logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತರ್ಗತಭೇದ
ಒಳಗಣ ವ್ಯತ್ಯಾಸ (ಮುಂತಣ ಲಕ್ಷಣಲಕ್ಷ್ಯಯುಗಾಂತರ್ಗತಭೇದಮಕ್ಕುಮಾ ವ್ಯತಿರೇಕಂ: ಕವಿರಾಮಾ, ೩. ೩೮)

ಅಂತರ್ಗತಸ್ವನ
ಒಳಗೇ ಹುದುಗಿದ ಧ್ವನಿ (ಮಿನುಕು ಅಂತರ್ಗತಸ್ವನೇ: ಶಬ್ದಮದ, ಧಾ. ೬೪)

ಅಂತರ್ಜ್ಯೋತಿ
ಒಳಗಿನ ಬೆಳಕು (ಪಳುಕುಗೊಡದೊಳಗೆ ಪೊಱಗುಜ್ವಳಿಪಂತರ್ಜ್ಯೋತಿಯಂತಿರೆ: ರಾಜಶೇವಿ, ೧೩. ೫೫)

ಅಂತರ್ದೃಷ್ಟಿ
ತನ್ನ ಒಳಗನ್ನು ಪರಿಶೀಲಿಸಿಕೊಳ್ಳುವ ದೃಷ್ಟಿ (ಪರಮಬ್ರಹ್ಮಶರೀರಪುಷ್ಟಿ ಜನತಾಂತರ್ದೃಷ್ಟಿ ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ: ಪಂಪರಾ, ೧. ೬)

ಅಂತರ್ದ್ವೀಪ
ದ್ವೀಪದ ಒಳಭಾಗ (ಉಭಯನದೀ ಸಂಗಮಮಪ್ಪ ಮಧ್ಯಪ್ರದೇಶಂ ಅಂತರ್ದ್ವೀಪಮೆಂಬುದಕ್ಕುಂ: ಪಂಚತಂತ್ರ, ೨೯೭ ವ)

ಅಂತರ್ಧಾನಕ್ಕೆ ಸಲ್
ಮಾಯವಾಗು (ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕಂ ಅಂತರ್ಧಾನಕ್ಕೆ ಸಂದಂ : ಪಂಪಭಾ, ೧. ೧೧೯)

ಅಂತರ್ಧಿ
ಅಡಗಿಕೊಳ್ಳುವುದು, ಅಂತರ್ಧಾನ (ಪೃಥ್ವೀಪಾಲ ಭೂಪಾಲಂ ಭವದೀಯ ದೇಶಾಸನ್ನ ಸ್ಥಿತಂಗಳಪ್ಪ ಪನ್ನೆರಡುಂ ಮಂಡಲಂಗಳೊಳಂತರ್ಧಿಯುಂ ಮಿತ್ರದ್ವಿತಯದೊಳ್ ಕೃತ್ರಿಮ ಮಿತ್ರನುಂ .. .. ಆಗಿರ್ಪಂ: ಚಂದ್ರಪ್ರಪು, ೯. ೧೧೭ ವ)

ಅಂತರ್ನಿಗೂಢ
ಒಳಗೆ ತುಂಬಿಕೊಂಡ (ಧರಣೇಂದ್ರನಿದಿರೊಳ್ ಅವರ್ ಅಂತರ್ನಿಗೂಢಕೋಪಾವಲೇಪರುಂ ಈಷತ್ ಆರೋಪಿತಭ್ರೂಚಾಪರುಂ ಆಗಿ: ಆದಿಪು, ೯. ೧೦೪ ವ)

ಅಂತರ್ನಿಹಿತ
ಒಳಗಿರುವ (ನಾಮಗ್ರಹಣಮಾತ್ರದಿಂದಮೆ ಸಮಸ್ತವಸ್ತು ವಿಸ್ತಾರಾಂತರ್ನಿಹಿತ ವಸ್ತುಸಮರ್ಪಣ ಪರಾಯಣನಪ್ಪ ಕಾಮವೃಷ್ಟಿಯೆಂಬ ಗೃಹಪತಿರತ್ನಮುಂ: ಆದಿಪು, ೧೧. ೩ ವ)

ಅಂತರ್ಬಹೀರೂಪ
ಒಳಗಿನ ಮತ್ತು ಹೊರಗಿನ ಆಕಾರ (ಆವುದಂತರ್ಬಹೀರೂಪಂ ವಿಶದದರ್ಶನಾವಗಮ್ಯಂ ಅದೆಲ್ಲಮಸತ್ಯಾವಭಾಸಿ: ಆದಿಪು, ೨. ೯ ವ)


logo