logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಜನೆ
ಹನುಮಂತನ ತಾಯಿ; [ಜೈನ] ಒಂದು ನರಕದ ಹೆಸರು (ಅಂಜನೆಯೆಂಬ ಪೆಸರ ಪಂಕಪ್ರಭೆಯೆಂಬ ನಾಲ್ಕನೆಯ ನರಕಮಿರ್ದುದು: ಅಜಿತಪು, ೧೧. ೬ ವ)

ಅಂಜಮೆ
ಅಂಜಿಕೆ (ಸಾಧಕನ ಮರುಳಾಟದಂತೆ, ವೀರನಂಜಮೆಯಂತೆ: ಧರ್ಮಾಮೃ, ೮. ೫೭ ವ)

ಅಂಜಮೆಗುಡು
ಹೆದರಿಕೆಯನ್ನು ಹೋಗಲಾಡಿಸು (ಜನಮಂ ನೀಮಂಜಲಿಂ ಎಂದಱವಂ ಅರ್ವಿನಮಂಜನೆಗೊಟ್ಟಱದು ನಿಱಸಿದಂ: ಆದಿಪು, ೬. ೬೧)

ಅಂಜರಿಕಾಸ್ತ್ರ
ಅರ್ಜುನನಿಗೆ ಶಿವನು ಪಾಶುಪತಾಸ್ತ್ರವಿತ್ತಾಗ ಪಾರ್ವತಿ ನೀಡಿದ ದಿವ್ಯಾಸ್ತ್ರ (ಈಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು ಗೌರಿದೇವಿಯುಂ ಅಂಜರಿಕಾಸ್ತ್ರಮೆಂಬ ಅಮೋಘಾಸ್ತ್ರಮಂ ವಿಕ್ರಮಾರ್ಜುನಂಗೆ ಕುಡೆ: ಪಂಪಭಾ, ೮. ೨೬ ವ)

ಅಂಜಲ್
ಹೆದರಬೇಡ[ಡಿ] (ಸುತಾರೆಯಂ ಅಂಜಲಂಜಲ್ ಎಂದು ಮಂಡಲಾಗ್ರಮಂಡಿತ ದೋರ್ದಂಡರೆಂ ಆಗಿ ಪೋಗಿ ಪಗೆವನೊಳ್ ತಡೆಯದೆ ತಾಗುವ ಎಮ್ಮ ರಭಸಮಂ ಕೇಳ್ದು: ಶಾಂತಿಪು, ೬. ೩೩ ವ)

ಅಂಜಲಿ
ಬೊಗಸೆ (ವಿನಯದೊಳೆ ಮತ್ತಂ ಅಂದೊಯ್ಯನೆ ನಿರ್ಝರವಾರಿಯಂ ನಿಜ ಅಂಜಲಿಯಿಂ ತಂದು ಅನುವಿಸಿ ವದನಪ್ರಕ್ಷಾಳನಮಂ ಮಾಡಿಸಿದಂ ಅಂದು ಚಂದ್ರಾಪೀಡಂ: ಕಾದಂಸಂ, ೪. ೧೨೪)

ಅಂಜಲಿಪುಟ
ಬೊಗಸೆ (ನೀರಂ ಕುಡಿಯಲೆಂದು ನಿಜಾಂಜಲಿಪುಟಮಂ ನೀಡಿದಾಗಳ್ ಒಂದು ದಿವ್ಯವಚನಂ ಆಕಾಶದೊಳ್: ಪಂಪಭಾ, ೮. ೩೮ ವ)

ಅಂಜಿಸು
ಹೆದರಿಸು (ಪೊಸ ಕಾರೊಳಿಂತು ಬೆಳ್ಪಗೆ ಪಥಿಕಾಜನಮಂಜಿಸುವಂತಿರೆ: ಕವಿರಾಮಾ, ೧. ೧೨೪)

ಅಂಜು
ಹೆದರು, ಭಯಪಡು (ಅಂಜು ಭಯೇ: ಶಬ್ದಮದಧಾ ೨೨೫)

ಅಂಜುಮೆ
ಅಂಜಿಕೆ (ಚಲದಿನೆಱಗಿಸಲಿರೆ ಭರತಂಗೆಱಕಮ್ ಅಂಜುಮೆಯಲ್ತೇ: ಆದಿಪು, ೧೪. ೭೫)


logo