logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ದಾಹೇ: ಶಬ್ದಮದ, ಧಾ ೬೮೯); ತಾಮ್ರದ ನಾಣ್ಯ (ಹಾಸು
.. .. ವಿವಧೇ ಚ: ಶಬ್ದಮದ, ಧಾ ೬೮೯); ಅಡ್ಡೆ, ಕಾವಡಿ (ಕೋಟಿಲಿಂಗಂಗಳಂ ಅನವರತಂ ಕಾಸಿನೊಳ್ ಪೊತ್ತ ಬಾಣಾಸುರನೆಂಬಂ ಪ್ರೀತಿಯಿಂ ಪೂಜಿಸುತಿರೆ: ಸಮಯಪ, ೧೦. ೫೮)

ದಂಟು
ತಾವರೆ ಮುಂತಾದುದರ ನಾಳ (ಪಿಡಿದ ಬಿಲ್ಲೆ ದಂಟೊಂಗೆಣೆ ಕಣ್ಗೆಟ್ಟ ಮುದುಪಂಗೆ: ಪಂಪಭಾ, ೧೦. ೧೭)

ದಂಡ
ದಂಡನೆ; ಕೋಲು (ನೋೞ್ಪವೊಲ್ ಇರದೆ ಊಱುವ ದಂಡವೆರಸು ಬರ್ಪನನಾಗಳ್: ಜೀವಸಂ, ೧೧. ೫೩)

ದಂಡಂಗೊಳ್
ದಂಡನೆಗೊಳಗಾಗು (ಲೆಂಕರ್ ದಂಡಂಗೊಂಡರಂತೆ ಶಂಕಿಸುತ್ತುಂ ಪೆಱಪಿಂಗೆ ಪರಿಚಾರಕಿಯರ್ ಇರಲಾಱದೆ ನುಸುಳ್ದೊಡೆ: ಧರ್ಮಾಮೃ, ೪. ೯೭ ವ)

ದಂಡಕಪಾಳಹಸ್ತ
ಕೈಯಲ್ಲಿ ಯೋಗದಂಡ ಮತ್ತು ಭಿಕ್ಷಾಪತ್ರೆಯುಳ್ಳವನು (ಅಂತು ನೀಲಾಂಬುದಶ್ಯಾಮನುಂ ಕನಕಪಿಂಗಳ ಜಟಾಬಂಧಕಳಾಪನುಂ ದಂಡಕಪಾಳಹಸ್ತನುಂ ಕೃಷ್ಣ ಮೃಗತ್ವಕ್ಪರಿಧಾನನುಮಾಗಿ: ಪಂಪಭಾ, ೧. ೬೯ ವ)

ದಂಡಕಾಷ್ಠ
ದಂಡಗೋಲು (ನೀರದಪಥದೊಳ್ ತಗುಳ್ದು ಅರಿಗನಂ ಪೊಗೞ್ದಾಡಿದಂ ಅಂದು ದಂಡಕಾಷ್ಠದ ತುದಿಯೊಳ್ ಪಳಂಚಲೆಯೆ ಕೋವಣವಂ ಗುಡಿಗಟ್ಟಿ ನಾರದಂ: ಪಂಪಭಾ, ೧೨. ೨೧೯)

ದಂಡಕ್ರಿಯಾ
[ಜೈನ] ಕೇವಲಿಯ ಆತ್ಮವು ಮೂಲಶರೀರದಿಂದ ಮೂರರಷ್ಟು ದಪ್ಪವಾಗಿಯೂ ಲೋಕಾಕಾರದಷ್ಟು ಉದ್ದವಾಗಿಯೂ ವ್ಯಾಪಿಸುವುದು (ದಂಡಕ್ರಿಯಾಕರಣಾನಂತರ ಸಮಯದೊಳ್ ಪೂರ್ವೋಕ್ತಬಾಹುಲ್ಯದಿಂ ಲೋಕಾಕಾಶ ವ್ಯಾಪಕಕವಾಟಕ್ರಿಯೆಯಂ ನೆಱಪಿ: ಆದಿಪು, ೧೬. ೪೯ ವ); [ಜೈನ] ದಂಡ, ಕವಾಟ, ಪ್ರತರ, ಲೋಕಪೂರಣ ಎಂಬ ಸಮುದ್ಘಾತಕ್ರಿಯೆಗಳಲ್ಲಿ ಒಂದು (ಚತುರ್ದಶ ರಜ್ಜ್ವಾಯಾಮಾತ್ಮತ್ರಿಗುಣ ಪ್ರಮಾಣಾತ್ಮಪ್ರದೇಶ ವಿಸರ್ಪಣದಿಂ ದಂಡಕ್ರಿಯಾಕರಣನಂತರಸಮಯದೊಳ್: ಆದಿಪು, ೧೬. ೪೯ ವ)

ದಂಡಖಂಡ
ಚಿಕ್ಕ ಕೋಲು (ದಂಡಖಂಡಾಘಾತದೊಳು ಮುದಿರ್ದು ನೆಲದೊಳ್ ಬಿರ್ದ ನೇಱಲ ಪಣ್ಗಳಂ .. .. ಸಾರ್ಚಿ ಕೊಟ್ಟು: ಸುಕುಮಾಚ, ೪. ೬೩ ವ)

ದಂಡತೋರಣಕ
ನೀರೆತ್ತುವ ರಾಟೆಯ ಅರೆಕಾಲುಗಳ ಪಂಕ್ತಿ (ಮಲಜಯವಾರಿಯಿಂ ಕುಳಿರ್ವ ಬಾವಿಗಳಲ್ಲಿ ಮೃಣಾಳದಂಡಮಂಡಲಿಗಳ ದಂಡತೋರಣಕದಿಂ .. .. ಸಮೆದಾಡುವ ಱಾಟಳಂಗಳಂ: ಕಾದಂಬ, ೭. ೨೧)

ದಂಡತ್ರಯ
[ಜೈನ] ಮನಸ್ಸು, ದೇಹ, ಮಾತುಗಳಿಗೆ ಸಂಬಂಧಿಸಿದ ಮೂರು ಬಗೆಯ ದೋಷಗಳು (ಮಣೊದಂಡ ವಾಗ್ದಂಡ ಕಾಯದಂಡಮೆಂಬ ದಂಡತ್ರಯಮಂ ಪರಿಹರಿಸುತ್ತುಂ: ಅಜಿತಪು, ೭. ೮ ವ)


logo