ ವ)

ಮಂಗಲತೊರಣ
ಶುಭಸಮಾರಂಭದಲ್ಲಿ ಕಟ್ಟುವ ತೋರಣ (ತ್ರಿಭುವನ ಮಂಗಲತೋರಣನಿಭಮಂ ಪ್ರವಚನಮನೆಯ್ದಿ ರೈಸ್ತಂಭಸಮಪ್ರಭರ್ ಅಂತರ್ನೀಭೃತೋನ್ನತವಿಭವರ್ ಭೂತಬಲಿ ಪುಷ್ಪದಂತಾರ್ಚಾರ್: ಚಂದ್ರಪ್ರಪು, ೧. ೧೫)

ಮಂಗಳ
ಶುಭಕರವಾದ; ಅಂಗಾರಕ; ಮಂಗಳಕರ ಗೀತೆ (ಮಂಗಳಮನೆ ಪಾಡುತ್ತುಂ ಮಂಗಳಧಾರಿಣಿಯರಾಗಿ ಮುಂದಂ ನಡೆವಾಶಾಂಗನೆಯರಿಂದೆ: ಆದಿಪು, ೭. ೪೮)

ಮಂಗಳಂಗಳ್
ಮಂಗಳ ವಸ್ತುಗಳು (ತದ್ಗುಹಾಕೂಟ ನಿವಾಸಿಯಪ್ಪ ನಾಟ್ಯಮಾಲಾಮರಂ ಸುವರ್ಣಪೂರ್ಣ ಕುಂಭಾದಿ ಮಂಗಳಂಗಳಿನಿದಿರ್ಗೊಳೆ ಗುಹಾದ್ವಾರದಿಂ ಪೊಱಮಟ್ಟಾಗಳ್: ಆದಿಪು, ೧೩. ೮೦ ವ)

ಮಂಗಳಂಬಾಡು
ಶುಭಕರವಾದ ಗೀತೆಯನ್ನು ಹಾಡು (ನೆರೆದೊಡನೆ ಮಂಗಳಂಬಾಡೆ ಗಾಯಕಗಣಂ ಕರಮೆ ಕಣ್ಗೆಸೆದುದು ನರೇಂದ್ರಭವನಾಂಗಣಂ: ಅಜಿತಪು, ೪. ೭)

ಮಂಗಳಕರ
ಶುಭಕರ (ಮಂಗಳಕರ ಭುವನಾಧಿಕ ಮಂಗಳನಂ ಅನಂತಬೋಧನಿಧಿಯಂ ನಿಧಿಗಳ್ ಸಂಗಡದೋಲಗಿಸುವುದು ಉಚಿತಂ ಗಡಮೆನೆ ನೆಲಸಿ ಗೋಪುರದೊಳೋಲಗಿಕುಂ: ಪಾರ್ಶ್ವನಾಪು, ೧೬. ೬೮)

ಮಂಗಳಕಾರಣ
ಶುಭಕ್ಕೆ ಕಾರಣವಾದ[ದ್ದು] (ಮಂಳಕಾರಣಪಂಚಪದಂಗಳಂ .. .. ಅಕ್ಷಯ ಮಂತ್ರಪದಂಗಳನೋದುವುದು ನೆಱೆಯೆ ನಿಶ್ಚಲಮತಿಯಿಂ: ಆದಿಪು, ೨. ೫೪)

ಮಂಗಳಕೇತು
ಶುಭಸೂಚಕವಾದ ಧ್ವಜ (ಮಂಗಳಕೇತುವಿರಾಜಿತಂ ಅಂಗೀಕೃತನೀಲಭಾನುತಮಸಂ ಪರಿಷತ್ಸಂಗಬುಧಗುರು ಕವಿರಾಜಂಗತಿನವಗ್ರಹಪರೀತಂ ಉದ್ವಾಹಗೃಹಂ: ಅನಂತಪು, ೬. ೪೮)


logo