logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಕಾಶ (ಸುರಸರಣಿ ವಿಷ್ಣುಪದಂ ಅಂಬರಮ ವಿಯತ್ ಖ ವಿಹಾಯಸಂ ಗಗನಂ ಪುಷ್ಕರಂ ಆಕಾಶಂ ನಭಂ ಅಂತರಿಕ್ಷಂ ಅಂಭೋದಮಾರ್ಗಂ ಅಭ್ರಂ ವ್ಯೋಮಂ: ಅಭಿಧಾವ, ೧. ೧. ೫೭); ಇಂದ್ರಿಯ (ಖಂ ಇಂದ್ರಿಯ ಸ್ಪರ್ಶ ರೂಪ ರಸ ಗಂಧ ಶಬ್ದ ವಿಷಯಪ್ರವರಂ: ಅಭಿಧಾವ, ೧. ೧೨. ೨೩)

ಖಂಜ
ಕುಂಟ (ಪ್ರವೃತ್ತ ಖಂಜ ಮೂಕ ಕುಬ್ಜ ವಾಮನ ಕಿರಾತಜನಪುರಸ್ಸರಮುಂ .. .. ಎನಿಸಿದ ರಾಜಪರಿವಾರಮುಂ .. .. ಬರೆವರೆ (ಕಾದಂಬ, ೨. ೧೧೫ ವ)

ಖಂಜನ
ಗೀಜುಗ ಪಕ್ಷಿ (ಸಲಕ್ಷಣಸಂದರ್ಯಸ್ತ್ರೀಜನ ನೇತ್ರಚಾಂಚಲ್ಯೋಪಮೆಗೆ ಬಣ್ಣಿಸಲ್ ಯೋಗ್ಯಮಪ್ಪ ಖಂಜನಪುಂಜಮುಂ: ಪಂಚತಂತ್ರ, ೩೨೦ ವ)

ಖಂಡ
ತುಂಡು (ರತ್ನಕಂಬಳಮಗಳಂ ಕೊಂಡೋರ್ ಒಂದಱೊಳಂ ನಾಲ್ಕು ಖಂಡಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಸೊಸೆವಿರ್ಗೆ ಪಚ್ಚುಗೊಟ್ಟೊಡೆ: ವಡ್ಡಾರಾ, ಪು ೨೫ ಸಾ ೨೮); ಗುಂಪು, ಸಮೂಹ (ನಾಗರ ಖಂಡಂಗಳಂ ಆ ನಾಗರ ಖಂಡದೊಳೆ ತೊಡರೆ ನರಂ ಇಸುವುದುಂ ನಾಗರ ಖಂಡಂಗಳುಮಂ ನಾಗರ ಖಂಡಮುಮಂ ಅಳುರ್ದುಕೊಂಡಂ ದಹನಂ: ಪಂಪಭಾ, ೮೯)

ಖಂಡನೀಯ
ಕತ್ತರಿಸಲು ಶಕ್ಯವಾದ; ಒಡೆಯುವುದು ಅಲ್ಪದಶನಮಾತ್ರಖಂಡನೀಯ ಮಂಡಕಮುಮಂ: ಆದಿಪು, ೧೧. ೨೬ ವ)

ಖಂಡಪರಶು
ಪರಮೇಶ್ವರ (ಎಲೆ ಖಂಡಪರಶುವೆ ಕೇಳ್ ಸದಾಚಾರ ನಿಯತಾಚಾರ ಗಣಾಚಾರಂ ಎಂದು ಆಚಾರತ್ರಯಂಗಳ್: ತ್ರಿಷಷ್ಟಿಪು, ೨೨. ೪ ವ)

ಖಂಡಪ್ರಾಸ
ಆದಿಪ್ರಾಸ (ದೇಸಿಯನೆ ನಿಱಸಿ ಖಂಡಪ್ರಾಸಮಂ ಅತಿಶಯಮಿದೆಂದು ಯತಿಯಂ ಮಿಕ್ಕರ್: ಕವಿರಾಮಾ, ೧. ೭೫)

ಖಂಡಾತ್
[ಭರತ] ಖಂಡದಿಂದ (ಆಸೇತೋ ರಾಮಚಾಪ ಅಟನಿತಟಯುಗ ಟಂಕ ಅಂಕಿತ ಆಖಂಡಖಂಡಾತ್: ಪಂಪಭಾ, ೧೪. ೨೭)

ಖಂಡುಗ
ಒಂದು ಅಳತೆ (ಪಿಂಡಿಯಂ ಬಿಡಿಸವೋದ ಮರುಳ್ ಖಂಡುಗ ಎಣ್ಣೆಯನಾಂತು ಬಂದುದು ಎಂಬ ನಾಣ್ಣುಡಿಯಂತೆ: ಧರ್ಮಾಮೃ, ೫. ೫೦ ವ)

ಖಂಡೆಯ
ಒಂದು ಆಯುಧ (ತನತೊಪ್ಪುವ ಖಂಡೆಯ ರಾಯನೆನಿಪ್ಪ ಅಭಿದಾನಮಂ ದಿಟಂ ಪ್ರಕಟಿಪವೋಲ್: ಕುಸುಮಾಕಾ, ೭. ೬೭)


logo