logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ವೀನಂಬುೞು
ಮಿಂಚುಹುಳು (ಮುಂಬಿಟ್ಟು ಪರೆವ ಕೞ್ತಲೆಯಂ ಚೆದಱೆ ತೆರಳ್ಚಿ ಬೆಳಪ ಬೆಳಗಿಂದೆಸೆದಿರ್ಪಂಬುಜ ಸಖನಂತಿರೆ ಮೀನಂಬುೞು ಬೆಳಗಿಪುದಖಿಳ ಗಗನಾಂತರಮಂ: ಕಾವ್ಯಾವಲೋ, ೬೮೨)

ವಂಕ
ವಕ್ರ (ಕಲಿಗಳ ಕಾಪಿನ ವಂಕದ ಪುಲಿಮೊಗದತಿ ಲಸಿತ ವಾಕವಾಟಂಗಳ: ತ್ರಿಷಷ್ಟಿಪು, ೧೭. ೨೧)

ವಂಕದರ
ಕೋಟೆಯ ಪಕ್ಕದ ಚಿಕ್ಕ ಬಾಗಿಲು, ವಕ್ರದ್ವಾರ (ಕೋಟೆಗಾವಗಂ ಕೆಡಪುವ ಗಗ್ಗೆ ವಂಕದರದಿಂ ಪೊಱಮಟ್ಟುೞವ ಆಳ್ಗಂ: ಚಂದ್ರಪ್ರಪು, ೫. ೧೦೬)

ವಂಕದಾರ
ಕೋಟೆಯ ಪಕ್ಕದ ಚಿಕ್ಕ ಬಾಗಿಲು (ಆ ಕುಮಾರನ ಲಕ್ಷ್ಮೀಮಂದಿರಕ್ಕೆ ವಂದು ವಂಕದಾರದೊಳ್ ನಿಂದು: ಸುಕುಮಾಚ, ೧೦. ೧೧೭ ವ)

ವಂಕಿ
ಚಂದ್ರಾಯುಧ (ಪಾಶದ ಅಂಕುಶದ ವಂಕಿಯ ಲೌಡಿಯ ಜವದಾಡೆಯ .. .. ಮೆಱೆದು ನೆರೆದ ಪದಾತಿವ್ಯೂಹದಿಂ: ರಾಜಶೇವಿ, ೬. ೧೧ ವ)

ವಂಗಡ
ಗುಂಪು, ಸಾಲು (ಜಕ್ಕವಕ್ಕಿಗಳ ವಂಗಡಂ ಇಂಬಱದಿರ್ಪ ಗಂಡುಗೋಗಿಲೆಗಳ ತಂಡಮೊಪ್ಪೆ ಬಗೆಗೋಲಗಮೊಪ್ಪಿದುದಂದು ಕಾವನಾ: ಕಬ್ಬಿಗಕಾ, ೧೦೧)

ವಂಚನೆ
ಮೋಸ (ಪಸುಗೆ ನೆಲಂ ಜಲಂ ಹಯದೊಡಂಬಡು ವಂಚನೆ ಕೇಣಂ ಆಸನಂ ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಣ್ಕೆ ಪರ್ವಿದ ಏರ್ವೆಸನದೊಳಾದ ಬಲ್ಮೆಯೊಳ್ ಒಡಂಬಡೆ ತಳ್ತಿಱವಲ್ಲಿ ಮಿಂಚಿನೊಳ್ ಮುಸುಕಿದ ಮಾೞ್ಕೆಯಾಯ್ತು ಸಮರಾಂಗಣಂ ಉಳ್ಕುವ ಬಾಳ್ಗಳ ಉಳ್ಕದಿಂ: ಪಂಪಭಾ, ೧೦. ೭೮); ಪಂಚತಂತ್ರಗಳಲ್ಲಿ ಒಂದು: ಇತರರ ಮನಸ್ಸನ್ನರಿತು ಸಂಧಾನ ಮಾಡಿ ವಂಚಿಸುವುದು (ಪೆಱರ ಬಗೆಯಱದು ಸಂಧಾನಂಗೆಯ್ದು ವಂಚಿಸುವುದು ವಂಚನೆ ಎಂಬುದು: ಪಂಚತಂತ್ರ, ೭೧ ವ)

ವಂಚಿಸು
ಮೋಸಮಾಡು; ಮುಚ್ಚಿಡು, ತಪ್ಪಿಸು (ಎನ್ನಂ ವಂಚಿಸಿ ಬಂದುದಱಂ ನಿನಗಿನಿತಾಯ್ತು ಅವಸ್ಥೆ ಕುರುರಾಜಾ: ಗದಾಯು, ೯. ೨೪)

ವಂದನಮಾಳಾ
ತೋರಣ (ಸಂಛನ್ನ ವಂದನಮಾಳಾ ಲಲಿತಾಂಸುಕಧ್ವಜವಿಳಾಸಾಕೀರ್ಣಮಂ ಮೆಚ್ಚಿ ಪೊಕ್ಕಂ ಅಯೋಧ್ಯಾಪುರಮಂ: ಆದಿಪು, ೧೪. ೧೪೯)

ವಂದನಮಾಳೆ
ತೋರಣ (ವಂದನಮಾಳೆಗಳಿಂದ ಸ್ಪಂದಿತಕೇತುಗಳಿನೆಸೆವ ನಿಜಮಂದಿರದೊಳ್ ತಂದು ಕುಮಾರನಂ ಇರಿಸಿದನಂದು: ಕರ್ಣನೇಮಿ, ೫, ೩೮)


logo