logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಪಂಕ
ಕೆಸರು (ಕುಂಕುಮ ಪಂಕ ಪಂಕಿಳಸಾರ ಘನಸಾರ ಸಾರೀಭೂತ ಶಾರದೇಂದು: ಪಾರ್ಶ್ವನಾಪು, ೩. ೩೨ ವ); ಲೇಪನದ್ರವ್ಯ

ಪಂಕಜ
ಕೆಸರಿನಲ್ಲಿ ಹುಟ್ಟಿದುದು, ತಾವರೆ (ಪಂಕಜಮುಂ ಸುಹೃದ್ವನಪಂಕಜಮುಂ ಮುಗಿವನ್ನಂ .. .. ಕುರುಕುಲಾರ್ಕನುಂ ಅರ್ಕನುಂ ಅಸ್ತಮೆಯ್ದಿದರ್: ಗದಾಯು, ೯. ೩೫)

ಪಂಕಜನೇತ್ರೆ
ಕಮಲದಂತೆ ಕಣ್ಣುಳ್ಳವಳು (ಪಂಕಜನೇತ್ರೆ ಹಂಸಗಮನಾನ್ವಿತೆ .. .. ಭ್ರಮರಜಾಳಮನೇೞಸಿ ಪೋಗಲೀಗುಮೇ: ಪಾರ್ಶ್ವನಾಪು, ೧೦. ೫೧)

ಪಂಕಜವಕ್ತ್ರ
ತಾವರೆಯಂತಹ ಮುಖ[ವುಳ್ಳವನು] (ಸಾಲಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ: ಪಂಪಭಾ, ೧. ೬೮)

ಪಂಕಜವಿಷ್ಟರ
ಕಮಲದ ಆಸನವುಳ್ಳವನು, ಬ್ರಹ್ಮ (ಪಂಕಜವಿಷ್ಟರಂ .. .. ಹರಂ ಭವಹರಂ ಮಾಣಿಕ್ಯದೇವಂ ದೇವನಾಗಿರೆ ಜಯಂ ಭದ್ರಂ ಶುಭಂ ಮಂಗಳಂ: ಆದಿಪು, ೧೬. ೬)

ಪಂಕಜಾಕರ
ಕಮಲಗಳ ಆವಾಸ, ಕೊಳ (ಮರುತ್ಪಥದಲ್ಲಿ ಪಂಕಜಾಕರದೆಡೆಯಲ್ಲಿ ತಳ್ತ ತಿಳಿಜೊನ್ನಮಂ ಅಂಚೆಗಳ್ .. .. ಒಸೆದು ಈಂಟಲ್: ರಾಜಶೇವಿ, ೧೩. ೪೩)

ಪಂಕಪ್ರಭೆ
[ಜೈನ] ಏಳರಲ್ಲಿ ನಾಲ್ಕನೆಯ ನರಕ, (ಪಂಕಪ್ರಭೆಯೊಳ್ ದಶಬ್ಧ್ಯುಪಮೆಯಿಂ ದುಃಖಾಗ್ನಿಯೊಳ್ ಬೆಂದು: ಆದಿಪು, ೫. ೪)

ಪಂಕಭಾಗ
[ಜೈನ] ರತ್ನಪ್ರಭೆ ಎಂಬ ನರಕದ ಮೂರು ಭಾಗಗಳಲ್ಲಿ ಒಂದು (ರತ್ನಪ್ರಭೆಯೆಂಬ ಪೃಥ್ವಿ .. .. ಪೃಥ್ವಿ ವಜ್ರಖರ ಪಂಕಜಲಬಹುಳಭಗದಿಂ ತ್ರಿವಿಧಮಕ್ಕುಂ .. .. ಪಂಕಭಾಗಂ ಎಣ್ಬತ್ತನಾಲ್ಕುಸಾಸಿರ ಯೋಜನಂ: ಸುಕುಮಾಚ, ೧೧. ೪೧ ವ)

ಪಂಕರುಹ
ಪಂಕಜ (ತಂದಳ್ ಇಂತಿದಂ ದೇವರ ಪಾದಪಂಕರುಹದಲ್ಲಿಗೆ ಕನ್ಯೆಯದೊಂದು ಭಕ್ತಿಯಿಂ: ಕಾದಂಬ, ೧. ೫೨)

ಪಂಕಿಲ
ಕೆಸರಿನಿಂದ ಕೂಡಿದ (ಪಂಕುಲಮಾಗಿ ಗೋಕುಲದ ಗೋಮಯದಿಂ ನಡೆಗೊಳ್ವ ಘಾತದಿಂ ಕದಡಾಗಿ .. .. ತೋಱೆ: ಲೀಲಾವತಿ, ೫. ೮೪)


logo