logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಡುಗೊಳ್
ಹತ್ತಿರ ಹೋಗು (ಮೇಖಳಾಕಳಿತ ರುಚಿರ ಲುಳಿತಾಧರಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬಪಂತೆ ಬಂದು: ಪಂಪಭಾ, ೪. ೩೬ ವ); ಆಶ್ರಯಿಸು (ಕುಪ್ಪಳಿಸಿ ತುಱುಗಿ ಪರ್ವಿದ ಱೊಪ್ಪವನಿರದಂಡುಗೊಂಡು ಪಂದಿಯ ಬೞಯೊಳ್: ಗಿರಿಜಾಕ, ೧. ೧೦೩)

ಅಂಡೆ
ಕೊಳವಿ (ಮುಳುಂಗಿ ಮೂಡಿ ಪೊಳೆದಾ ಪೊನ್ನಂಡೆಯಿಂ ಪೊಯ್ದು ಬಾಯ್ದಿರದೀಸಾಡಿ .. .. ಅಂಬುಕೇಳಿವಡೆದರ್ ಪಂಕೇಜಾಕ್ಷಿಯರ್: ರಾಜಶೇವಿ, ೧೦. ೭೨)

ಅಂತ
ಗಡಿ, ಸೀಮೆ (ದೇವಮಾತೃಕ ಸಾಧಾರಣಾನೂಪ ಜಾಂಗಳಭೇದಂಗಳುಮನಂತಪಾಳಪಾಳಿತದುರ್ಗಪರಿವೃತ ಅಂತಗಳುಂ: ಆದಿಪು, ೮. ೬೩ ವ)

ಅಂತಃಕಳಂಕ
ಒಳಗಿನ ಕಳಂಕ (ಕಿಡಿಸುಗುಮಂತಃಕಳಂಕ ನೃಪಮಂಡಲಮಮಂ ತಡೆಯದೆ ತಮಸ್ತ್ವಭಾವಂ: ಕವಿರಾಮಾ, ೩. ೧೪೮)

ಅಂತಂ
ಕೊನೆ, ಮುಗಿವು (ರಾಜಸೂಯಾಂತಂ ಕಳಹಮೆಂಬುದಂ ಬಗೆದು ತಾನುಂ ಕಲಹಪ್ರಿಯನಪ್ಪುದಱಂದಂ ಅನಿತೆ ನುಡಿದು ಮಾಣ್ದ: ಪಂಪಭಾ, ೬. ೧೮ ವ)

ಅಂತಂ ಬರ್
ಕೊನೆಗೊಳ್ಳು (ಆ ಮಧುರಾಕಾರ ಲತಾಕೋಮಳೆ ತನಗಾಗಳ್ ಆಯುರಂತಂ ಬರೆ ಸೌದಾಮಿನಿವೊಲ್ ಭೋಂಕೆನೆ ಸುರಕಾಮಿನಿ ರಂಗದೊಳ್ ಅದೃಶ್ಯೆಯಪ್ಪುದುಂ: ಆದಿಪು, ೯. ೪೧)

ಅಂತಂ ಮಾಡು
ಕೊಲ್ಲು, ಮುಗಿಸಿಬಿಡು (ಅಂಜಲಿಕಾಸ್ತ್ರಮಂ ಅಮೋಘಾಸ್ತ್ರಧನಂಜಯಂ ಆಕರ್ಣಾಂತಂಬರಂ ತೆಗೆದು ಆ ಕರ್ಣಾಂತಂ ಮಾಡಲ್ ಬಗೆದು: ಪಂಪಭಾ, ೧೨. ೨೧೨ ವ)

ಅಂತಃಕೃತ
ಒಳಗೊಂಡ (ನಭೋಮಂಡಳದಂತಂತಃಕೃತ ಭುವನಂ ನಟನಂತೆ ದಿಟಂ ಪ್ರಬಳನಕ್ರಮಕರಸಮೇತಂ: ಚಂದ್ರಪ್ರಪು, ೫. ೪೦)

ಅಂತಃಪುರದಾಸೇರಕ
ಅಂತಃಪುರದ ದಾಸೀಪುತ್ರ (ಅಂತಃಪುರದಾಸೇರಕನನೇಱ ಕಿಂಚಿದಾಕುಂಚಿತಾಗ್ರ ತರ್ಜನೀನಿಶಿತಾಂಕುಶಂ ಅಂತಃಪುರಪ್ರಮದವನವಿಷ್ಟನಾಗಿ: ಆದಿಪು, ೮. ೪೧ ವ)

ಅಂತಃಪ್ರತಿಹಾರಿ
ಅಂತಃಪುರದ ದ್ವಾರಪಾಲಕ (ವಿಚಿತ್ರವೇತ್ರಲತಾಶೋಭಿತತಳಕಮಳೆಯರ್ ಅಂತಃಪ್ರತಿಹಾರಿಯರಾದರ್ ಅಮರಕಾಂತೆಯರರೆಬರ್: ಆದಿಪು, ೭. ೧೪)


logo