logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಋಕ್ಕು
ಋಗ್ವೇದಮಂತ್ರ, ವೇದಮಂತ್ರ (ಉತ್ವಂಬೆರೆಸಿದ ದ್ವಿತ್ವಕ್ಕೆ: ಸಂತ್

ಋಕ್ಷ
ಕರಡಿ (ವಟವಿಟಪಿಯ ಕೆೞಗೆ ತರುಣ ಹರಿಣ ವೃಕ ವರಾಹ ಋಕ್ಷ ತರಕ್ಷು ಪ್ರಮುಖನಿಖಿಲಮೃಗಗಣ ಪರಿವೃತನುಂ ಆಗಿ: ಪಂಚತಂತ್ರ, ೮೧ ವ); ಒಂದು ಜಾತಿಯ ಮರ (ಸ್ರೋತಸ್ಸುರುಚಿರಪುಷ್ಕರಂ ಆತತ ಋಕ್ಷಂ ಗುಹಾನ್ವಿತಂ ಪ್ರಿಯವಂಶ ಉಪೇತಂ ತುಂಗ ಉತ್ಸಂಗಮೇತಂ ಕರಿರಾಜನೆನಿಸುಗುಂ ಗಿರಿರಾಜಂ: ಅಜಿತಪು, ೯. ೨೯); ನಕ್ಷತ್ರ (ಋಕ್ಷಚಯದೊಳ್ ಚಂದ್ರಂ ಪಿರಿದೆಸೆವಂತಿರೆ ಭಕ್ತರ ನೆರವಿಯೊಳ್ ಅಂದಲ್ಲಿ ಸೌಂದರಂ ಕುಳ್ಳಿರ್ದಂ: ತ್ರಿಷಷ್ಟಿಪು, ೩. ೧೮)

ಋಕ್ಷರಾಜ
ಚಂದ್ರ (ನಭಮಂ ಋಕ್ಷರಾಜಾನ್ವಿತಂ ನಾಗಕದಂಬಾನಂತವಿಭ್ರಾಜಿತಮಹಿಪುರಮಂ: ಶಬರಶಂ, ೩. ೨೯)

ಋಕ್ಷಾಕೀರ್ಣ
ನಕ್ಷತ್ರಗಳಿಂದ ಕೂಡಿದ, ಕರಡಿಗಳಿಂದ ಕೂಡಿದ (ಆ ಮಹಾವನಂ .. .. ಗಗನಮಂಡಲದಂತೆ ಋಕ್ಷಾಕೀರ್ಣಮುಂ: ಚಂದ್ರಪ್ರಪು, ೫. ೫೨ ವ)

ಋಚ
ಮಂತ್ರ (ನಾಲ್ಕು ವೇದಂಗಳೊಳ್ ನಾಲ್ಕುಂ ಋಚಂಗಳಂ ಪೇೞ್ದು ಸಿತ ದೂರ್ವಾಂಕುರವಿಮಿಶ್ರಂಗಳಪ್ಪ ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಂ ಎನೆ: ಪಂಪಭಾ, ೫. ೭೦ ವ)

ಋಚೆ
ಋಚ (ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಂ ಓದುವ ಋಚೆಗಳುಂ ಪರಸುವ ಪರಕೆಗಳುಂ ಎಸೆಯೆ ಪಸೆಯೊಳಿರ್ದು: ಪಂಪಭಾ, ೩. ೭೬ ವ)

ಋಜು
ಸರಳವಾದ (ಆತ್ಮವಲ್ಲಭನೊಳಾದ ಅನುರಕ್ತತೆಯಂ ಮಹತ್ತ್ವಮಂ ಸಮದ ಪತಿವ್ರತಾಚರಣಮಂ ಋಜುವೃತ್ತಿಯಂ ಅಂದು ಭಾವಿಸುತ್ತ ಒಂದುಮಂ ಎಂದಳಿಲ್ಲ: ಕಾದಂಸಂ, ೮. ೬೮); ಒಂದು ವಸ್ತುವನ್ನು ನೋಡುವ ವಿವಿಧ ಕೋನಗಳು (ಕೆಲರಾಗಳ್ ಋಜುವಿಂದಂ ಅರ್ಧಋಜುವಿಂದಂ ಸಾಚಿಯಿಂದಂ ಕೆಲರ್ ಪಲವು ಭಂಗಿಯಿನಿರ್ದು ಜಾನಕಿಯ ರೂಪಾಶ್ಚರ್‍ಯಮಂ ನೋಡಿ.. ನಿಷ್ಪಂದರಾಗಿರ್ಪುದುಂ: ಪಂಪರಾ, ೫. ೬೫)

ಋಜುಗುಣ
ನೇರ ಸ್ವಭಾವ (ಈ ಋಜುಗುಣಕ್ಕೆ ಆರ್ ಕೂರರ್: ಕಾದಂಸಂ, ೫. ೪೬)

ಋಜುಮತಿ
[ಜೈನ] ಋಜು ಬುದ್ಧಿ (ಕ್ರಮದಿಂ ಋಜುಮತಿಯುಂ ವಿಪುಲಮತಿಯುಂ ಎಂಬದಱ ಭೇದಂ ಇರ್ತೆಱನಕ್ಕುಂ: ಚಂದ್ರಪ್ರಪು, ೧೪. ೫೭)

ಋಜುಮಾರ್ಗ
ನೇರ ಮಾರ್ಗ, ನೇರ ನಡವಳಿಕೆ (ಪಿರಿಯಾತಂ ಸ್ವಭಾವದಿಂ ಋಜುಮಾರ್ಗವೃತ್ತಿಯಂ ತಳೆದು: ಸುಕುಮಾಚ, ೨. ೫೭ ವ)


logo