logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಶಂಕರ
ಶುಭಕರ (ಪ್ರೀತಿಂಕರ ಶಂಕರ ವಿದ್ಯಾತಿಶಯನಿಧಾನ ನಿನ್ನ ದಯೆವೆರಸಿದತಿಪ್ರೀತಿಯೊಳ್ ಆಂ ಅತ್ಯುತ್ತಮ ಜಾತಿಗಳೊಳ್ ಪುಟ್ಟಿ ಸುಖಮನುಣುತುಂ ಬಂದೆಂ: ಆದಿಪು, ೫. ೭೩)

ಶಂಕಾಂತರ
ಸಂದೇಹ (ಲತೆಗಳ್ ಜಂಗಮರೂಪದಿಂದೆ ನೆರದುವೋ ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)

ಶಂಕಾಕುಳಿತ
ಸಂಶಯದಿಂದ ಪೀಡಿತವಾದ (ಆ ಶಿಶುವಿನೞ ತೆಕ್ಕನೆ ತೀವಿತ್ತನಿತುಂ ದಿಕ್ತಟಮಂ ಭೋರೆನೆ ಶಂಕಾಕುಳಿತಮಪ್ಪಿನಂ ಭುವನಜನಂ: ಜಗನ್ನಾವಿ, ೩. ೧೨)

ಶಂಕಾಕುಳಿತಚಿತ್ತ
[ಶಂಕಾ+ಆಕುಳಿತಚಿತ್ತ] ಆತಂಕದಿಂದ ವಿಕಲಗೊಂಡ ಮನಸ್ಸು (ಯಮನಂದನನಿರ್ವರ ಬರವುಮಂ ಕಾಣದೆ ಶಂಕಾಕುಳಿತಚಿತ್ತನಾಗಿ: ಪಂಪಭಾ, ೮. ೪೦ ವ)

ಶಂಕಾಪನಯನ
[ಜೈನ] ಸಂದೇಹವಿಲ್ಲದಿರುವುದು (ಜಿನಮತ ಪದಾರ್ಥಶಂಕಾಪನಯನಮುಂ ಭೋಗಾಕಾಂಕ್ಷೆಯೊಳ್ ವಿಮುಖತೆಯುಂ: ಆದಿಪು, ೫. ೫೭)

ಶಂಕಾವಹ
ಸಂದೇಹವುಂಟುಮಾಡುವ (ಆಹವ ಮಹಾಹುಂಕಾರ ಕಾಳಕೂಟವಿಟಪಿಪ್ರದೋಹ ಶಂಕಾವಹ ನಾಭಿಕೂಪಾವಲಂಬಿತ ಕೂರ್ಚಕಳಾಪಂ: ಆದಿಪು, ೧೩. ೪೫ ವ)

ಶಂಕಿಸು
ಹೆದರು, ಹಿಂಜರಿ (ಬೆಸಸೆನೆಯುಂ ನುಡಿಯಲ್ ಶಂಕಿಸಿದಪೆಂ ಆಂ ಎಂದೊಡೆ ಏಕೆ ಶಂಕಿಸಿದಪೈ ನೀಂ ಬೆಸವೇೞ್: ಪಂಪಭಾ, ೧೨. ೯೦)

ಶಂಕು
ಕೊರಡು (ಶಂಕ್ವಾಖ್ಯಂ ತಾಂ ಕೊಱಡು: ಅಭಿಧಾವ, ೧. ೭. ೭)

ಶಂಖ
ಪಂಚಮಹಾವಾದ್ಯಗಳಲ್ಲಿ ಒಂದು (ಪಟುಪಟಹತುಣೌಭಂಭಾಮರ್ದಳೆ ಝಲ್ಲರಿ ಮುಕುಂದತಾಳ ಕಹಳ ಶಂಖವಂಶವೀಣಾಸ್ವರಂಗಳೆಸೆಯೆ: ವಡ್ಡಾರಾ, ಪು. ೮೪, ಸಾ. ೧)

ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ
ಶಂಖ, ಚಕ್ರ, ಚಾಮರ, ನೇಗಿಲುಗಳ ಗುರುತಿರುವ ಪಾದದ ಆಕಾರ, ಎಂದರೆ ಚಕ್ರವರ್ತಿಯ ಪಾದ (ಅರಿನೃಪಾಲಮೌಳಿಮಣಿಯೊಳ್ ನೆಲೆಗೊಂಡುದು ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ: ಪಂಪಭಾ, ೬. ೨೯)


logo