logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂತಃಸ್ಫಾರಿತ
ಒಳಗೇ ವಿಕಾಸಗೊಂಡ (ಮನೋಜಲೀಲೆಯಂ ಅವಕರ್ಣಿಸಿ ಕರ್ಣಾಂತವಿಶ್ರಾಂತ ಲೋಚನಂಗಳ್ ಅಂತಃಸ್ಫಾರಿತಂಗಳಾಗೆ ದಿಗವಲೋಕನಂಗೆಯ್ದು: ಮಲ್ಲಿನಾಪು, ೮. ೯೯ ವ)

ಅಂತಕ
ಯಮ (ನಡೆ ಸುರಪತಿ ನಡೆ ಪಾವಕಂ ನಡೆ ಅಂತಕ ನಡೆ ನೃವಾಹ: ಗಿರಿಜಾಕ, ೬. ೯೦)

ಅಂತಕದಿಕ್
ದಕ್ಷಿಣದಿಕ್ಕು (ತೀಡುತಿರ್ದುದು ಇಂತನುಪಮ ಮನ್ಮಥಾಗ್ನಿಬಳ ಕಾರಣಂ ಅಂತಕದಿಕ್‌ಸಮೀರಣಂ: ಕುಸುಮಾಕಾ, ೫. ೫೨)

ಅಂತಕತನಯ
ಯಮನ ಮಗ, ಧರ್ಮರಾಯ (ಅೞ್ಕಱಂ ತನಗೆರ್ದೆಯೊಳ್ ಚೋದಿಸೆ ಪರಸಿದಂ ಆಶೀರ್ವಾದ ಪರಂಪರೆಯಿಂ ಆಗಳ್ ಅಂತಕತನಯಂ: ಪಂಪಭಾ, ೧೩. ೧)

ಅಂತಕನಂದನ
ಯಮನ ಮಗ, ಯುಧಿಷ್ಠಿರ (ಯಾಗವಿಧಿಯಂ ನಿರ್ವರ್ತಿಸಿ ನೆರೆದ ರಾಜಕುಲಮೆಲ್ಲಮಂ ಪೂಜಿಸಿ ವಿಸರ್ಜಿಸಿದಾಗಳ್ ಮುರಾಂತಕಂ ಅಂತಕನಂದನನಂ ಇಂತೆಂದಂ: ಪಂಪಭಾ, ೬. ೬೫ ವ)

ಅಂತಕಸರ್ಪ
ಯಮನೆಂಬ ಹಾವು (ಅಂತಕಸರ್ಪಂ ಕೊಳೆ ಬರ್ದುಕುವನ್ನರಾರ್ ಸಂಸೃತಿಯೊಳ್: ಆದಿಪು, ೩. ೬೫)

ಅಂತಕಾತ್ಮಜ
ಯಮನ ಮಗ, ಧರ್ಮರಾಯ (ಸಮಸ್ತಧಾತ್ರಿಯುಮಂ ಆಳಿಪೆವು ಎಂದುಲಿವಂತೆ ಪಕ್ಕಿಗಳ್ ಚಿಲಿಮಿಲಿಯೆಂಬ ಪೊೞ್ತಱೊಳೆ ಬಂದು ಉಱದೆ ಒಡ್ಡಿದಂ ಅಂತಕಾತ್ಮಜಂ: ಪಂಪಭಾ, ೧೧. ೩೩)

ಅಂತಕಾನನ
ಯಮನ ಬಾಯಿ (ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ ಭೀಮಸೇನಂ ಅಂತಕಾನನಮಂ ಎಯ್ದಿಸಿದಂ: ಪಂಪಭಾ, ೧೩. ೪೧ ವ)

ಅಂತಕಾಲ
ಕೊನೆಗಾಲ, ಸಾವು (ಅಂತು ಗರ್ಭನಿರ್ಭರ ಪ್ರದೇಶದೊಳ್ ಅರಾತಿಗಳ್ಗೆ ಅಂತಕಾಲಂ ದೊರೆಕೊಳ್ವಂತೆ ಪ್ರಸೂತಿಕಾಲಂ ದೊರೆಕೊಳೆ: ಪಂಪಭಾ, ೧. ೧೨೬ ವ)

ಅಂತಕವೈರಿ
ಯಮನ ಶತ್ರು, ಶಿವ ; ಜಿನ (ಅಂತಕನ ಸಾಮ್ಯಮನಂತಕವೈರಿಯಲ್ಲದುಂತಮರ ಮನುಷ್ಯರಾರ್ಪರೇ ನಿರಾಕರಿಸಲ್: ಶಾಂತಿಪು, ೭. ೭೮)


logo