logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಚೆವಱ
ಹಂಸದ ಮರಿ (ಪಾಡುವ ಪಱಮೆಗಳಿಂದೊಲ್ದಾಡುವ ಮುದ್ದಂಚೆವಱಗಳಿಂ: ರಾಜಶೇವಿ, ೧೨. ೨೩)

ಅಂಚೆವಾಳತಿ
ಬಾಣಂತಿ ಹಂಸ (ಮಱಯಂಚೆಯ ಮುದ್ದುಗೆಯ್ತಮುಮನಂಚೆವಾಳತಿಯಾ ಮಱಯೊಳಾದ ಎಱಕಮುಮಂ: ಮಲ್ಲಿನಾಪು, ೪. ೧೩ ವ)

ಅಂಚೆವಿಂಡು
ಹಂಸದ ಹಿಂಡು (ರಮಣಿಯರ ನೂಪುರರಣಿತಕ್ಕೆಳಸಿ ಬರ್ಪ ಅಂಚೆವಿಂಡಿನಿಂಚರದೊಳಂ: ಕಾದಂಬ, ೧. ೫೮ ವ)

ಅಂಜನ
ಕಾಡಿಗೆ (ಆ ರಥದೊಳ್ ಒಡಂಬಡೆ ಪೂಡಿದ ನಾಲ್ನೂಱು ಗೊಂಕುಱುಗೞ್ತೆಯುಂ ಅಂಬರಸ್ಥಲಮನಡರ್ವ ಗೃಧ್ರಧ್ವಜಮುಂ ಅಂಜನಪುಂಜದಂತಾಗಿ: ಪಂಪಭಾ, ೧೨. ೭ ವ); ಲೇಪನ

ಅಂಜನಚೋರ
ಅಂಜನ ಹಚ್ಚಿಕೊಂಡು ಕಳ್ಳತನ ಮಾಡುವವನು (ಅಂಜನಚೋರಂ ಘುಟಿಕಾಪ್ರಯೋಗದಿಂದೃಶ್ಯ ರೂಪದಿಂ ಪೋಗಿ ಕಳ್ದು ತಂದು: ಧರ್ಮಾಮೃ, ೨. ೭೫ ವ)

ಅಂಜನದಿಕ್
ಪಶ್ಚಿಮ (ಅಂತು ಅಂಜನದಿಕ್ ಕುಂಜರದಂತೆ ಬರುತಿರ್ಪುದುಂ: ಪಂಪರಾ, ೮. ೩೮ ವ)

ಅಂಜನಪುಂಜ
ಕಾಡಿಗೆಯ ಮುದ್ದೆ (ಅಂಜನಪುಂಜದಂತಪ್ಪ ಮೆಯ್ಯುಂ ಸಿಡಿಲಂ ಅಡಸಿದಂತಪ್ಪ ದಾಡೆಯುಂ ಉರಿಯ ಉರುಳಿಯಂತಪ್ಪ ಕಣ್ಣುಂ ಕೃತಾಂತನಂತೆ ಆಕಾರಮಾಗಿ: ಪಂಪಭಾ, ೪. ೪೨ ವ)

ಅಂಜನಸಿದ್ಧ
ಅಂಜನ ಹಚ್ಚಿಕೊಂಡು ಅದ್ಭುತ ಕೆಲಸ ಮಾಡುವವನು (ಕೊಂದಂ ಕೊಲ್ವಂತೆ ರಸಮನಂಜನಸಿದ್ಧಂ: ಶಬ್ದಮದ, ೨೪೮ ಪ್ರ)

ಅಂಜನಾತನಯ
ಆಂಜನೇಯ (ಪತಿಹಿತಂ ಅಂಜನಾತನಯಂ ಆ ಪವನಾತ್ಮಜನಿಂ ಖಗೇಶ್ವರಂ ಪತಿಹಿತಂ ಆ ಮರುತ್ತನಯನಿಂ ಖಗರಾಜಂ ಅರ್ಕನಂದನಂ ಪತಿಹಿತಂ: ಪಂಚತಂತ್ರ, ೪೪೭)

ಅಂಜನಿಸು
ತಿರಸ್ಕರಿಸು (ತರಳಮುಕ್ತಾವತಂಸಪ್ರಭಾ ಪಲ್ಲವಮಾಕಾರಂ ಸ್ಮರಾಕಾರಮಂ ಅಂಜನಿಸೆ: ಪಂಪರಾ, ೨. ೩)


logo