logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಸಂಯತ್ತು, ಋಕ್
ಋಕ್ಕು, ಯಜುಸ್ ಯಜುಸ್ಸು: ಶಬ್ದಮದ, ೯೬, ಪ್ರ)

ಸಂಡಂ ಢಂಕಾ
ಡೆಂಕೆ: ಶಬ್ದಮದ, ೨೬೯ ಪ್ರ)

ಸೂಜಿ ಕಾಚಂ
ಗಜು ವಾಚನಾ

ಸಂಕಂಪಿತ
ಚಂಚಲವಾದ, ನಡುಗುವ (ಶಂಕಂಪಿತಂ ಮಿದಿಱೊಳ್ ಮಧ್ಯಮಂ ಮಂದ್ರಮೆಂಬೀ ಪಾಂಗಿಂ .. .. ಪ್ರೌಢೇ ಪಾಡುತ್ತುಮಿರ್ದಳ್: ಲೀಲಾವತಿ, ೨. ೩೦)

ಸಂಕಟ
ಇಕ್ಕಟ್ಟಾದ, ದುರ್ಗಮವಾದ (ಜಾನುಭಂಜನೀ ಶೂಲಪ್ರಕರ ಪರಿವೃತಂಗಳುಂ ಕೂಪಕೂಟಾವಪಾತ ಲೋಹಕಂಟಕಸಂಕಟಂಗಳುಂ .. .. ಅಪ್ಪ ದುರ್ಗಂಗಳೊಳ್: ಆದಿಪು, ೧೩. ೫೭ ವ); ವ್ಯಥೆ (ನಲ್ಲರಗಲ್ಕೆಗೆ ಕಣ್ಣ ನೀರ್ಗಳಮ ಮಿಡಿವ ಬಹುಪ್ರಕಾಸಂಕಟಮೊಪ್ಪಿದುದಾ ಪ್ರಯಾಣದೊಳ್: ಆದಿಪು, ೪. ೫೭); ತೊಂದರೆ (ಒರ್ವರಂ ಒರ್ವರ್ ಎಚ್ಚು ನಿಜಪೀಠಾಂಭೋಜದಿಂ ಬ್ರಹ್ಮನುಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್: ಪಂಪಭಾ, ೧. ೭೯)

ಸಂಕಡಿ
ಇಕ್ಕಟ್ಟು; ದುಃಖ; ರಿಕಾಪು (ಪತಿಗಲ್ಲದೆ ಪೆಱರ್ಗೆಡೆಗುಡದ ತೆಱದೆ ನಡೆವಿಡಿದ ಬೆನ್ನ ಸಂಕಡಿ: ಕುಸುಮಾಕಾ, ೮. ೫೩); ಗೊಂಚಲು (ಚಂದನದ ವಂದನಮಾಲೆಗಳಿಂ ಗೊಜ್ಜೆಯ ಸಂಕಡಿಗಳಿಂ: ಕುಸುಮಾಕಾ, ೧೨. ೧೫೭ ವ)

ಸಂಕಡಿಗೊಳ್
ದುಃಖಪಡು (ಮಾನಹಾನಿಯಿಂದಾದ ಬರ್ದುಂಕದೇವುದೆನುತುಂ ಸಲೆ ಸಂಕಡಿಗೊಂಡರಾ ನೃಪರ್: ಶಾಂತೀಶ್ವಪು, ೭. ೧೩೧)

ಸಂಕರ
ಮನೆಯ ಕಸ (ಸಂಕರಾಖ್ಯಮದು ಮನೆಯ ಕಸಂ: ಅಭಿಧಾವ, ೧. ೧೦. ೨೧)

ಸಂಕರ್ಷಣ
ಬಲರಾಮ (ಹರಿಯುಂ ಸಂಕರ್ಷಣನುಂ ಪರಮಾನಂದಪರರ್: ಕರ್ಣನೇಮಿ, ೬. ೧೩೪)

ಸಂಕಲೆ
ಬೇಡಿ (ಮನ್ನಣೆಯ ಮಾವಂತರುಮಂ ಆರೆಕಾಱರುಮಂ ಮೀಱ ಗೆಂಟಱೊಳ್ ನಿಂದು ನೋಡುವ ನುಡಿಗೆ ಗಿಱ್ಱನೆಯ್ದುವ ಸೊರ್ಕಾನೆಗಳ ಕಾಲ ಸಂಕಲೆಯ ಗೋಸದೊಳಂ: ಕಬ್ಬಿಗಕಾ, ೩೭ ವ)


logo