logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತರಾಳ
ಒಳಭಾಗ (ರಾಜಹಂಸ ಪಾರಾವತ ಮಿಥುನಂಗಳ್ ಉತ್ತುಂಗ ಪ್ರಾಸಾದಶಿಖರ ಮಣಿಗವಾಕ್ಷ ಅಂತರಾಳ ವಿವಿಧ ಗೃಹಾಂತರಗತಂಗಳಾದುವು: ಪಂಪಭಾ ಪರಿಷತ್ತು, ೪. ೪೯ ವ)

ಅಂತರಿಕ್ಷ
ಆಕಾಶ (ಸಮಸ್ತ ಸುರಗಣಂ ನೆರೆದು ಬಂದಂತರ್ಹಿತರೂಪದಿಂದಂತರಿಕ್ಷದೊಳ್: ಜಗನ್ನಾವಿ, ೨. ೯೫ ವ)

ಅಂತರಿತ
ಬೇರ್ಪಡಿಸಲ್ಪಟ್ಟ (ಲಕ್ಷಯೋಜನಾಂತರದೊಳ್ ಒಂದೊಂದೋರೊಂದು ರಜ್ಜುಪ್ರಮಾಣಾಂತರಿತಂಗಳಕ್ಕುಂ: ಶಾಂತಿಪು, ೭. ೮೪ ವ)

ಅಂತರಿತೆ
ದೂರಗೊಂಡವಳು (ಆತ್ಮವಲ್ಲಭ ಅಂತರಿತೆಯಂ ಎನ್ನಂ ಅಣ್ಣ ಬೆಸಗೊಳ್ವುದೆ ಪೇೞ್ವೆನೆ ತತ್ಪ್ರಪಂಚಮಂ: ಕಾದಂಸಂ, ೩. ೪೭)

ಅಂತರಿಸು
ಮರೆಯಾಗು (ಕಿಱದು ಪೊೞ್ತು ಶೋಕಾನುಬಂಧದೊಳ್ ಕೋಪಾನುಬಂಧಮಂ ಸಮರಾನುಬಂಧಮಂತರಿಸಿರ್ದು: ಗದಾಯು, ೪. ೧೩ ವ) ತಡಮಾಡು (ಕೆಲದ ನೆಲದರಸುಮಕ್ಕಳನಲಂಘ್ಯಬಲರಂ ತಗುಳ್ದು ಕಳೆದೊಂದೆಡೆಯೊಳ್ ನೆಲೆವೀಡು ಮಾಡಿ ನಿಮ್ಮಂ ಬಲಭದ್ರಂ ತರಿಸದನಿಸಂತರಿಸುವನೇ: ಪಂಪರಾ, ೬. ೧೭೩)

ಅಂತರೀಪ
ದ್ವೀಪ, ನಡುಗಡ್ಡೆ (ಕರಟಿ ವ್ಯೂಹಾಂತರೀಪಂ ತುರಗಬಲತರಂಗಂ .. .. ಸೈನ್ಯಾರ್ಣವಂ: ಜಗನ್ನಾವಿ. ೧೬. ೬೯)

ಅಂತರೀಯ
ಉಡುಪು, ಸೊಂಟದ ಕೆಳಗೆ ಉಡುವ ವಸ್ತ್ರ (ಗಂಗಾತರಂಗತರಳ ದುಕೂಲ ವಸನಾಂತರೋತ್ತರೀಯಂ: ಶಾಂತಿಪು, ೭. ೧೩ ವ)

ಅಂತರೀಯೋತ್ತರೀಯ
ಸೆರಗು ಮತ್ತು ಉತ್ತರೀಯ (ನಾಭಿವಿಲಂಬಮಾನಲಂಬಸ್ತನವಿಸ್ರಸ್ತ ಅಂತರೀಯೋತ್ತರೀಯ ವೃದ್ಧಧಾತ್ರೀನರ್ತನನಿರೀಕ್ಷಣಜನತಾಜನಿತಹಾಸನಿವಾಸಮುಂ: ಆದಿಪು, ೮. ೩೫ ವ)

ಅಂತರ್ಗತ
ಒಳಕ್ಕೆ ಹೋದ (ಇವಳ್ ಪರಪುರುಷಾಪೇಕ್ಷಣಿಯಕ್ಕುಂ ಎನಿತುಂ ಅಂತರ್ಗತದೊಳ್: ಸುಕುಮಾಚ, ೭. ೨೦)

ಅಂತರ್ಗತ ಕೇವಲಿ
ಒಳಸೇರಿರುವ ಅಂದರೆ ಲೀನವಾದ ಕೇವಲಜ್ಞಾನವುಳ್ಳವನು (ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಜಾನಿಸಿ ಸಕಳ ಕರ್ಮಂಗಳಂ ಕಿಡಿಸಿ ಅಂತರ್ಗತ ಕೇವಲಿಯಾಗಿ ಮೋಕ್ಷಕ್ಕೆವೋದರ್: ವಡ್ಡಾರಾ, ಪು ೭೨, ಸಾ ೧೯)


logo