logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಟಂಕ
; ಕುದುರೆ ಲಾಳ; ಕಲ್ಲು ಕೆತ್ತುವ ಚಾಣ, ಉಳಿ (ಆಕರ್ಣಾಕೃಷ್ಟ ಉತ್ಸೃಷ್ಟನಿಜವಿಕೀರ್ಣ ಟಂಕಂಗಳಿಂದಂ: ಆದಿಪು, ೧೪. ೧೦೩ ವ); ಕಲ್ಲು ಕೆತ್ತುವ ಚಾಣ, ಉಳಿ (ಆಕರ್ಣಾಕೃಷ್ಟ ಉತ್ಸೃಷ್ಟ ನಿಜ ವಿಕೀರ್ಣಟಂಕಂಗಳಿಂದಂ ತತ್ಪತಾಕಿನೀಕುಂಜರ ಶಿರಶ್ಶಿಳಾ ಪಟ್ಟಕಂಗಳಂ ಇರ್ಬಗಿಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ); ಬೆಟ್ಟದ ಇಳಿಜಾರು (ಮಾದ್ಯತ್ ಗಜಗಂಡಕಷಣಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨)

ಟಂಕಾರ
ಬಿಲ್ಲಿನ ಠೇಂಕಾರ (ಬಿಲ್ಲನೇಱಸಿ ಟಂಕಾರವಗುರ್ವುವಡೆಯೆ ಜೇವೊಡೆದು: ಪಂಪರಾ, ೯. ೫೭)

ಟಂಕಾಹತಿ
ಚಾಣದ ಪೆಟ್ಟು (ಕರಿಸೇನಾಕರಲೂನವೈರಿ ವನದುರ್ಗವ್ರಾತನಶ್ವಾವಳೀಖುರ ಟಂಕಾಹತಿ ಪಾತಿತಾರಿಗಿರದುರ್ಗವ್ರಾತಂ: ಚಂದ್ರಪ್ರಪು, ೪. ೨೭)

ಟಂಕಿತ
ಮುದ್ರಿಸಿದ (ಅನೇಕ ಮಣಿ ಕೂಟಕೋಟಿ ವಿಟಂಕ ಟಂಕಿತ ವಿಯತ್ತಳಂಗಳುಂ: ಪುಷ್ಪದಂಪು, ೨. ೭೫ ವ)

ಟಂಕೃತಿ
ಟಂಕಾರ ಅಅತಿಮೃದುಪುಷ್ಪಚಾಪದಳಿನೀಗುಣ ಟಂಕೃತಿರಾವಂ ಆಗಮಾಮೃತ ಪರಿಪೂರ್ಣಕರ್ಣಯುಗನಂ ಸಲೆ ಕೇಳಿಸದೆ: ಚಂದ್ರಪ್ರಪು, ೧. ೨೬)

ಟಂಕೋತ್ಕೀರ್ಣ
ಚಾಣದಿಂದ ಕೆತ್ತಿದುದು (ಅಪ್ರತಿಹತದಿಗ್ವಿಜಯಪ್ರಶಸ್ತಿಯಂ ಟಂಕೋತ್ಕೀರ್ಣಂ ಮಾಡಿ: ಆದಿಪು, ೧೪. ೫೯ ವ)

ಟಕಾರಿ
ತೋರಣ ಸಾರಮಂ ಕಿಱುಮಿಡಿಗೆತ್ತು ಸಾರಿಕೆ ಟಕಾರಿಯ ಮಾಣಿಕವಟ್ಟೆಯಂ ಪಿಕಂನಿಱದಳಿರ್ಗೆತ್ತು ಲಂಬಣದ ಮುತ್ತುಗಳಂ ಮೞೆಗೆತ್ತು ಚಾತಕಂ: ಅನಂತಪು, ೬. ೪೩)

ಟಕ್ಕ
ಠಕ್ಕ, ಮೋಸಗಾರ (ನೀನಿಂದೆನ್ನ ಮನೆಗೆ ಬಾರದಂದು ನಿನ್ನ ಕೆಳೆ ಟಕ್ಕರ ಕೆಳೆಯಂತಕ್ಕುಮಲ್ಲದೆ ತಕ್ಕರ ಕೆಳೆಯಂತೊಪ್ಪಲಱಯದು: ಪಂಚತಂತ್ರ, ೧೯೬ ವ)

ಟಕ್ಕು
ಠಕ್ಕು, ಮೋಸ (ತದೆದುಂ ಒದೆದುಂ ಅಂತಕವದನಾಂತರದೊಳ್ ತೂಂತದೆ ಟಕ್ಕಿಂ ಪೊರೆದವೊಲ್ ಇಂತೇಕೆ ನಿಂದಂ: ಆಚವರ್ಧ, ೨. ೫೨)

ಟಕ್ಕನಿಕ್ಕು
ಎಚ್ಚರ ತಪ್ಪಿಸುವ ಮದ್ದನ್ನಿಡು (ಅವರ ಕಪಟವೃತ್ತಿಯನಱಯದೆ ಉಂಡು ಸೊಕ್ಕಿ ಮೆಯ್ಯಱಯದೆ ಟಕ್ಕನಿಕ್ಕಿದಂತು ಕೆಡೆದು ನಿರೆಗೆಯ್ದುದುಂ: ಧರ್ಮಾಮೃ: ೧೧. ೮೭ ವ)


logo