logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಜುಳಿ
[ಅಂಜಲಿ] ಬೊಗಸೆ (ನೃಪಂ ಅತಿವ್ಯಗ್ರನಾಗಿ ಮುಖಪ್ರಕ್ಷಾಳನಾರ್ಥಂ ಪೇರಡವಿಯೊಳ್ ಅಂಜುಇಯಿಂ ಜಲಮಂ ತಂದು .. .. ಎಱೆಯೆ: ಕಾದಂಸಂ, ೩. ೪೫ ವ)

ಅಂಟಪರಿಚೆ
ಹಣೆಗೆ ಅಂಟಿಸಿಕೊಳ್ಳುವ ಬಟ್ಟು ? (ತೀವಿದ ಕೊಗ್ಗಿಯ ಕತ್ತುರಿಯುಂ ಕತ್ತುರಿಯೊಳ್ ಅಂಟಪರಿಚೆಯುಂ ಪರಿಚೆಯೊಳ್ ಪರಿಚಯಂಬಡೆದ ಮದವಟ್ಟೆಯುಂ: ಆದಿಪು, ೪. ೪೧ ವ)

ಅಂಟಿಸುಂಟಿ
ಒಂದು ಬೈಗುಳ (ಬೆರಳ್ಗಡಿಕೆಯರಂಟಿಸುಂಟಿ ಸುಡು ಪಂಜೆಗಳೆಂಜಲ ಹಂಜೆಯೆಂದು ಬಯ್ದೊಡನೆತ್ತಿದರ್: ಅನಂತಪು, ೮. ೩೧)

ಅಂಟಿಸು
ಮೆತ್ತು (ಕಂಪಿಪೊಡಲಂಟಿಪ ಧೂಳಿಯೊಱಲ್ವ ನಿಸ್ವನಂ: ಉದ್ಭಟಕಾ, ೪. ೫೯)

ಅಂಟು
ಮುಟ್ಟು; ಜತೆಗೂಡು (ನಿಚಿತ ಮುದದಿಂದೆ ಮುಖಶಶಿರುಚಿಯಂ ಬಿಡದಂಟಿ ಸವಿವೆಂದಗಲದೆ ಸಾರ್ದ ಚಕೋರಂ: ಉದ್ಭಟಕಾ, ೬. ೧೦೭)

ಅಂಟುಗೊಳ್
ಅಂಟಿಕೊ; ನಾಟು (ಬಾಸೆಯೊಳಂಟುಗೊಂಡ ಕಣ್ ತಿವಳಿಯೊಳಂ ಸಿಲ್ಕಿ ಪೋಗಲಾರ್ತುವಿಲ್ಲ: ಕಬ್ಬಿಗಕಾ, ೭೮); ಆಶ್ರಯಿಸು (ನೀರ್ದಾಣಮನಂಟುಗೊಂಡಂದಟರಾಗಳೆ ಬಾಯ್ವಿಡೆ: ಕಬ್ಬಿಗಕಾ, ೧೯೪)

ಅಂಡಕೋಶ
ಬೀಜಕೋಶ, ವೃಷಣ (ಸಮಸಂಕ್ಷಿಪ್ತ ಪ್ರಚ್ಛನ್ನವಾಯುಪ್ರವೇಶನುಂ ಅಪಿಂಜೋತ್ಪನ್ನಾಂಡಕೋಶನುಂ: ಆದಿಪು, ೧೨. ೫೬ ವ)

ಅಂಡಜ
ಮೊಟ್ಟೆಯಿಂದ ಹುಟ್ಟಿದ್ದು (ಫಣಿವಿಹಗಾದ್ಯವೆಲ್ಲಂ ಅಂಡಜಂ: ಅಭಿಧಾವ, ೧. ೩. ೪); ಹಕ್ಕಿ (ಖಗ ಅಂಡಜಂ ಪತತ್ರಿ ಪತಂಗಂವಿಕಿರಂ ಪಕ್ಷಿ: ಅಭಿಧಾವ, ೧. ೯. ೯)

ಅಂಡಲೆ
ಪೀಡಿಸು (ತಮ್ಮಂ ಅಂಡಲೆದು ಬಂಬಣ ಬಾಡಿಸಿ ಬಿಡದೆ ಕಸುಗಾಯ್ದು: ಆಚವರ್ಧ, ೬. ೨೩ ವ); ಕಾಟ (ವಿಯೋಗಿಗೇಂ ಮಾಡದೆ ಪೋಕುಮೇ ಮದನನಂಡಲೆಯಂ ನಗನಂದನಂಗಳೊಳ್; ಶಬರಶಂ, ೧. ೫೨)

ಅಂಡಲೆವಡೆ
ತೊಂದರೆಗೆ ಗುರಿಯಾಗು (ಪರದಾರಾಸಕ್ತನಿಂದಂಡಲೆವಡೆದುದು ತಾನೆಂದು ಕೈಲಾಸಧಾತ್ರೀಧರಮಂ ನಿತ್ಯಂ ನಗುತ್ತಿರ್ದಪುದೆನೆ: ಕುಸುಮಾಕಾ, ೨. ೮೬)


logo