logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತರ್ವಂಶಿಕ
ರಾಣಿವಾಸದ ಮೇಲ್ವಿಚಾರಕ (ಮಂಡಳಿಕ ಮಹಾಸಾಮಂತ ಮಂತ್ರಿಪ್ರಧಾನ ಪುರೋಹಿತ ಅಂತರ್ವಂಶಿಕಾದಿ ಪರಿವಾರ ಪರಿವೃತಂ: ಆದಿಪು, ೨. ೨ ವ)

ಅಂತರ್ವಣ
ಕಾಡಿನ ಮಧ್ಯದಲ್ಲಿರುವ (ವಜ್ರವೇದಿಕೋತ್ತುಂಗ ತೋರಣದ್ವಾರದ ಅಂತರ್ವಣ ತುಂಗ ಕುಜಂಗಳ ನೆೞಲ್ಗಳೊಳ್: ಆದಿಪು, ೧೨. ೬೮ ವ)

ಅಂತರ್ವನ
ಅಂತರ್ವಣ (ಅಲ್ಲಿಯೆ ವಿರಾಜಿತಾಮರೇಶ್ವರ ಅಂತರ್ವನಂಗಳಪ್ಪ ನಂದನ ವನಂಗಳೊಳ್, ಶಾಂತಿಪು, ೨. ೯೧ ವ)

ಅಂತರ್ವತ್ನಿ
ಬಸುರಿಯಾದ ಹೆಂಗಸು (ತರುಣಿಯನಂತರ್ವತ್ನಿಯಂ ಅರಣ್ಯದೊಳ್ ಬಿಸುಡವೇಳೞ್ದೊಡೀ ಬೆಸನಂ ಕಾಪುರುಷನೇನೇಗೊಂಡೆಂ ಕಿಂಕರಭಾವದಿಂ: ಪಂಪರಾ, ೧೫. ೭೬)

ಅಂತರ್ವರ್ತಿಯಾಗು
ಒಳಗೆ ನೆಲಸಿರುವ (ತನ್ನೊಡನೆಯ ಬಲಮೆಲ್ಲಮಂ ಪಡುವಣ ಸೋಪಾನಂಗಳಿಂದಂ ಬೆಂಕೆ ಭೋಂಕನಳುರದಂತು ಬೇಗಂ ಮ್ಲೇಚ್ಛಖಂಡಾಂತರ್ವರ್ತಿಯಾಗೆ ಮುನ್ನಂ ಕಳಿಪಿ: ಆದಿಪು, ೧೩. ೩೫ ವ)

ಅಂತರ್ವಂಶಿಕ
ರಾಣಿವಾಸದ ಮುಖ್ಯಸ್ಥ (ಆಸ್ಥಾನಮಂಡಪದೊಳ್ ಅತಿಪ್ರಚಂಡಮಂಡಳಿಕ ಮಹಾಸಾಮಂತ ಮಂತ್ರಿಪ್ರಧಾನಪುರೋಹಿತ ಅಂತರ್ವಂಶಿಕಾ ಪರಿವಾರಪರಿವೃತಂ: ಆದಿಪು, ೨. ೨ ವ)

ಅಂತರ್ವಾಂಶಿಕ
ವ್ಯಾಯಾಮಶಾಲೆಯ ಮುಖ್ಯಸ್ಥ (ಧರಾಧೀಶ್ವರಂ ಆಸ್ಥಾನಭೂಮಿಯೊಳ್ ಅನಂತಸಾಮಂತಮಂತ್ರಿಪುರೋಹಿತ ಅಂತರ್ವಾಂಶಿಕ ಶ್ರೀಕರಣ ಸೇನಾನಾಯಕ ಸಂಧಿವಿಗ್ರಹಿ ಪ್ರಮುಖ ನಿಖಿಲ ಪರಿವಾರಪರಿವೃತನಾಗಿ: ಪಂಚತಂತ್ರ, ೬೬ ವ)

ಅಂತರ್ಹಿತರೂಪ
ಅದೃಶ್ಯರೂಪ (ದೇವಕಿಯ ಸಮೀಪದೊಳ್ ಅಂದು ಏಕಾಂತಸಮಯದೊಳ್ ಸಮಸ್ತ ಸುರಗಣಂ ಬಂದು ನೆರೆದು ಅಂತರ್ಹಿತರೂಪದಿಂದ ಅಂತರಿಕ್ಷದೊಳ್: ಜಗನ್ನಾವಿ, ೨. ೯೫ ವ)

ಅಂತವಾಸ
ಊರಿನ ಹತ್ತಿರದ ಶಿಬಿರ (ಅಮರ್ದಿನ ಕಡಲೊಳಗಿರ್ಪಂತಿರ್ದನಂತವಾಸದೊಳಾಗಳ್: ಆದಿಪು, ೧೧. ೨೮)

ಅಂತವುರ
ಆಂತಃಪುರ (ನಿನ್ನಂತವುರದ ಕಾಂತೆಯರಂ ನೋಡದೆ ನುಡಿಯದದಿಂಬುಕೆಯ್ಯದೆ: ಪಂಪರಾ, ೧೪. ೧೯೩)


logo