logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತಪಾಳ
ಗಡಿಕಾಪಿನವರು (ದೇವಮಾತೃಕ ಸಾಧಾರಣಾನೂಪ ಜಾಂಗಳಭೇದಂಗಳುಮಂ ಅಂತಪಾಳಪಾಳಿತದುರ್ಗಪರಿವೃತ ಅಂತಗಳುಂ: ಆದಿಪು, ೮. ೬೩ ವ)

ಅಂತಪ್ಪ
ಅಂತಹ, ಹಾಗಿರುವ (ಅಂಜನಪುಂಜದಂತಪ್ಪ ಮೆಯ್ಯುಂ ಸಿಡಿಲಡೆಸಿದಂತಪ್ಪ ದಾಡೆಯುಂ: ಪಂಪಭಾ, ೮. ೪೨ ವ)

ಅಂತರ
ವ್ಯತ್ಯಾಸ, ಭೇದ (ಕರಿಗಂ ಪರಮಾಣುಗಂ ಂತರಮಾವುದೊ ನಿಮಗಮಸುರವೈರಿಗಮೇ ನಂತರಮಂತೇ: ಪಂಪಭಾ, ೧೦. ೭); ನಡುವಣ ರಂಧ್ರ (ಗವಾಕ್ಷಜಾಳಾಂತರಂಗಳಿಂದಂ ದಿಶಾವಲೋಕನಂ ಗೆಯ್ಯುತ್ತಿರ್ಪನ್ನೆಗಂ: ವಡ್ಡಾರಾ, ಪು.೯೩. ಸಾ.೯); ಮೇರೆ, ಎಲ್ಲೆ (ಮೇರುವೆ ಮಂದಿರೆಯುಂ ಬೀರದ ಬಿಯದಂತರಕ್ಕೆ ಕಿಱದೆಂದು ಚಿಂತಿಪ ಪ್ರಿಯಗಳ್ಳಂ: ಪಂಪಭಾ, ೧. ೪೮); ಸಂಗೀತದ ಒಂದು ಪರಿಭಾಷೆ (ಸಾಮಾನಿಕ ಜನತತಿ ಚೇತೋಮಂ ಪ್ರಾಸಾದಿಕ ಅಂತರ ಆಕ್ಷೇಪಕ ವಿನಿಷ್ಮಾಮಪ್ರವೇಶ ಗಾನರಸಾಮೃತಂ ಎಸೆಗುಂ ಧ್ರುವಪ್ರಯೋಗಾನುಗತಂ: ಅಜಿತಪು, ೫. ೧೦)

ಅಂತರಂಗ
ಮನಸ್ಸು, ಹೃದಯ (ನುಡಿಸಿದನೆನ್ನಂ ನಲ್ಲಂ ಬಿಡಿಸಿದನೆನ್ನಂತರಂತರಂಗದನುತಾಪಮನೊಲ್ದುಡಿಸಿದಂ ಒಳ್ಳುಡೆಯಂ: ಕವಿರಾಮಾ, ೩. ೨೩೪)

ಅಂತರಂಗತಪ
[ಜೈನ] ಪ್ರಾಯಶ್ಚಿತ್ತ ವಿನಯ, ವೈಯಾವೃತ್ಯ, ಸ್ವಾಧ್ಯಾಯ, ವ್ಯುತ್ಸರ್ಗ, ಮತ್ತು ಧ್ಯಾನ ಎಂಬ ಆರು ಪ್ರಕಾರಗಖರುವ ತಪಸ್ಸು (ಅಂತರಂಗತಪಮುಂ ತಮಗೆಯ್ದೆ ಮಹಾತ್ಮರೆಯ್ದಿದರ್ ಚಾರಣೃದ್ಧಿಯಂ: ಕರ್ಣನೇಮಿ, ೨. ೧೦)

ಅಂತರಸ್ಥ
ಒಳಗಿರುವ (ಕ್ಷೀರನೀರಪ್ಲವಾಂತರಸ್ಥಂ ಪೋಲ್ತಂ ಕನಕರುಚಿಯಿಂದಮಾ ಪಳಿಕಿನ ಕೊಡನೊಳಗಿರ್ದ ನಂದದೀವಿಗೆಯಿರವಂ: ಶಾಂತಿಪು, ೧೦. ೪೨)

ಅಂತರಾಂತರ
ನಡುನಡುವೆ (ಆ ಜಂಬೂದ್ವೀಪದ ನಟ್ಟ ನಡುವೆ .. .. ಅಂತರಾಂತರ ನಿರಂತರ ಕಾಂತ ಸೋಮ ಯಮ ವರುಣ ಕುಬೇರ ಪ್ರಮುಖ ಲೋಕಪಾಲಾಭಿಯೋಗ್ಯ ದಿಗ್ಗಜೇಂದ್ರದೇವ ವಿಹಾರ ಪ್ರಾಸಾದಾಭಿರಾಮಮೂ: ಆದಿಪು, ೧. ೪೯ ವ)

ಅಂತರಾಯ
ಅಡ್ಡಿ (ವೈಶಂಪಾಯನ ವೃತ್ತಾಂತಂ ಅಂತರಾಯ ಹೇತುವಾದುದಱಂ ನೀಂ ತಡೆಯದೆ ಬಂದು ಎಮ್ಮ ಮನೋರಥಕ್ಕೆ ಸಾಫಲ್ಯಮಂ ಸಂದಿಪುದು: ಕಾದಂಸಂ, ೬. ೩೭ ವ); [ಜೈನ] ಮೋಕ್ಷಸಂಪಾದನೆಗೆ ಬರುವ ಅಡ್ಡಿ (ಅಧ್ಯಯನಾಂತರಾಯಮಂ ಮಾಡಲೆಂದವರೋದುವ ಆವಾಸದೊಳ್ ಸಂಕ್ಲೇಷಮಾಗೆ: ಆದಿಪು, ೩. ೩೮ ವ)

ಅಂತರಾಯಪಂಚಕ
[ಜೈನ] ದಾನಾಂತರಾಯ, ಲಾಭಾಂತರಾಯ, ಭೋಗಾಂತರಾಯ, ಉಪಭೋಗಾಂತರಾಯ, ವೀರ್ಯಾಂತರಾಯ ಎಂಬ ಐದು ವಿಘ್ನಗಳು (ಅಂತರಾಯಮುಂ ದಾನಲೋಭ ಭೋಗೋಪಭೋಗ ವೀರ್ಯಾಂತರಾಯ ಪ್ರಕಾರದಿಂ ಪಂಚವಿಧಮಕ್ಕುಂ: ಶಾಂತಿಪು, ೧೨. ೧೧ ವ)

ಅಂತರಾಯಮಾಣ
ಅಡ್ಡಿಗಳಿಂದ ಕೂಡಿದ (ಸಕಳವಿಷ್ಟಪ ಪ್ರಣೂತನಂ ಈತನಂ ಅಂತರಾಯಮಾಣ ಪರಮಾನಂದ ಸಮಯದೊಳ್ .. .. ನಿಱಸುವುದುಂ: ಆದಿಪು, ೮. ೮)


logo