logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಗಿಕೆ
ಅಂಗಿ, ಕವಚ (ಮುತ್ತಿನ ಸರಮಂ ತನ್ನ ಕೊರಲೊಳ್ ಕೋದರಸಂಗೆ ಪೂವಿನ ಅಂಗಿಕೆಯಂ ತುಡಿಸಿ: ಲೀಲಾವತಿ, ೧೦. ೯೭ ವ)

ಅಂಗುಟ
ಕಾಲಿನ ಹೆಬ್ಬೆರಳು (ತಪೋಬಲವೃದ್ಧಿಯಿಂದಾ ಪರ್ವತಮನೆಡದ ಪಾದದಂಗುಟದ ಕೊನೆಯಿಂದೊಯ್ಯನೆ ಒತ್ತುವುದುಂ: ಪುಣ್ಯಾಸ್ರ: ೫. ೫೬ ವ)

ಅಂಗುಲಿಕ್ರಿಯೆ
ಬೆರಳಿನಿಂದ ಮಾಡುವ ಕೆಲಸ (ಬೆರಂಟು ಅಂಗುಲಿಕ್ರಿಯಾಯಾಂ: ಶಬ್ದಮದ, ಧಾ ೨೫೫)

ಅಂಗುಲಿಪ್ರಹರಣ
ಬೆರಳಿಂದ ಹೊಡೆಯುವುದು (ಅಣೆ ಅಂಗುಲಿಪ್ರಹರಣೇ: ಶಬ್ದಮದ, ಧಾ. ೩೬೭)

ಅಂಗುಲೀ
ಬೆರಳು (ಗೌರೀಪಾದಾಂಗುಲೀ ಕೋರಕಂ ಎಸೆವ ಕರಂ ಪಲ್ಲವಂ: ಗಿರಿಜಾಕ, ೧. ೨)

ಅಂಗುಲೀಯ
ಉಂಗುರ (ರತ್ನಾಂಗುಲೀಯಮಂ ಅಂಗುಳಿಯಿಂದುರ್ಚಿ ಬಿರ್ದುದನಱಯದೆ ಗಂಧಾಕ್ಷತ ಕುಸಮತಾಂಬೂಲ ಸ್ರಗ್ವಿಳಾಸಾಲಂಕೃತನಾಗಿ: ಸುಕುಮಾಚ, ೩. ೪ ವ)

ಅಂಗುಳ್
ಕಿರುನಾಲಗೆಯ ಪ್ರದೇಶ (ಅಂಗುಳ್ಮುಟ್ಟದೆ ಜಗಮಂ ನುಂಗುವ ಲಯಕಾಲಕಾಲನಾರಭಟೆಯುಂ: ಜಗನ್ನಾವಿ, ೧೨. ೪೮)

ಅಂಗುಳಿ
ಆನೆಯ ಸೊಂಡಿಲ ತುದಿ (ಮೃದುದೀರ್ಘವಿಸ್ತೃತ ಅಂಗುಳಿಯುಂ .. .. ಸಪ್ತದ್ವಾಸ್ಥಿತನುವುಮಪ್ಪ ವಿಜಯ ಪರ್ವತಗಜೇಂದ್ರಂ ಬಂದು ಮುಂದೆ ನಿಲ್ವುದುಂ: ಆದಿಪು, ೧೨. ೫೬ ವ); ಬೆರಳು (ಬಗೆ ಮತ್ತೊಂದೆನೆಯುಂ ಗೆಯ್ವೊಗಂ ಇತ್ತೊಂದೆನೆಯುಂ ಅಂಗುಳೀ ನಖಚಯಕಾಂತಿಗಳಂ ಅವಟಯ್ಸಿ ಸಲೆ ಪಾಸಗಯದೆಸೆದೆಸೆ ಪೊರಳ್ಚಿದಂ ಮತ್ತೊರ್ವಂ: ಶಾಂತಿಪು, ೫. ೧೦೫)

ಅಂಗುಳಿತ್ರಾಣ
ಬೆರಳ ಕಾಪು (ಬದ್ಧ ಗೋಧಾಂಗುಳಿತ್ರಾಣ ಯೋಧಸಿಂಧುರಘಟಾ ಸಂಘಟ್ಟಮುಂ: ಆದಿಪು, ೧೪. ೯೩ ವ)

ಅಂಗುಳೀಯಕ
ಉಂಗುರ (ಪೂರ್ಣಹಸ್ತಾಕೃತಿಯಿಂ ಮಧುಬಿಂದು ಪೂರ್ಣಮೆಸದುದು ಮಧುಕರ ನೀಲಾಂಗುಳೀಯಕಂ ಕೋಕನದಂ: ಮಲ್ಲಿನಾಪು, ೫. ೩)


logo