logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಪ್ರೀತಿಸು (ಧರಾಭರಮನಶೇಷಮಂ ನಿಜತನೂಭರ್ಗೆ ಓವದೆ ಪಚ್ಚುಕೊಟ್ಟು: ೯. ೭೫); ಓ ಎಂದು ಉತ್ತರಿಸು; ಸಲಹು (ಆವ ಅಲರುಂ ಪಣ್ಣುಂ ಬೀತು ಓವುವು ಗಡ ಬೀಯವಲ್ಲಿ ಮಲ್ಲಿಗೆಗಳುಂ ಇಮ್ಮಾವುಗಳುಂ ಎಂದೊಡೆ ಇಂ ಪೆಱತಾವುದು ಸಂಸಾರಸಾರಸರ್ವಸ್ವಫಲಂ: ಪಂಪಭಾ, ೧. ೫೫); ಉಪಚರಿಸು (ವಿಕ್ರಾಂತತುಂಗಂ ಇರ್ಪನ್ನೆಗಂ ಇತ್ತಲ್ ಎರಡುಂ ಪಡೆಯ ನಾಯಕರ್ ಅೞಯೆ ನೊಂದ ತಮ್ಮ ಅಣುಗಾಳ್ಗಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಗಳಂ ಉಡಿಯಲುಂ ಓವಲುಂ ಮರ್ದುಬೆಜ್ಜರುಮಂ ಅಟ್ಟುತ್ತುಂ: ಪಂಪಭಾ, ೧೧. ೨ ವ)

ಓಂಕಾರ
ಪ್ರಣವಾಕ್ಷರ (ಕಾಲಾಂತಕಂ ಶಂಕರನೋಂಕಾರಂ: ರಾಜಶೇವಿ, ೧೪. ೧೫೩): ಆರಂಭಮಂಗಳ ಮತ್ತು ಅಂತ್ಯಸೂಚಕ (ಆರಂಭಮಂಗಳಾದಿಯೊಳ್ ಓರಂತೆ ಓಂಕಾರಂ: ಅಭಿಧಾವ, ೩. ೧. ೧೧೨)

ಓಂತಿ
ಓತಿಕೇತ (ನರಿ ನಾಯ್ ಬೆಕ್ಕು ಓಂತಿ .. .. ಕಾೞ್ಕೋೞ ಎಂಬ ತಿರಿಕವ್ರಾತಂಗಳೊಳ್ ಸಂಭವಿಸಿ; ಧರ್ಮಾಮೃ, ೧೩. ೧೦೩)

ಓ ಓ
ಕಾಪಾಡಿ ಕಾಪಾಡಿ (ಆವರಿಸಿತ್ತೊ ನಭೋಂತರ್ಭೂವಿವರಮಂ ಅಮರ್ದಿನೆಸಕಂ ಎನೆ ಬಿರಯಿಗಳ್ ಓ ಓ ಇದು ಮದನನ ಸೋದನದೀವಿಗೆಯೆನೆ ತೊಳಗಿ ಬೆಳಗಿದುದು ತುಹಿನಕರಂ: ಪಂಪಭಾ, ೪. ೫೨)

ಓಕ
ಆಶ್ರಯ, ಮನೆ (ಎಲೆ ವಿದ್ಯಾಧರನಾಥ ದೇವಿ ಪಡೆದಳ್ ಭೂಭಾನುವಂ ಸೂನುವಂ ಲಲಿತಾಗಣ್ಯವರೇಣ್ಯ ಲಕ್ಷಣಮಣಿವ್ರಾತ ಓಕನಂ ತೋಕನಂ: ಶಾಂತೀಶ್ವಪು, ೪. ೪೪); ಸ್ಥಾನ (ಓಕಂ ಸ್ಥಾನಮುಂ ಆಗರಮುಂ ತಾನಕ್ಕುಂ: ಅಭಿಧಾವ, ೩. ೧. ೨೦)

ಓಕರಿಸು
ಕಾರು, ವಾಂತಿಮಾಡು (ಓ ಎಂದು ಓಕಱಸಿ ನರೇಂದ್ರನ ಮೇಲೆ ಕಾಱದನಾಗಳ್: ಧರ್ಮಾಮೃ, ೪. ೧೦೦)

ಓಕಃಪ್ರಾಂಗಣ
ಮನೆಯ ಅಂಗಳ (ಮಣಿಹರ್ಮ್ಯಶ್ರೇಣಿ ಕೇಳೀವನವಿಳಸಿತ ಮಾನವ್ಯಪುಷ್ಪೋಹಾರೋಲ್ಬಣ ಓಕಃಪ್ರಾಂಗಣಂ ಸಸ್ಮಿತ ಸರಸಿಜ ಕಾಸಾರಂ: ಶಾಂತೀಶ್ವಪು, ೧೩. ೧೬೧)

ಓಕುಳಿ
ಬಣ್ಣದ ನೀರು (ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್ ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦)

ಓಗಂಬಾಡು
ಸುಪ್ರಭಾತ ಹಾಡು (ನಿನಗೆ ಓಗಂಬಾಡುವ ಯುವತಿನಿಕಾಯದ ದನಿಗೆ ಸೆಣಸುವಂತೆವೊಲ್ .. .. ಮೊರೆವುವಳಿಗಳ ಬಳಗಂ: ಆದಿಪು, ೧೨. ೫೦)

ಓಗಡಿಸು
ಹಾಳಾಗು (ಮೂರ್ಖಜಡಜನಾರಣ್ಯದೊಳ್ ಇಂಪು ಓಗಡಿಸಿದ ಕವಿಶಬ್ದಮದು ಏಗೆಯ್ದುದು ಅರಣ್ಯರುದಿತಂ ಬಗೆವಾಗಳ್: ಆದಿಪು, ೧. ೨೩); ಬೇಸರ ತೋರು (ಪೂಮಾಲೆಯಂ ಓಗಡಿಸದೆ ಕುಡುವಮರಿ ಕಲ್ಪಲತೆಯಂ ಪೀಲ್ತಳ್: ಆದಿಪು, ೭. ೧೧); ಹಿಂಜರಿ (ನಡೆಯೆ ಚಟುಳತೆಗೆ ಕಣೆಯಂ ಸಡಿಲ್ದೊಡೆ ಅದಂ ಎಡದ ಕೆಯ್ಯೊಳ್ ಓಸರಿಸುತ್ತುಂ ನಡೆದು ಗವಾಕ್ಷಂಬರಂ ಓಗಡಿಸದೆ ನವವರನಂ ಅಬಲೆ ನೋಡಿದಳೊರ್ವಳ್: ಶಾಂತಿಪು, ೬. ೯); ಅಸಹ್ಯಪಡು (ಬಿಡದೆ ಅೞಲ್ವ ಬಂಧುಜನದ ಒೞ್ಕುಡಿಯದ ಕಣ್ಣೀರ ಪೂರಂ ಆ ಪ್ರೇತಮಂ ಓಗಡಿಸದೆ ಸುಡುವುದು ಗಡಂ ಇನ್ನುಡುಗುವುದೀ ಶೋಕಮಂ ಸರೋಜದಳಾಯತಾಕ್ಷೀ: ಪಂಪಭಾ, ೨. ೨೮)


logo