logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಹಂಗ
ಶಕುನದ ಹಕ್ಕಿ (ಗಂಡಾದ ಅಕಾರಾಂತ ನಪುಂಸಕಕ್ಕೆ: ಕೋಣಂ ಹಂಗಂ ಹಸುಬಂ ಸರ್ಪಂ ಗರುಡಂ: ಶಬ್ದಮದ, ೧೩೨ ಪ್ರ)

ಹಂತಿ
[ಪಙ್ತಿ] ಸಾಲು (ಆನೆಗಳ್ ಕೆದಱದೆ ಹಂತಿಗೊಂಡ ನೆಗೞಂ ಪೊಸತೇರ್ ಪಡಗಂ ನೆಗೞ್ಚೆ ಪೆರ್ಚಿದ ಕಡಲು ಎಂಬಿನಂ: ಕಬ್ಬಿಗಕಾ, ೧೬೨)

ಹಂತಿದಪ್ಪು
ಸಾಲು ತಪ್ಪು (ಪೊರ್ಕುೞಯಂದಮೆ ಹಂತಿದಪ್ಪಿ ತಾಱುಂಬೞಯುಮ ತೆರಳ್ದ ಕುರುಳುಣ್ಮೆ ಬೆಮರ್ .. .. ಕೂಟದೊಂದು ಸವಿಯಂ ಪಿಸುಣಾಡುವೀ ಲತಾಂಗಿಯಾ: ಚಂದ್ರಪ್ರಪು, ೮. ೭೨)

ಹಂತುಕಾಮ
ಕೊಲ್ಲಬಯಸುವವನು (ಎಂದು ಹಂತುಕಾಮಂ ಧೂಮಕೇತು ಅಂತರಿಕ್ಷದಿಂ ಬರುತ್ತ ಈ ಕ್ಷಿತಿಯಂ ನಿರೀಕ್ಷಿಸುವುದುಂ: ಕರ್ಣನೇಮಿ, ೭. ೧೧೪ ವ)

ಹಂಸ
ಒಂದು ಪಕ್ಷಿ, ಮರಾಲ (ಅಂತೆಚ್ಚ ಕೋಲಿಂ ಮುನ್ನಮೆ ಸುರುಳ್ದುರುೞ್ದು ಹಂಸಂ ವಿಧ್ವಂಸನಮನೆಯ್ದಿತ್ತು: ಪಂಚತಂತ್ರ, ೧೯೮ ವ); ಕಾಂತಿ, ಕಿರಣ (ಸುಮನಸ್ತೋಮ ಅಂಬುಜಾತ ಸಮುದಯಹಂಸಂ ನಮಗನುಪಮ ಸುಖಮನೀಗೆ: ತ್ರಿಷಷ್ಟಿಪು, ೧. ೩); ಸೂರ್ಯ (ಗ್ರಹಪತಿ ಹರಿದಶ್ವಂ ತಮೋವೈರಿ ಹಂಸಂ ಸವಿತಾರಂ ಸೂರಂ ಅರ್ಕಂ ದ್ಯುಮಣಿ ತರಣಿ ಸಪ್ತಾಶ್ವಂ ಆದಿತ್ಯಂ: ಅಭಿಧಾವ, ೧. ೧. ೬೪)

ಹಂಸಕುಳ
ಹಂಸಪಕ್ಷಿಗಳ ಗುಂಪು (ಓಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಿಕಾ ಹಂಸಕುಳಂಗಳ್ ತಳವೆಳಗಾದುವು: ಪಂಪಭಾ, ೪. ೪೯ ವ)

ಹಂಸಗತಿ
ಹಂಸದಂತಹ ಮೆಲುವಾದ ನಡಿಗೆ (ಮಂಗಳಧಾರಿಣಿಯರಾಗಿ ಮುಂದಂ ನಡೆವ ಆಶಾಂಗನೆಯರಿಂದೆ ದಿವಿಜೇಂದ್ರಾಂಗನೆ ಕರಮೆಸೆದು ಹಂಸಗತಿಯೊಳ್ ಬಂದಳ್: ಆದಿಪು, ೭. ೪೮)

ಹಂಸಗ್ರೀವ
ಹಂಸದ ಕೊರಳು (ಹಂಸಗ್ರೀವನಿಹಿತ ಏಕಪಾದಂ ಇಳಾವಂದ್ಯಂ ಅನಿಂದ್ಯಂ ಅಬ್ಜಗರ್ಭಂ ಬಂದಂ: ಪಂಪಭಾ, ೧೨. ೧೩೮)

ಹಂಸಗ್ರೀವನಿಹಿತ ಏಕಪಾದಂ
ಹಂಸಪಕ್ಷಿಯಲ್ಲಿ ಇಟ್ಟ ಒಂದು ಪಾದವುಳ್ಳವನು (ಹಂಸಗ್ರೀವನಿಹಿತ ಏಕಪಾದಂ ಇಳಾವಂದ್ಯಂ ಅನಿಂದ್ಯಂ ಅಬ್ಜಗರ್ಭಂ ಬಂದಂ: ಪಂಪಭಾ, ೧೨. ೧೩೮)

ಹಂಸಚ್ಛದ
ಹಂಸದ ತುಪ್ಪುಳು (ಕರಿದಂತಂ ಚಮರೀರುಹಂ ಪುಲಿದೊವಲ್ ಹಂಸಚ್ಛದಂ .. .. ಚೂಡಾರತ್ನ ಮೆಂಬಿವನಾಂತರವನಾಂತರಸಂಜಾತಮಂ ಆತನೋಲಗಿಸಿದಂ ಸದ್ವಸ್ತುಸಂಘಾತಮಂ: ಪುಷ್ಪದಂಪು, ೫. ೧೦೨)


logo