logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತಶ್ಶೂನ್ಯ
ಮನಸ್ಸು ಶೂನ್ಯವಾಗಿರುವ (ಎನಿತೆನಿತಂ ಕಲಿಸಿದೊಡಂತನಿತನಿತುಂ ನೈಜಭಾವಮಕ್ಕುಂ ನೃಪನಂದನ ನೆಂತುಮಂತು ಕರ್ಕಶತನುವಂತಶ್ಶೂನ್ಯಮಕ್ಕುಮುನ್ನತವಂಶಂ: ಗದಾಯು, ೩. ೫೮)

ಅಂತಸ್ಸಾರ
ಅಂತಸ್ಸತ್ವ (ನೀಮೆ ಗಂಭೀರರ್ ಅಂತಸ್ಸಾರರಿರ್ ನೀಮಿರೆ ಪೆಱರೊಳರೇ ಸಕ್ಕಿಮಾಡಲ್ಕೆ: ಆದಿಪು, ೯. ೧೧೫)

ಅಂತಸ್ತಮಃಪಟ
ಒಳಗಿನ ಕತ್ತಲೆಯ ತೆರೆ, ಅಜ್ಞಾನದ ತೆರೆ (ತನ್ಮುನಿ ಧರ್ಮವೃದ್ಧಿ ನಿಮಗೆಂದಾ ನಾಲ್ವರಂತಸ್ತಮಃಪಟಮಂ ಪಿಂಗಿಸಿ ಭೋಗ ಭೂಮಿಜರ ಕಣ್ಗಾಗಲ್ ನಭೋಮಾರ್ಗ ಪರ್ಯಟನಮಂ ಶಿಕ್ಷಿಸಿ ಪೋದರ್: ಶಾಂತಿಪು, ೭. ೯)

ಅಂತಸ್ಸ್ಥಿತ
] ಒಳಗಿದ್ದ (ಅದಱ ಮುದ್ರಿಕೆಯನೊಡೆದು ಅಂತಸ್ಸ್ಥಿತಕಾರ್ಯಪತ್ರಮಂ ಬಾಜಿಸಿ ನೋಡಿ ವಿಸ್ಮಯಾಕ್ರಾಂತಚಿತ್ತನಾಗಿ: ಆದಿಪು, ೪. ೮೬ ವ)

ಅಂತಱಂ
ಆದ್ದರಿಂದ (ಕುಯೋನಿಯೊಳ್ ತಿರಿದು ಪೋದುವು ಕಾಲಮಂತಱಂ ಪುಟ್ಟದೆ ಪೊಂದದಿರ್ಪ ಬಗೆಯಂ ಬಗೆದಂದು ಕೃತಾರ್ಥನಾಗೆನೇ: ಸುಕುಮಾಚ, ೧೧. ೮೨; ಆ ಕಾರಣದಿಂದ (ಅಂತಱಂದವರನಾ ಪೊೞಲೊಳ್ ಕಾಣ್ಬಂತು ಚಿಂತಿಸುಪಾಯಮಂ: ಶಬ್ದಮದ, ೧೦೦ ಪ್ರಯೋಗ ೩)

ಅಂತಿಕ
ಸನಿಹ, ಹತ್ತಿರ (ಕಂಸಂ ನಿಜಾಂತಿಕದೊಳಿರ್ದ ಮಂತ್ರಿಗಳ್ಗಾ ವೃತ್ತಾಂತಮಂ ಪೇೞ್ವುದುಂ: ಜಗನ್ನಾವಿ, ೨. ೪೪ ವ)

ಅಂತಿಕೆ
ಅಡಿಗೆಯ ಒಲೆ (ಅಂತಿಕೆಯೆನೆ ಅಧಿಶ್ರಯಣಿಯೆನಿಪ್ಪುದಕ್ಕುಂ: ಅಭಿಧಾವ, ೧. ೧೦. ೩೦)

ಅಂತಿರೆ
ಆ ರೀತಿಯಲ್ಲಿ (ಮೃಗಪಶುಶಕುನಗಣಂಗೊಳಗಣಿತ ನಿಜಜಾತಿ ಜನಿತ ಭಾಷೆಗಳೆಂದುಂ ನೆಗೞ್ದಂತಿರೆ: ಕವಿರಾಮಾ, ೧. ೭); ಹೋಲಿಸುವ ಮಾತು (ಉಪಮಾನಾರ್ಥದೊಳಿವು ವರ್ತಿಪುವಂತಿರೆಯಂತೆಯಂತೆವೊಲ್ವೋಲ್ಗಳ್: ಶಬ್ದಮದ, ೩೩೩)

ಅಂತಿಲ್ಲದ
ಅಪರಿಮಿತವಾದ, ಹೇಳಲಾರದ (ಭರತೇಶ್ವರಂ ಸಕಳಾಂತಃಪುರಸಹಿತಮಲ್ಲಿ ವಿಶ್ರಮಿಸಿ ವನಾಭ್ಯಂತರಮಂ ತೊೞಲೆ ಮನಕ್ಕಂತಿಲ್ಲದ ಮುದಮನುಂಟುಮಾಡಿದುದು ಬನಂ: ಆದಿಪು, ೧೧. ೮೩)

ಅಂತು
ಹಾಗೆ (ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು: ಪಂಪಭಾ, ೧. ೯೬ ವ); ಕೊನೆ, ತುದಿ, ಪರಮಾವಧಿ (ವನಾಭ್ಯಂತರಮಂ ತೊೞಲೆ ಮನಕ್ಕೆ ಅಂತು ಇಲ್ಲದ ಮುದಮನುಂಟುಮಾಡಿದುದು ಬನಂ: ಆದಿಪು, ೧೧. ೮೩)


logo