logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಛಂದ
ವೇದ (ವೇದಂ ಛಂದಂ ಶ್ರುತಿ: ಅಭಿಧಾವ, ೧. ೧. ೧೨)

ಛಂದೋವಿಚಿತಿ
ಛಂದಶ್ಶಾಸ್ತ್ರ (ಸ್ವಯಂಭುವ ಭಿಧಾವಪದವಿದ್ಯಾ ಛಂದೋವಿಚಿತಿ ಅಲಂಕಾರಗಳೆಂಬ ಮೂಱ್ಱಂ ಪೆಸರ್ವಡೆದ ವಾಙ್ಮಯಮುಮಂ: ಆದಿಪು, ೮. ೬೦ ವ); ವೃತ್ತಭೇದಗನ್ನು ವಿವರಿಸುವ ಶಾಸ್ತ್ರ (ಅಂತು ಪಂಚಾಂಗವ್ಯಾಕರಣದೊಳಂ ವೃತ್ತಭೇದಮಪ್ಪ ಛಂದೋವಿಚಿತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪ ಅಲಂಕಾರದೊಳಂ: ಪಂಪಭಾ, ೨. ೩೪ ವ)

ಛಂದೋವಿ[ದ್ಯಾ]ದ್ಯೆ
ಛಂದಶ್ಶಾಸ್ತ್ರ (ಮತ್ತಂ ಅತಿಲಲಿತಂ ಅತಿವಳಭಿಚ್ಛಂದಂಳಿಂ ಛಂದೋವಿದ್ಯೆಯುಮಂ: ಸುಕುಮಾಚ, ೧೦.೫೦ ವ)

ಛಟಾ
ಸಮೂಹ (ತಚ್ಚರಣಂಗಳಂ ವಿಮಲವಿಲೋಚನ ಮರೀಚಿಚ್ಛಟಾ ಚಂದನ ಚರ್ಚೆಗಳಿನರ್ಚಿಸುತ್ತುಂ: ನೇಮಿನಾಪು, ೧. ೯೦ ವ)

ಛಟೆ
ಕಾಂತಿ (ಪಾಂಡುರಲೋಲತ್ ಕಟಾಕ್ಷಮಾಲಾಚ್ಛಟೆಗಳ್ ಗಂಡಸ್ಥಳದೊಳ್: ಜಗನ್ನಾವಿ, ೧೦. ೧೨೦)

ಛಟ್ಟ
ಚಾಂದ್ರಮಾನದ ಪ್ರಕಾರ ಷಷ್ಠಿ ತಿಥಿ (ಷತ್ವಕ್ಕೆ ಟತ್ವಂ: ಗೋಷ್ಠೀ

ಛತ್ರರತ್ನ
[ಜೈನ] ಚಕ್ರವರ್ತಿಗೆ ತಾನಾಗಿ ದೊರಕುವ ಏಳು ರತ್ನಗಳಲ್ಲಿ ಒಂದು (ವರಚರ್ಮರತ್ನಮುಂ ಛತ್ರರತ್ನಮುಂ ತಮ್ಮ ತಮ್ಮ ಬೆಸಗಳನ್ ಉಱದಿರ್ಪಿರವಿಂದೆ: ಶಾಂತಿಪು, ೧೧. ೫೬)

ಛದ
ಎಲೆ (ನೋಡುತ್ತೆ ಅಸವಸದೆ ಜೀರ್ಣಾತ್ ಛದಂಗಳ್ ಮೇಳಂಗೊಡೊಪ್ಪೆ ಶಾಖಾಗ್ರದೊಳ್; ರಾಜಶೇವಿ, ೯. ೨೯)

ಛದನ
ಎಲೆ ಛದನಂ ಪತ್ರಂ ಪರ್ಣಕಂ ಛದಂ ಪಳಾಶಂ ದಳಮ ಸಮವೇಕಾರ್ಥಂ: ಅಭಿಧಾವ, ೧. ೭. ೫)

ಛದ್ಮಬಾಲಿಶ
ಮಾರುವೇಷ ಹಾಕಿಕೊಂಡು ಆಟ ಆಡುವವನು (ಆರ್ ಗೆಲ್ವರ್ ಈ ಛದ್ಮಬಾಲಿಶನಂ ದೈವೀಸೂತ್ರಮಂ: ಜಗನ್ನಾವಿ, ೩. ೧೯)


logo