logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತುಟು
ಅಷ್ಟು (ಅವನೀವಂತುಟಂ ಈಯದಂತುಟಂ ಅದಟನದಂ ಬಲ್ಲಂತು ಕಾಲ್ಗುತ್ತಿ ನೋಡು: ಪಂಪಭಾ, ೯. ೨೬); ಹಾಗೆ (ಭಟಸಂಘಕ್ಕದಟೆಂತುಟಂತುಟೆ ಮುಖಾಂಭೋಜಕ್ಕೆ ಮೂಗೆಂತುಟಂತುಟೆ: ಧರ್ಮಾಮೃ, ೧. ೬೮)

ಅಂತುಟೆ
ಹಾಗೆಯೇ (ಅಱಮರುಳಂತುಟೆ ಸೊರ್ಕಿನ ತೆಱನಂತುಟೆ ಮನಮೊಱಲ್ದು ಎರ್ದೆಯುರಿವುದು ಮೆಯ್ಯೆಱಗುವುದು ಪದೆವುದು ಆನಿದನಱಯನಿದೇಕೆಂದು ಕನ್ನೆ ತಳವೆಳಗಾದಳ್; ಪಂಪಭಾ, ೪. ೭); [ಅಂತುಟು+ಎ] ಅಷ್ಟೇ, ಅಂತಹುದೇ (ಮುದುಪರ ಬಿಲ್ಬಲ್ಮೆಯುಂ ಇಱವ ಅದಟುಂ ಬಗೆವಾಗಳ್ ಅಣ್ಣನೆಂದಂತುಟೆ: ಪಂಪಭಾ, ೧೦. ೨೪)

ಅಂತುಟೊಂದು
ಅನಿತೊಂದು, ಅಷ್ಟೊಂದು (ಅಂತುಟೊಂದು ನೋಟದ ತೆಱನಂತುಟೊಂದು ಪರಿರಂಭದ: ಜಗನ್ನಾವಿ, ೧೧. ೫೭)

ಅಂತುವರಂ
ಕೊನೆಯವರೆಗೆ (ಭುವನೇಶ್ವರ ನಿಜರೂಪಸ್ತವ ವಸ್ತುಸ್ತವ ಗುಣಸ್ತವಳನಂತುವರಂ ಬಣ್ಣಿಸಲಮರೇಂದ್ರ ವಾಸುಕಿ ಪ್ರಭುಗಳಾರ್ತರಿಲ್ಲೆನ್ನಳವೇ: ಆದಿಪು, ೧೦. ೫೨)

ಅಂತೆ
ಹಾಗೆ, ಆ ರೀತಿಯಲ್ಲಿ (ಅಂತು ಕ್ಷೇಮಂಕರಂ ದುರಿತಾರಿ ಸೈನ್ಯಮಂ ಬೆಂಕೊಳಲ್ ಬಗೆವಂತೆ: ಶಾಂತಿಪು, ೮. ೧೧೭ ವ); ಸುಮ್ಮನೆ, ಬರಿದೆ (ಕುತ್ತಕ್ಕೆ ಮರ್ದನಿಕ್ಕದೆ ಕುತ್ತಂ ಪೋಗೆಂದೊಡಂತೆ ಪೋಕುಮೇ: ಸಮಯಪ, ೧೧. ೯೪); ಹೋಲಿಕೆಯನ್ನು ತೋರಿಸುವ ಪದ (ಬಸಂತದೊಳ್ ಕಕಳಿಕೆಗರ್ಚಿದ ಕೋಗಿಲೆಯಂತೆ: ಆದಿಪು, ೨. ೯)

ಅಂತೆಗೆಯ್
ಅದೇ ರೀತಿ ಮಾಡು (ಎಂಬುದುಂ ಅಂತೆಗಯ್ವೆನೆಂದು ಪೋಗಿ: ಜಗನ್ನಾವಿ, ೭. ೪ ವ)

ಅಂತೆವೊಲ್
ಅದರಂತೆ, ಹೋಲಿಕೆಯ ಪದ (ಕೃಶಾನುವ ನೆೞಲಳುರುವಂತೆವೊಲ್ ಕನ್ನಡಿಯಂ: ಆದಿಪು, ೭. ೩೨)

ಅಂತೆವೋಲ್
ಅಂತೆವೊಲ್ (ಪಗಲುತ್ಪಲಲಕ್ಷ್ಮಿಯಂತೆವೋಲ್ ಕೊರಗುತುಂ: ಜಗನ್ನಾವಿ, ೧೬. ೧೨೯)

ಅಂತೇವಾಸಿ
ಶಿಷ್ಯ (ಆತಂಗೆ ಬಲಿ ಶಿಖಿಗಳೆಂಬ ಇರ್‍ವರ್ ಅಂತೇವಾಸಿಗಳಾದರ್: ಪಂಪರಾ, ೧೦. ೯೫ ವ); ಚಂಡಾಲ

ಅಂತ್ರ
ಕರುಳು (ಕಡುಪಿಂ ಪೊಯ್ಯೆ ಶಿರೋಜ ಮೆಯ್ಯ ಹಯಣಂ ದುಪ್ಪೋಡಿಯಾಗಲ್ ಜವಂಗಿಡದೆ ಆ ವಾಘೆಯ ಗಾಢದಿಂ ಹಯಮಂ ಅಂತ್ರಾನೀಕದಿಂ ಸುತ್ತಿ: ಶಾಂತೀಶ್ವಪು, ೮. ೮೨)


logo