logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಱಂಡೆ
ವಿಧವೆ (ವ್ಯಾಸಮುನೀಶಂ ಪೇಸದೆ ಱಂಡೆಗೆ ಗರ್ಭಮನೆ ಮಾಡೆ: ಸಮಯಪ, ೧೦. ೧೫೪)

ಱಚ್ಚೆ
ಕೆಸರು (ತಿರಿದುಂಡು ಕಚ್ಚುಟಮನುಟ್ಟು ಱಚ್ಚೆಯೊಳ್ಪಟ್ಟು ಮುಟ್ಟುಗೆಟು ಉಬ್ಬೆಗಂ ಉಬ್ಬರಿಸಿ ನಮೆದುದದನದಂ ಮಱೆದಿರೆ: ಸುಕುಮಾಚ, ೪. ೩೦)

ಱೞ
ೞ ಎಂಬ ಅಕ್ಷರ (ಅತಿಪೀಡನದಿಂ ರೇಫಾಶ್ರಿತಮಾದ ಱಕಾರಮುಂ ಸಮಂತು ಡಕಾರಾಶ್ರಿತಮಾದ ಱೞನುಂ ಅಂಗೀಕೃತಪದಲತ್ವಕ್ಕೆ ಸಮನೆ ಸಲ್ಲದ ಕುಳನುಂ: ಶಬ್ದಮದ, ೨೮)

ಱಾಟಣ
ಬಾವಿಯಿಂದ ನೀರೆತ್ತುವ ಗಾಲಿ (ಅತತ್ವದೊಳ್ ನಿಲಿಸದ ಭಾವಂ ಅೞಸದ ಪುದ್ಗಳಂ ಇಲ್ಲೆನೆ ಕರ್ಮಬಂಧದಿಂ ಬಲವರುತಿರ್ಪ ಱಾಟಣದ ಗುಂಡಿಗೆಯಂತಿರೆ: ಸುಕುಮಾಚ, ೫. ೩೨)

ಱಾಟಳ
ಱಾಟಣ (ಮಲಜಯವಾರಿಯಿಂ ಕುಳಿರ್ವ ಬಾವಿಗಳಲ್ಲಿ ಮೃಣಾಳದಂಡಮಂಡಲಿಗಳ ದಂಡತೋರಣಕದಿಂ .. .. ಸಮೆದಾಡುವ ಱಾಟಳಂಗಳಂ: ಕಾದಂಬ, ೭. ೨೧)

ಱಕ್ಕಟ
ವ್ಯರ್ಥವಾದ (ಪೊಸಮಲ್ಲಿಗೆಗಳ ತಿಳಕಪ್ರಸರದ ಕಂಪಿಂಗೆ ಬಸನಿಗಂ ನೀನೆಂದಾ ದೆಸೆಯನಣಂ ನೋಡಲ್ಸಂಕಿಸುವೆನಗೆ ಮದಾಳಿ ಱಕ್ಕಟಂ ಪಲ್ಮೊರೆವಾ: ಮಲ್ಲಿನಾಪು, ೩. ೩೩)

ಱಕ್ಕಟಂ
ವ್ಯರ್ಥವಾಗಿ (ಮರುಳಾಗಿ ಕೆಮ್ಮನೀತನ ನರಿಯಂ ಕಾಣ್ಬಂತೆ ಕಂಡು ಱಕ್ಕಟ ಮುನಿಸಿಂ ಹರಿಯಿಸುವೆನೆಂದು ಪಾಪದ ಭರದಿಂ ನರಕಕ್ಕೆ ಜಗೞ್ದನೆನ್ನಾತ್ಮೇಶಂ: ಧರ್ಮಾಮೃ, ೧೦. ೧೪೫)

ಱುಂಜೆ
ಒಂದು ಚರ್ಮವಾದ್ಯ (ಪೊಯ್ವ ಎಕ್ಕವದ್ದಳೆಯ ದನಿಯುಂ ಉದ್ದುವ ಱುಂಜೆಯು ರವಮುಂ .. .. ನೆರಪೆ .. .. ನರಕಮಥನಂ ಬರ್ಪಂ: ನೇಮಿನಾಪು, ೮. ೭೫ ವ)

ಱುಂಜೆವಾರಿಸು
ಱುಂಜೆಯನ್ನು ಬಾರಿಸಿದಂತೆ ಹೊಡೆ (ಅವಂದಿರ್ .. .. ಆ ಮುನಿಯ ತಲೆಯನಂಜದೆ ಱೆಂಚೆವಾರಿಸಿ ಪೋಪುದುಂ: ಕರ್ಣನೇಮಿ, ೧೪. ೭೦ ವ)

ಱೆಂಚೆ
ಅಂಬಾರಿ (ಸಿಂಧುರದೊಳ್ ಱೆಂಚೆಯುಮಂ ಮಲಂಗಿ ಜಿನನಾಥಂಗಿಕ್ಕಿದರ್ ಚಾರುಚಾಮರಮಂ ನಿಂದು ಸತನ್ಕುಮಾರನುಂ ಅತರ್ಕ್ಯೋತ್ಸಾಹಿ ಮಾಹೇಂದ್ರನುಂ: ಅನಂತಪು, ೫. ೩೫)


logo