logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಕಮಾಲಾ
[ರಾಜರ] ಸ್ತುತಿಮಾಲೆ (ಮಹಾವಂದಿವೃಂದ ಅಂಕಮಾಲಾನಾದಂ ಗಂಭೀರನಾದಂ ನೆಗೞರೆ ತಳರ್ದಂ ರಾಗದಿಂ ಸಾರ್ವಭೌಮಂ: ಆದಿಪು, ೧೧. ೧೪)

ಅಂಕಮಾಲೆ
ಬಿರುದಾವಳಿ (ಸ್ಮರನ ಬಿರುದಿನಂಕಮಾಲೆಯನೋದದರಗಿಳಿಗಳಿಲ್ಲ: ಪಂಪರಾ, ೧. ೧೦೭ ವ)

ಅಂಕವಣಿ
ರಿಕಾಪು (ಉಂಗುಟಮಂ ಅಂಕವಣಿಗೆ ಕರಾಂಗುಳಿಯಂ ಸ್ಕಂಧಸಂಧಿಗುಯ್ದು ಏಱದಂ ಉತ್ತುಂಗ ತುರಂಗಮಂ: ಪಂಪರಾ, ೪. ೧೨೦)

ಅಂಕವಣೆ
ಕುದುರೆಯ ರಿಕಾಪು (ಅನ್ನೆಗಂ ನಕುಳನುಮಂಕವಣೆಯುಂ ಬಾಳುಂ ಬಾರುಂ ಚಮ್ಮಟಿಗೆಯನುಮಂ: ಪಂಪಭಾ, ೮. ೫೪ ವ)

ಅಂಕಿತ
ಕುದುರೆಯ ಓಟದ ಒಂದು ಬಗೆ (ಬಿಂಕಂಬಡೆದುದು ವಿಕ್ರಮಂ ಅಂಕಿತಂ ಉಪಕಂಠಂ ಉಪಜಂ ಉಪಜಿನಮೆಂಬಯ್ದುಂ: ಮಲ್ಲಿನಾಪು, ೯. ೨೩)

ಅಂಕಿಸು
ಅಧೀನ ಮಾಡಿಕೊ (ಈ ಯತಿವರ್ತಿಯಂ ವಶವರ್ತಿ ಮಾಡಲುಂ ಅಂಕುಶಮಿಲ್ಲದಂಕಿಸಲುಂ ನಿನಗೆ ತೀರ್ವುದು: ನೇಮಿನಾಪು, ೫. ೧೧೫ ವ); ತೋರ್ಪಡಿಸು (ಬಳವೈರಿಯೊಳ್ ನೀಲಾಚಲಂಗಳ್ ಸಾಲಿಟ್ಟುವೆಂಬ ಬಿಂಕಮಂ ಅಂಕಿಸಿ ಕಣ್ಗೆ ವಂದ ಗಂಧಸಿಂಧುರಸಮೂಹದಿಂ: ರಾಜಶೇವಿ, ೬. ೧೧ ವ)

ಅಂಕು
ಸೊಟ್ಟಗಾಗು (ತಾಱದ ಅಂಕಿದ ನಱುಂಕಿದ ಕೊಂಬು ಒಣಗಿರ್ದ ಪೊಟ್ಟೆವೋದ ಒಱಗಿದ ವೃಕ್ಷದಿಂದ ಅಱವುದು ಆಯೆಡೆಯೊಳ್ ಜಳಮಾಗದೆಂಬುದಂ: ಲೋಕೋಪಕಾ, ೫. ೪)

ಅಂಕುರ
ಆಗ ತಾನೆ ಮೂಡಿದ ಮರದ ಟಿಸಿಲು (ಕಳಿಕಾಂಕುರ ಕುಸುಮೋತ್ಕರ ಫಳಪಲ್ಲವರಹಿತ ಮಹಿಜಮಂ ಕಂಡುದಱಂ: ಆದಿಪು. ೧೫. ೩೪); ಮೊಳಕೆ, ಚಿಗುರು (ಮಾವಿನಂಕುರಮನೆ ಕರ್ಚಿ ಬಿಚ್ಚಳಿಪ ಕೋಗಿಲೆ: ಪಂಪಭಾ, ೫. ೧೧)

ಅಂಕುರವೃದ್ಧಿ
ಮೊಳಕೆಯ ಬೆಳವಣಿಗೆ (ಉದಕವೃದ್ಧಿಯೊಳ್ ಅಂಕುರವೃದ್ಧಿಯೆಂತಂತೆ ಸಹಕಾರಿಕಾರಣಂ: ಆದಿಪು, ೨. ೧೦ ವ)

ಅಂಕುರಶಾಖಾಭಿನಯ
ಒಂದು ಬಗೆಯ ನೃತ್ಯ? (ಅಂಕುರ ಪಲ್ಲವ ಕುಸುಮಾಳಂಕಾರದ ಚೂತಲತಿಕೆ ನರ್ತಕಿವೋಲ್ ತನ್ನಂಕುರದಿಂ ಶಾಖೆಯಿಂ ಏನಂಕುರಶಾಖಾಭಿನಯಮಂ ಅಭಿನಯಿಸಿದುದೋ: ಆದಿಪು, ೧೧. ೯೪)


logo