logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಡಂಕೆ
ಸರಳು, ಸಲಾಕೆ (ಬೇಗಂ ಮಂಡೆಯನಿರ್ಪೋೞಾಗಿರೆ ಕರ್ಬುನದ ಡಂಕೆಯಿಂ ಪೊಯ್ವುದುಂ: ಧರ್ಮಾಮೃ, ೭. ೬೩)

ಡಂಗ
ಸುಂಕವಸೂಲಿಗಾಗಿರುವ ಕಾವಲು ಕಟ್ಟೆ (ಪೊಂಗುವ ಮಲೆಪರ ಮಲೆಗಳ ಡಂಗಂಗಳ್ ಮಲೆವ ಮಂಡಲಂಗಳ್ ಪ್ರತ್ಯಂತಗಳ್ ಎನಲ್ ಒಳವೆ ಪಾಂಡವರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ: ಪಂಪಭಾ, ೯. ೩೯)

ಡಂಗುರಂಬೊಯ್ಲು
ಡಂಗುರ ಸಾರಿಸು (ಕುಮಾರನನೆತ್ತಿದಂಗೆ ಬೇಡಿತ್ತಂ ಕುಡುವೆನೆಂದು ಡಂಗುರಂಬೊಯ್ಸಲೊಡಂ: ಪಂಚತಂತ್ರ, ೧೮೫ ವ)

ಡಂಗೆ
ದೊಣ್ಣೆ, ಕೋಲು (ಕಬ್ಬುನದ ದಬ್ಬಣಂUಳಂ ದಬ್ಬುಕದ ಡಂಗೆಗಳಿಂ ಬೆರಲ್ಗಳೊಳಡಂಗೆ ಬೆಟ್ಟುವುದುಂ ಪಲ್ಗಳಂ ನುರ್ಗ್ಗುಗಟ್ಟುವುದುಂ: ಸುಕುಮಾಚ, ೧೧. ೪೭ ವ)

ಡಂಗೆಗೊಳ್
ಹಟಹಿಡಿ (ಪರಮಾರ್ಥಮಪ್ಪುದಂ ಮಚ್ಚರಿಸದೆ ಕೋಪಿಸದೆ ಡಂಗೆಗೊಳ್ಳದೆ: ಧರ್ಮಾಮೃ, ೧. ೧೩೭); ಬಡಿಗೆಯನ್ನು ತೆಗೆದುಕೊ (ಡಂಗೆಗೊಂಡು ಬಡಿಯಲ್ ಚಲದಿಂದೆನಸುಂ ದುರಾಗ್ರಹಂ ಚಿತ್ತದೊಳಾಗೆ: ಕಾವ್ಯಾವಲೋ, ೪೫೧)

ಡಂಗೆಯಂಗೊಳ್
ಬಡಿಗೆಯನ್ನು ತೆಗೆದುಕೊ (ಡಂಗೆಯಂಗೊಂಡು ಕೆಂಗಲ್ಮಸಗಿ ಪರಿವ ಮರುಳ್ಗಲಿಗಳುಂ: ಲೀಲಾವತಿ, ೫. ೧೧೪ ವ)

ಡಂಬ
ತೋರಿಕೆ, ಮೋಸ (ಸತ್ತನೆ ಮತ್ತೆ ಪುಟ್ಟುವಂ ಗಡ ಪುಸಿ ಕಾಣ ಡಂಬವಿದು ಖೇಚರ ನೀನಿದನೆಂತು ನಂಬಿದೋ: ಆದಿಪು, ೨. ೮)

ಡಂಬಕ
ಮೋಸಗಾರ (ತಮತಮಗೆ ಡಂಬಕರ್ ಬಲ್ಲೆವೆಂದು ಛಿದ್ರಿಸಲೆ ವಾಜವಶ್ಯವಯಸ್ತಂಭಮಂ: ಸಮಯಪ, ೧೨. ೪೦)

ಡಂಬಲ
ಹುಚ್ಚಾಟ (ತರುಣಿ ಪೋಗದಿರೆನುತುಂ ಬೆಂಬತ್ತಿ ನಡೆದು ಕಾಣದೆ ಡಂಬಲನಂ ನೋಡಿ ಮುಗ್ದೆ ನಗಿಸಿದಳಾಗಳ್: ಗಿರಿಜಾಕ, ೪. ೨೯)

ಡಂಬಿಸು
ಮೋಸಮಾಡು (ಚಿತ್ರಕಥೆಗಳಂ ಪಟದೊಳ್ ತೋಱ ಪೇೞ್ದು ಲೋಗರಂ ಡಂಬಿಸಿ ಮಾಱುಗೊಳ್ವ ಬತ್ತಮಂ ಕಳ್ವೊಂ: ವಡ್ಡಾರಾ, ಪು ೧೪, ಸಾ ೧೯)


logo