logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತರ್ಭೇದ
ಒಳಗಿನ ಭೇದ, ಭಿನ್ನಾಭಿಪ್ರಾಯ (ಕ್ಷೀರಗುಡಾದ್ಯಂತರ ರಸಾಂತರ ಜಾತ್ಯಂತರಮಪ್ಪಂತನಂತ ರ್ಭೇದಂ: ಕವಿರಾಮಾ, ೨. ೯೫); ಅಂತಃಕಲಹ (ಅಂತರ್ಭೇದದೊಳಂತು ಛಿದ್ರಿಸಿದರಾ ಗಾಂಗೇಯರಂ: ಪಂಪಭಾ, ೧೨. ೪೭)

ಅಂತರ್ಭ್ರಮ
ತೊಳಲಾಟ (ನಿತಂಬಸ್ಥಳದೊಳ್ ಅಂತರ್ಭೃಮಮೆಂಬುದು ಗಂಭೀರನಾಭಿಯೊಳ್ ಉನ್ಮಾರ್ಗವೃತ್ತಿಯೆಂಬುದು: ವರ್ಧಮಾಪು, ೮. ೨೪ ವ)

ಅಂತರ್ಮಂಡಲಸಾಧನ
ಒಳದೇಶ [ಅಂತರಂಗ]ವನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ (ನಿನಗರಸ ಬಹಿರ್ಮಂಡಲಮನೆ ಸಮಱಲ್ಕಿನಿತು ಬರಿಸಮುಂ ಪೋದುವು ಕೇಳಿನಿಸಂತರ್ಮಂಡಲಸಾಧನಮುಂಟೆಂಸಱಪಿದುದುಮನಿನ್ನಱಪುವೆವೇ: ಆದಿಪು, ೧೪. ೧೫)

ಅಂತರ್ಮಲ
ಒಳಗಿನ ಕೊಳೆ (ಅಂತರ್ಮಲಮಂ ಕರ್ಚಿದೊಡಾನೀ ನೆಲಕೆಲ್ಲಂ ಪಾವನೀಯಚರಿತನೆನಾದೆಂ: ಕವಿರಾಮಾ, ೨. ೬೭)

ಅಂತರ್ಮಲಿನ
ಒಳಗೆ ಕಲ್ಮಷವುಳ್ಳ (ಸರಿದಧಿಪತಿಯಂ ದೋಷಾಕರನಂತರ್ಮಲಿನನಾಗಿಯುಂ ಪೆರ್ಚಿಸುಗುಂ: ಕವಿರಾಮಾ, ೩. ೩೫)

ಅಂತರ್ಮುಖ
ಒಳಮುಖವಾದ ಮನಸ್ಸು (ಬದ್ಧಪಲ್ಯಂಕಾಸನಂ ಪೂರ್ವಾಭಿಮುಖನುಮಂತರ್ಮುಖನುಮಾಗಿ; ಮಲ್ಲಿನಾಪು, ೧೩. ೧೪೦ ವ)

ಅಂತರ್ಮುಖತೆ
ಆತ್ಮಚಿಂತನೆ ಮಾಡುವುದು (ಅಂತರ್ಮುಖತೆಗಭಿಮುಖಂ ಮಾೞ್ಕುಪಾಧ್ಯಾಯರೆಮ್ಮಂ: ಚಂದ್ರಪ್ರಪು, ೧. ೪)

ಅಂತರ್ಮುಹೂರ್ತ
[ಜೈನ] ಒಂದು ಮುಹೂರ್ತಕ್ಕಿಂತ ಕಡಿಮೆಯಾದ ಕಾಲ (ಸಮಯಂ ಕುಂದೆ ಮುಹೂರ್ತದೊಳಮೋಘಮಂತರ್ಮುಹೂರ್ತಮಕ್ಕುಂ: ಪಂಪರಾ, ೧. ೫೧); ತುಂಬ ಕಿರಿದಾದ ಕಾಲಮಾನ (ನಾನಾವಿಧವಿನೋದಂಗಳಿನಂತರ್ವತ್ನಿಗೆ ನವಮಾಸಂಗಳಂತ ರ್ಮುಹೂರ್ತಂಗಳಾಗಿ ಪೋಗೆ: ಸುಕುಮಾಚ, ೧೦. ೨೫ ವ)

ಅಂತರ್ಲೀನ
ಒಳಗೆ ಲೀನವಾದ (ನೆರ್ಗು

ಅಂತರ್ಲೀನೇ, ಶಬ್ದಮದ
ಧಾ ೧೨೭)


logo